https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಏನಪ್ಪಾ, ಇಷ್ಟೊಂದು ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದವರಿಗೆ, ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವಾರವಿಡೀ ಚಿನ್ನ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದ ದರ ಏರಿಕೆ, ಇದೀಗ ವಾರದ ಆರಂಭದಲ್ಲಿ ಗುಡ್ ನ್ಯೂಸ್ ಕೊಟ್ಟಿದೆ. ಕೊನೆಗೂ ಚಿನ್ನದ ಬೆಲೆ ಇಳಿಕೆಯಾಗಿದೆ.
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ₹15,644 ರೂ. ನಿನ್ನೆ 15,775 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹131 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,25,152 ರೂ. ಆಗಿದ್ದು, ನಿನ್ನೆ ₹1,26,200 ರೂ. ಇತ್ತು. ನಿನ್ನೆಗಿಂತ ಇಂದು 1,048 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,56,440 ರೂ. ಆಗಿದ್ದು, ನಿನ್ನೆ ₹1,57,750 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 1,310 ರೂ. ಇಳಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 15,64,400 ರೂ. ಆಗಿದ್ದು, ನಿನ್ನೆ 15,77,500 ರೂ. ಇತ್ತು. ಒಂದೇ ದಿನದಲ್ಲಿ 13,100 ರೂ. ಇಳಿಕೆ ಕಂಡಿದೆ.
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,733 ರೂ. ಆಗಿದ್ದು, ನಿನ್ನೆ ₹11,831 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 98 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹93,864 ರೂ. ಆಗಿದ್ದು, ನಿನ್ನೆ 94,648 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 784 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 1,17,330 ರೂ. ಆಗಿದ್ದು, ನಿನ್ನೆ 1,18,310 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 980 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,73,300 ರೂ. ಆಗಿದ್ದು, ನಿನ್ನೆ 11,83,100 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 9,800 ರೂ. ಇಳಿಕೆಯಾಗಿದೆ.
ಇತ್ತ ಬೆಳ್ಳಿ ದರವೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹268 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹7 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,144 ರೂ.ಗೆ ತಲುಪಿದ್ದು, ನಿನ್ನೆಯಷ್ಟೇ ₹2,200 ರೂ. ಇತ್ತು. ನಿನ್ನೆಗಿಂತ ಇಂದು ₹56 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹2,680 ರೂ., 100 ಗ್ರಾಂ ಬೆಳ್ಳಿ ದರ ₹26,800 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,68,000 ರೂ. ತಲುಪಿದೆ.
https://www.newsics.com/2026/02/16/bomb-threat-email-sent-to-courts-in-3-districts-of-the-state/