https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ದುರಂತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ತನ್ನ ಪ್ರಾಥಮಿಕ ತನಿಖಾ ವರದಿಯನ್ನು(Report) ಬಿಡುಗಡೆ ಮಾಡಿದ್ದು, ಅಪಘಾತದ ಹಿಂದೆ ಒಂದಕ್ಕಿಂತ ಹೆಚ್ಚು ಅಂಶಗಳು ಕೆಲಸ ಮಾಡಿರುವ ಶಂಕೆ ವ್ಯಕ್ತಪಡಿಸಿದೆ.
ಈ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಕ್ಷಣದಿಂದಲೇ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈಗ ಹೊರಬಂದಿರುವ ಪ್ರಾಥಮಿಕ ವರದಿ, “ಇದು ಕೇವಲ ಅಪಘಾತವಲ್ಲ, ಕೆಲವು ನಿರ್ಲಕ್ಷ್ಯಗಳ ಸರಪಳಿಯ ಪರಿಣಾಮವಾಗಿರಬಹುದು” ಎಂಬ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.
AAIB ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಪ್ರದೇಶದಲ್ಲಿ ಗೋಚರತೆ ಬಹಳ ಕಳಪೆಯಾಗಿತ್ತು. ಹವಾಮಾನ ಪರಿಸ್ಥಿತಿಗಳು ಸುರಕ್ಷಿತ ಲ್ಯಾಂಡಿಂಗ್‌ಗೆ ಅನುಕೂಲಕರವಾಗಿರಲಿಲ್ಲ ಎನ್ನಲಾಗಿದೆ. ಆದರೂ ವಿಮಾನವನ್ನು ಇಳಿಸಲು ಪ್ರಯತ್ನಿಸಿದ ನಿರ್ಧಾರವೇ ಮೊದಲ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ. ನಿಯಮಾನುಸಾರ, ಇಂತಹ ಪರಿಸ್ಥಿತಿಗಳಲ್ಲಿ ಪರ್ಯಾಯ ವಿಮಾನ ನಿಲ್ದಾಣಕ್ಕೆ ತಿರುಗಿಸುವ ಅವಕಾಶವಿದ್ದರೂ, ಆ ನಿರ್ಧಾರ ಏಕೆ ಕೈಗೊಳ್ಳಲಾಯಿತು ಎಂಬುದು ತನಿಖಾಧಿಕಾರಿಗಳ ಕುತೂಹಲಕ್ಕೆ ಕಾರಣವಾಗಿದೆ.
ಎಎಐಬಿ ಹೇಳಿದ್ದೇನು?
ಇದರ ಜೊತೆಗೆ, ವಿಮಾನವು ಲ್ಯಾಂಡಿಂಗ್‌ಗೆ ಮುನ್ನ ಅಥವಾ ಅದರ ಸಂದರ್ಭದಲ್ಲಿ ತಾಂತ್ರಿಕ ದೋಷವನ್ನು ಅನುಭವಿಸಿರಬಹುದು ಎಂಬ ಶಂಕೆಯನ್ನೂ ವರದಿ ಉಲ್ಲೇಖಿಸಿದೆ. ಇಂಜಿನ್ ಕಾರ್ಯಕ್ಷಮತೆ, ನ್ಯಾವಿಗೇಶನ್ ವ್ಯವಸ್ಥೆ ಅಥವಾ ಲ್ಯಾಂಡಿಂಗ್ ಸಹಾಯಕ ಉಪಕರಣಗಳಲ್ಲಿ ದೋಷ ಉಂಟಾಗಿರಬಹುದೇ ಎಂಬ ಕೋನದಿಂದ ತನಿಖೆ ಮುಂದುವರಿದಿದೆ. ಆದರೆ, ಈ ಹಂತದಲ್ಲಿ ಯಾವುದೇ ಒಂದು ದೋಷವನ್ನು ಖಚಿತಪಡಿಸಲಾಗಿಲ್ಲ ಎಂದು AAIB ಸ್ಪಷ್ಟಪಡಿಸಿದೆ.
ತನಿಖಾ ಸಂಸ್ಥೆಯ ಪ್ರಕಾರ, ಈಗ ಬಿಡುಗಡೆಯಾಗಿರುವುದು ಕೇವಲ ಪ್ರಾಥಮಿಕ ವರದಿ ಮಾತ್ರ. ವಿಮಾನದ ಕಪ್ಪು ಪೆಟ್ಟಿಗೆ (Black Box)ಯಿಂದ ಲಭಿಸುವ ಸಂಪೂರ್ಣ ಡೇಟಾವನ್ನು ವಿಶ್ಲೇಷಿಸಿದ ನಂತರವೇ ಅಪಘಾತದ ನಿಖರ ಕಾರಣಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯ. ಪೈಲಟ್‌ಗಳ ಸಂಭಾಷಣೆ, ಕಂಟ್ರೋಲ್ ಟವರ್ ಸೂಚನೆಗಳು ಮತ್ತು ತಾಂತ್ರಿಕ ಅಂಕಿ-ಅಂಶಗಳು ಈ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಲಿವೆ. AAIB ಅಧಿಕಾರಿಗಳು, ಯಾವುದೇ ನಿರ್ಣಯಕ್ಕೆ ಆತುರಪಡುವ ಅಗತ್ಯವಿಲ್ಲ. ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ವರದಿ ಬಿಡುಗಡೆ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಅಂತಿಮ ವರದಿ ಹೊರಬರುವವರೆಗೆ, ಬಾರಾಮತಿ ವಿಮಾನ ಅಪಘಾತ ಪ್ರಕರಣವು ದೇಶದ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇರಲಿದೆ.
ಜ್ಯೋತಿಷಿ ಕಮಲಾಕರ್ ಭಟ್ ಮೊನ್ನೆ ಹೋದೋರು ಇನ್ನೂ ಬಂದಿಲ್ಲ;ಮನೆ ಓನರ್ ಹೇಳಿದ್ದೇನು?