https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಸಾಮಾಜಿಕ ಕಳಕಳಿ ಹಾಗೂ ಸಂವಿಧಾನದ ಮೌಲ್ಯಗಳನ್ನು ಸಾರುವ ಕನ್ನಡದ ಬಹುನಿರೀಕ್ಷಿತ ಚಿತ್ರ ‘ಲ್ಯಾಂಡ್ಲಾರ್ಡ್’ ಗೆ ರಾಜ್ಯದಾದ್ಯಂತ ಈ ಚಿತ್ರದ ಪ್ರದರ್ಶನಕ್ಕೆ ಮುಂದಿನ ಆರು ತಿಂಗಳ ಕಾಲ ಶೇಕಡ100ರಷ್ಟುರಾಜ್ಯಸರಕುಮತ್ತುಸೇವಾತೆರಿಗೆ ವಿನಾಯಿತಿ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಜಮೀನ್ದಾರಿ ವ್ಯವಸ್ಥೆಯ ವಿರುದ್ಧದ ಹೋರಾಟ, ಭೂಹೀನ ಕಾರ್ಮಿಕರ ಸಂಕಷ್ಟ ಹಾಗೂ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಚಿತ್ರವು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಆದೇಶದ ಪ್ರಮುಖ ಅಂಶಗಳು:
ಅವಧಿ: 05 ಫೆಬ್ರವರಿ 2026 ರಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳವರೆಗೆ ಈ ಸೌಲಭ್ಯ ಲಭ್ಯವಿರುತ್ತದೆ.
ಟಿಕೆಟ್ದರಕಡಿತ: ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರು ಪ್ರೇಕ್ಷಕರಿಂದ ಯಾವುದೇ ಎಸ್‌ಜಿಎಸ್‌ಟಿ (SGST) ಮೊತ್ತವನ್ನು ಪಡೆಯುವಂತಿಲ್ಲ. ತೆರಿಗೆ ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್ ಮಾರಾಟ ಮಾಡಬೇಕು.
ಟಿಕೆಟ್ಮೇಲೆಮಾಹಿತಿ: ಮಾರಾಟ ಮಾಡುವ ಟಿಕೆಟ್ ಮೇಲೆ “ಕರ್ನಾಟಕಸರ್ಕಾರದಆದೇಶದನ್ವಯರಾಜ್ಯಜಿಎಸ್‌ಟಿಯನ್ನುಸಂಗ್ರಹಿಸಿರುವುದಿಲ್ಲ“ ಎಂಬ ಬರಹವು ಎದ್ದು ಕಾಣುವಂತೆ ಇರಬೇಕು.
ವಿದ್ಯಾರ್ಥಿಗಳಿಗೆಪೂರಕ: ಈ ಚಿತ್ರವು ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಸಂವಿಧಾನಾತ್ಮಕ ಜಾಗೃತಿ ಮೂಡಿಸಲು ಅಗತ್ಯವಾಗಿರುವುದರಿಂದ ಈ ವಿನಾಯಿತಿ ನೀಡಲಾಗಿದೆ.