Subscribe ನ್ಯೂಸಿಕ್ಸ್ ಕನ್ನಡ
newsics.com
ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರಿಬ್ಬರು ನಡುರಸ್ತೆಯಲ್ಲಿ ಕುಡಿದು ರಂಪಾಟ ಮಾಡಿ,ನಶೆಯಲ್ಲಿ ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕೋರಮಂಗಲದ ಲೀಸಾ ಮತ್ತು ಜೆಪಿ ನಗರದ ಮ್ಯಾಥ್ಯೂ ಎಂಬ ಇಬ್ಬರು ಯುವತಿಯರು ರಾತ್ರಿ ಸ್ನೇಹಿತರ ಜೊತೆ ಖಾಸಗಿ ಹೋಟೆಲ್ಗೆ ಬಂದಿದ್ದರು.
ಹೋಟೆಲ್ನಿಂದ ಹಿಂದಿರುಗಿ ತೆರಳುವಾಗ ಹುಳಿಮಾವು ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಕಾರ್ಗೆ ಹಿಂದಿನಿಂದ ತಮ್ಮ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಕಾರ್ ಚಾಲಕನ ಮೇಲೆಯೇ ಯುವತಿಯರು ಹಲ್ಲೆ ಮಾಡಲು ಮುಂದಾಗಿದ್ದಾರೆ.
ಓರ್ವ ಯುವತಿ ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಯುವತಿಯರನ್ನು ತಡೆದಿದ್ದಾರೆ. ನಶೆಯ ಮತ್ತಿನಲ್ಲಿದ್ದ ಯುವತಿಯರು, ಚಾಲಕ ಸೇರಿದಂತೆ ಸ್ಥಳೀಯರನ್ನು ಸಹ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವತಿಯರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಇಬ್ಬರು ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
https://www.newsics.com/2026/02/08/ips-officer-threatens-not-to-present-key-file/