https://youtube.com/shorts/kv9in5qxZnE?si=PN7byw9veLqq499c
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು ಕೆಫೆ ಸಿಬ್ಬಂದಿ ಗ್ರಾಹಕರು ಟಿಪ್ ನೀಡಿದಾಗಲೆಲ್ಲಾ ತ್ವರಿತ ನೃತ್ಯ ಮಾಡುವ ಮೂಲಕ ಗ್ರಾಹಕರನ್ನು ಖುಷಿಪಡಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿರುವ ಕೆಫೆ ನುವಿಯೊದಲ್ಲಿ, ಕೌಂಟರ್ ಬಳಿ ಇರಿಸಲಾದ ಸಣ್ಣ ಫಲಕವು ಗ್ರಾಹಕರ ಗಮನ ಸೆಳೆದಿದೆ. ಇಲ್ಲಿ ನೀವು ಟಿಪ್ಸ್ ಬಾಕ್ಸ್‌ಗೆ ಹಣ ಹಾಕಿದರೆ ಸಾಕು, ಅಲ್ಲಿನ ಸಿಬ್ಬಂದಿ ನಿಮಗಾಗಿ ಕುಣಿದು ಖುಷಿ ಪಡಿಸುತ್ತಾರೆ. ಕೆಫೆಯ ಕೌಂಟರ್ ಮೇಲೆ ಒಂದು ಸಣ್ಣ ಫಲಕವನ್ನು ಹಾಕಲಾಗಿದ್ದು, ಅದರಲ್ಲಿ “ನೀವು ಟಿಪ್ಸ್ ಕೊಟ್ಟರೆ , ಸಿಬ್ಬಂದಿ ನಿಮಗಾಗಿ ನೃತ್ಯ ಮಾಡುತ್ತಾರೆ” ಎಂದು ಬರೆಯಲಾಗಿದೆ.
ಗ್ರಾಹಕರು ಖುಷಿಯಿಂದಲೋ ಟಿಪ್ಸ್ ನೀಡಿದ ತಕ್ಷಣ, ಅಲ್ಲಿನ ಸರ್ವರ್‌ಗಳು ಕೆಲಸದ ನಡುವೆಯೇ ಹೆಜ್ಜೆ ಹಾಕಲು ಆರಂಭ ಮಾಡುತ್ತಾರೆ. ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಗ್ರಾಹಕರೊಬ್ಬರು ಟಿಪ್ಸ್ ನೀಡಿದ ಕೂಡಲೇ ಸಿಬ್ಬಂದಿಗಳು ಪರಸ್ಪರ ಕಣ್ಣ ಸನ್ನೆ ಮೂಲಕ ಕೌಂಟರ್ ಹತ್ತಿರವೇ ನೃತ್ಯ ಮಾಡುವುದನ್ನು ಕಾಣಬಹುದು. ಇದನ್ನು ಕಂಡು ಅಲ್ಲಿದ್ದ ಜನರು ಸಂಭ್ರಮಿಸಿದ್ದಾರೆ. ಸದ್ಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಬಳಕೆದಾರರೊಬ್ಬರು ಇದು ಕೆಲಸದ ನಡುವೆ ಸಂತೋಷವನ್ನು ಹೆಚ್ಚಿಸುವ ಕೆಲಸ ಎಂದಿದ್ದಾರೆ. ಮತ್ತೊಬ್ಬರು ಈ ಕೆಫೆಯಲ್ಲಿ ಒಂದು ಸುಂದರ ಅನುಭವ ಎಂದು ಬರೆದುಕೊಂಡಿದ್ದಾರೆ.
https://www.instagram.com/reel/DUCc6kuEo_q/?igsh=aXRzcDNyNzNrZGVz