https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಗುರೂಜಿ ಜೊತೆ ಮಹಿಳೆ ಅನೈತಿಕ ಸಂಬಂಧ ಬಗ್ಗೆ ದೂರು ನೀಡಿದ್ದಕ್ಕೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಸುಚಿತ್ರಾಳ ಪತಿ ಸಹೋದರ ಸಾವನ್ನಪ್ಪಿದ್ದಾನೆ. ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಮಾತನಾಡಿರುವ ರಾಸಲೀಲೆ ಆಡಿಯೋ ಭಾರೀ ವೈರಲ್ ಆಗಿದೆ.ಇಬರಿಬ್ಬರ ಈ ಮಾತುಕತೆ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಆಡಿಯೋದಲ್ಲಿ ಕೆಲವು ಕೆಟ್ಟ ಮತ್ತು ಅಶ್ಲೀಲ ಪದಗಳ ಬಳಕೆಯಾಗಿದ್ದು, ಜೊತೆಗೆ ಇವರ ಸರಸ ಸಲ್ಲಾಪಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆ ಎಂಬ ಬಗ್ಗೆಯೂ ಮಾತನಾಡಿದ್ದಾರೆ.
ಈ ಆಡಿಯೋದಲ್ಲಿ ಸುಚಿತ್ರಾ ಎಂಬ ಮಹಿಳೆ ಮಗಳು ಇಲ್ಲದಿದ್ದರೆ ನಮ್ಮ ಸುಖಕ್ಕೆ ಪಾರವೇ ಇಲ್ಲ ಎಂಬ ರೀತಿಯ ಮಾತುಗಳನ್ನಾಡಿದ್ದಾರೆ ಎಂದು ಆಡಿಯೋದಲ್ಲಿ ಕೇಳಿ ಬರುತ್ತದೆ. ಇದನ್ನು ಕೇಳಿದ ನೆಟ್ಟಿಗರು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಬಗ್ಗೆಯೂ ಭಯಾನಕ ಯೋಚನೆಗಳಿವೆಯೇ ಎಂಬ ಆತಂಕ ಮೂಡಿಸಿದೆ.