https://youtube.com/shorts/11hvM0bsJ2E?si=Q5TtqzkdIZKrnxiz
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು ಅಥವಾ ಮಹಾ ನಗರಗಳಲ್ಲಿ ಬಜ್ಜಿ, ಬೋಂಡ ಮಾರುವುದು, ಗೋಲಗಪ್ಪ, ಪಾನಿಪುರಿ ಮಾರುವುದನ್ನು ನೋಡಿ, ಸಣ್ಣ ವ್ಯಾಪಾರ ಅಂದುಕೊಳ್ಳಬೇಡಿ, ಇದರಲ್ಲೇ ಲಾಭ ಇರೋದು ಎನ್ನೋದಿಕ್ಕೆ ಶ್ರವಣಬೆಳಗೊಳದ ವ್ಯಕ್ತಿಯೋಬ್ಬರು ಉದಾಹರಣೆ ಆಗಿದ್ದಾರೆ.
ನಿಜಕ್ಕೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವುದು ಎಂದರೆ ಅದು ಕೇವಲ ಹೊಟ್ಟೆಪಾಡಲ್ಲ, ಅದೊಂದು ಅಘೋಷಿತ ‘ಸ್ಟಾರ್ಟ್‌ಅಪ್’ ಎಂದು ಹೇಳಬಹುದು.
ಬೆಂಗಳೂರಿನಲ್ಲಿ ರಸ್ತೆಬದಿಯಲ್ಲಿ ಪಾನಿಪೂರಿ ಮಾರಿದ ವ್ಯಕ್ತಿಯೋರ್ವ, ಇಂದು ತಮ್ಮ ಊರಿನಲ್ಲಿ ಭವ್ಯವಾದ ಡುಪ್ಲೆಕ್ಸ್ ಮನೆ ನಿರ್ಮಾಣ ಮಾಡಿದ್ದಾರೆ. ಈ ಮನೆ ನೋಡಿ ಅನೇಕರು ಶಾಕ್ ಆಗಿದ್ದಾರೆ.
ಮನೆ ಹೇಗಿದೆ?
ಇದು ಡುಪ್ಲೆಕ್ಸ್ ಮನೆ ಆಗಿದ್ದು, ಕಾರ್ ನಿಲ್ಲಿಸಲು ಜಾಗ ಕೂಡ ಇದೆ. ಕೆಳಗಡೆ ಒಂದು ರೂಮ್, ಹಾಲ್, ಕಿಚನ್, ಮೇಲೆ ಎರಡು ರೂಮ್‌ಗಳು ಇವೆ. ಅಷ್ಟೇ ಅಲ್ಲ, ಇನ್ನೊಂದು ಚಿಕ್ಕ ರೂಮ್ ಇದೆ. ಈ ಮನೆಯನ್ನು ಕಟ್ಟಲು ಒಟ್ಟೂ 35 ಲಕ್ಷ ರೂಪಾಯಿ ಆಗಿದೆ. ಪಾನಿಪುರಿಯಿಂದಲೇ ಇಷ್ಟು ಹಣ ಸಂಪಾದನೆ ಮಾಡಿದ್ದಕ್ಕೆ ಪಾನಿಪುರಿ ನಿಲಯ ಎಂದು ಹೆಸರು ಇಡಲಾಗಿದೆಯಂತೆ.
ಇದು ನಿಜಕ್ಕೂ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಬಹುದು. ಮಹಾನಗರದಲ್ಲಿ ಬೀದಿ ಬದಿಯಲ್ಲಿ ನಿಂತು ವ್ಯಾಪಾರ ಮಾಡುವುದು ಕೂಡ ಸುಲಭ ಇಲ್ಲ. ಧೂಳು, ಆಯಾಸ, ಸೆಕೆ, ಮಳೆ ಎಂದು ಅನೇಕ ಸಮಸ್ಯೆಗಳಿದ್ದರೂ, ಅದನ್ನೆಲ್ಲ ಮೀರಿ ವ್ಯಾಪಾರ ಮಾಡಬೇಕು. ಬೆಳಗ್ಗೆಯಿಂದ ಪಾನಿಪುರಿ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕು. ಆಮೇಲೆ ಸಂಜೆ ಹೊತ್ತಿಗೆ ಗ್ರಾಹಕರು ಬರುತ್ತಾರೆ, ಸ್ವಲ್ಪವೂ ಕಾಯಿಸದೆ, ಅವರಿಗೆ ಪಾನಿಪುರಿ ಕೊಡಬೇಕು. ಈ ಕಷ್ಟಗಳಿಗೆ ಶ್ರಮ ಸಿಕ್ಕಿದೆ ಎನ್ನಬಹುದು.
ಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಾಲೀಲೆ ವಿಡಿಯೋ ಲೀಕ್