Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಡಾರ್ಕ್ ಫ್ಯಾಕ್ರ್ಟಿಯಲ್ಲಿ ರೋಬೋಟ್‌ಗಳದ್ದೇ ಕಾರುಬಾರು?
ದೇಶಪ್ರಮುಖ

ಡಾರ್ಕ್ ಫ್ಯಾಕ್ರ್ಟಿಯಲ್ಲಿ ರೋಬೋಟ್‌ಗಳದ್ದೇ ಕಾರುಬಾರು?

Share
2 Min Read
SHARE

https://youtube.com/shorts/74VSpekXhn4?si=vijWxjVUFibUVb68

Subscribe ನ್ಯೂಸಿಕ್ಸ್ ಕನ್ನಡ

newsics.com

ಕಾಂಚೀಪುರಂ:  ಈ ಫ್ಯಾಕ್ರ್ಟಿಯಲ್ಲಿ   ರೋಬೋಟ್‌ಗಳು ಸಮಯದ ಹಂಗಿಲ್ಲದೇ 5-6 ವರ್ಷದಿಂದ ಕೆಲಸ ಮಾಡುತ್ತಿರುವ ಘಟನೆ ತಮಿಳುನಾಡಿನಲ್ಲಿ ಕಾಂಚೀಪುರಂ ನಡೆದಿದೆ.

ಹೌದು   ‘ಪಾಲಿಮ್ಯಾಟೆಕ್’ ಎಂಬ ಸೆಮಿಕಂಡಕ್ಟರ್‌ ಉತ್ಪಾದಕ ಈ ಕಾರ್ಖಾನೆಯಲ್ಲಿ ಕೆಲವೇ ಕೆಲವು ಎಂಜಿನಿಯರ್‌ಗಳು ಇಡೀ ದಿನದಲ್ಲಿ ಕೆಲವೇ ಕೆಲವು ಹೊತ್ತು ಮಾತ್ರವೇ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಾರೆ. ದೇಶದ ಈ ಏಕೈಕ ಡಾರ್ಕ್ ಫ್ಯಾಕ್ರ್ಟಿಯಲ್ಲಿ ರೋಬೋಟ್‌ಗಳದ್ದೇ ಕಾರುಬಾರು. ಅವುಗಳು ವಿಶ್ರಾಂತಿಯೇ ಇಲ್ಲದೆ ಇಡೀ ದಿನ ಯಾಂತ್ರಿಕವಾಗಿ ಕೆಲಸ ಮಾಡುತ್ತಿರುತ್ತವೆ.

ಕತ್ತಲ ಕೋಣೆಯಂತಿರುವ ಈ ಕಾರ್ಖಾನೆಯಲ್ಲಿ ಕಾಣಿಸುವುದು ಹಸಿರು, ನೀಲಿ, ಕೆಂಪು ಬಣ್ಣದ ಯುವಿ ಕಿರಣಗಳು, ಕೇಳುವುದು ಅವುಗಳ ಬೀಪ್‌ ಸದ್ದು ಮಾತ್ರ. ಈ ಬಣ್ಣ ಮತ್ತು ಸದ್ದುಗಳನ್ನೇ ಬಳಸಿಕೊಂಡು ಪರಸ್ಪರ ಸಹಯೋಗದಿಂದ ರೋಬೋಟ್‌ಗಳು ಬಿಡುವಿಲ್ಲದೆ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ.ಗಳಿಗೆ ಸೆಮಿಕಂಡಕ್ಟರ್‌ ಮತ್ತು ಸರ್ಕಿಟ್‌ ಬೋರ್ಡ್‌ ಜೋಡಿಸುತ್ತಿರುತ್ತವೆ.

ಇಲ್ಲಿ ಮನುಷ್ಯರ ಕೆಲಸ, ಚಿಪ್‌ ತಯಾರಾಗುವ ಪ್ರದೇಶವನ್ನು ಸ್ವಚ್ಛತೆ, ಯಂತ್ರಗಳ ಪರಿಶೀಲನೆ, ಸ್ಟಾಕ್ ಎಣಿಕೆ, ನಿರ್ವಹಣೆ ಇತ್ಯಾದಿ. ಇದಕ್ಕೆ ತಗುಲುವುದು ಕೆಲ ಗಂಟೆಗಳಷ್ಟೇ. ಉಳಿದಂತೆ ಉತ್ಪಾದನೆಯನ್ನು ಮೇಲ್ವಿಚಾರಣೆ, ಸಂಶೋಧನೆ, ಖಾತೆ ನಿರ್ವಹಣೆ, ಮಾರ್ಕೆಟಿಂಗ್, ಭದ್ರತೆ, ಆಡಳಿತಗಳಂತಹ ಕಾರ್ಯಗಳನ್ನು ಸಿಬ್ಬಂದಿ ಮಾಡುತ್ತಾರೆ.

ಪಾಲಿಮ್ಯಾಟೆಕ್‌ನ ನಿರ್ದೇಶಕ ವಿಶಾಲ್‌ ನಂದಂ ಅವರನ್ನು ಕೇಳಿದರೆ, ‘ಅಭಿಯಂತರರು ಕೆಲಸ ಮಾಡುವುದು ಬೇಡ. ಅವರು ಸುಮ್ಮನೆ ಕುಳಿತಿರಲಿ. ಕೆಲಸವೇನಿದ್ದರೂ ಯಂತ್ರಗಳು ಮಾಡಲಿ’ ಎನ್ನುತ್ತಾರೆ. ಈ ಮಾತನ್ನು ನಿಜ ಮಾಡಿರುವ ಅವರ ಈ ಕಂಪನಿಯಲ್ಲಿ ರೋಬೋಟ್‌ಗಳು ಶಿಫ್ಟ್‌, ವಿರಾಮ ಇಲ್ಲದೆ ಇಡೀ ದಿನ ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಇವುಗಳಿಗೆ ವಿಶ್ರಾಂತಿ ಸಿಗುವುದು ವರ್ಷದಲ್ಲೊಮ್ಮೆ, ಅದೂ ಬರೀ ಅರ್ಧ ಗಂಟೆ!

ವಿಶ್ವದ ಪ್ರಥಮ ಡಾರ್ಕ್‌ ಫ್ಯಾಕ್ಟರಿ ಎಫ್‌ಎಎನ್‌ಯುಸಿ ಇರುವುದು ಜಪಾನ್‌ನಲ್ಲಿ. ಇದು ಸ್ಥಾಪನೆಯಾಗಿದ್ದು 2001ರಲ್ಲಿ. ಭಾರತದಲ್ಲಿ ಮೊತ್ತಮೊದಲ  ಭಾರೀ ಸಂಖ್ಯೆಯಲ್ಲಿ ರೋಬೋಟ್‌ಗಳನ್ನು ಬಳಸಲು ಮುಂದಾಗಿದ್ದು ರಾಯಲ್‌ ಎನ್‌ಫೀಲ್ಡ್‌.

ಮಾನವನ ಹಸ್ತಕ್ಷೇಪ ಇಲ್ಲದೆಯೇ ಪೂರ್ಣ ರೋಬೋಟ್‌ಗಳ ಮೂಲಕ ನಿರ್ವಹಿಸುವ ಫ್ಯಾಕ್ಟರಿಗಳನ್ನು ಡಾರ್ಕ್‌ ಫ್ಯಾಕ್ಟರಿ ಎನ್ನುತ್ತಾರೆ. ಇಲ್ಲಿ ರೋಬೋಟ್‌ಗಳ ಕಾರ್ಯನಿರ್ವಹಣೆಗೆ ಬೆಳಕಿಗೆ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇವುಗಳಿಗೆ ಡಾರ್ಕ್‌ ಫ್ಯಾಕ್ಟರಿ ಎಂಬ ಹೆಸರು ಬಂದಿದೆ.

https://www.newsics.com/2026/02/16/wife-recovers-rs-3000-given-by-husband-for-vote/

TAGGED:Are robots driving cars in a dark factory?
Share This Article
Facebook Twitter Copy Link Print
Previous Article ಪತಿಯು ಮತಕ್ಕಾಗಿ ನೀಡಿದ್ದ 3000 ರು. ಹಣವನ್ನು ಮರುವಸೂಲಿ ಮಾಡಿದ ಪತ್ನಿ
Next Article ತಟ್ಟೆ ಬಿದ್ದು ಅನ್ನ ಚೆಲ್ಲಿದ್ದಕ್ಕೆ ಬೈದ ತಾಯಿ – ಮನನೊಂದು 7ನೇ ತರಗತಿ ಬಾಲಕಿ ಆತ್ಮ*ಹತ್ಯೆ!

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?