https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 9 ಶಾಲೆಗಳಿಗೆ ಮತ್ತೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಕರೆ ಬಂದಿದೆ. ಇಂದು ಬೆಳಿಗ್ಗೆ 8:30ರಿಂದ 9 ಗಂಟೆ ಸುಮಾರಿಗೆ ದೆಹಲಿಯ ವಿವಿಧ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸರು ಶಾಲೆಗಳಿಗೆ ದೌಡಾಯಿಸಿ ವಿದ್ಯಾರ್ಥಿಗಳನ್ನು, ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಹೊರ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.
ಜಸ್ಪಾಲ್ ಕೌರ್ ಶಾಲೆ, ಅಶೋಕ್ ವುಹಾರ್ ನ ಮಾತಾ ಜೈ ಕೌರ್ ಶಾಲೆ, ರೋಹಿಣಿ ವಿಹಾರ್ ಶಾಲೆ, ಲೊರೆಬೊ ಕಾನ್ವೆಂಟ್, ಶ್ರೀನಿವಾಸನ್ ಪುರಿ,ಕೇಂಬ್ರಿಡ್ಜ್ ಶಾಲೆ, ರೋಹಿಣಿ ಪ್ರದೇಶದ ವೆಂಕಟೇಶ್ವರ ಶಾಲೆ, ಕೆಂಬ್ರಿಡ್ ಸ್ಕೂಲ್, ಎನ್ ಎಫ್ ಸಿ ಶಾಲೆ, ಲೋಧಿ ರಸ್ಯೆಯ ಏರ್ ಫೋರ್ಸ್ ಶಾಲೆ, ಇಂಡಿಯನ್ ಸ್ಕೂಲ್ ಸೇರಿದಂತೆ ಒಟ್ಟು 9 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಶಾಲೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
https://www.newsics.com/2026/02/09/attempted-rape-of-woman-by-foreign-youths/