https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ:ಬಿಜೆಪಿಯಿಂದಾಗಿ ಆರ್‌ಎಸ್‌ಎಸ್‌ಗೆ ಒಳ್ಳೆಯ ದಿನಗಳು ಬಂದಿಲ್ಲ. ಸ್ವಯಂ ಸೇವಕರ ಪರಿಶ್ರಮ ಹಾಗೂ ಸೈದ್ಧಾಂತಿಕ ಬದ್ಧತೆಯಿಂದಾಗಿ ಸಂಘಕ್ಕೆ ಒಳ್ಳೆಯ ದಿನಗಳು ಬಂದಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ RSSಗೆ ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬಂದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ. ಅದು ಬೇರೆ ದಾರಿ, ನಾವು ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಗಿದೆ ಎಂದರು.
100 ವರ್ಷಗಳಲ್ಲಿ ಕಮ್ಯುನಿಸ್ಟರ ನೆಲೆ ಏಕೆ ಬೆಳೆದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಒಂದು ವೇಳೆ ಕೇಳಿದರೆ ಅವರಿಗೆ ಆರ್ ಎಸ್ ಎಸ್ ಮಾರ್ಗದರ್ಶನ ನೀಡಬಹುದು. ಆರ್‌ಎಸ್‌ಎಸ್ ಯುವ ಸಂಘಟನೆಯಾಗಿದ್ದು, ಸರಾಸರಿ ವಯಸ್ಸು 28. ಅದನ್ನು 25ಕ್ಕೆ ಇಳಿಸಲು ಬಯಸಿರುವುದಾಗಿ ಎಂದು ಅವರು ಹೇಳಿದರು.
https://www.newsics.com/2026/02/09/income-tax-act-to-be-implemented-across-the-country-from-april-1/