https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರಾದ ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್, ಆಕಾಶ್, ಫೈಸಲ್, ಇರ್ಫಾನ್ ಅಮಾನುಲ್ಲಾ ಮತ್ತು ಮೆಹಫೂಸ್‌ರನ್ನು ಸದ್ಯ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಮಲಾಕರ್ ಭಟ್ ಕೆಲವು ವರ್ಷಗಳಿಂದ ವಿವಾಹಿತ ಹಾಗೂ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿರುವ ಸುಚಿತ್ರಾ ಆಂಟಿ ಜತೆ ಸಂಬಂಧ ಹೊಂದಿದ್ದರು. ಇನ್ನು ಇವರ ಸಂಬಂಧ ಕೈಮೀರಿದಾಗ ಈ ಮಹಿಳೆಯ ಮಕ್ಕಳಲ್ಲಿ ಓರ್ವ ಯುವತಿ ತನ್ನ ತಂದೆಗೆ ಎಲ್ಲಾ ಮಾಹಿತಿ ತಿಳಿಸಿದ್ದಾಳೆ. ಇದಾದ ನಂತರ ಈ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲು ಗಂಡ ಸಿದ್ದಾಪುರಕ್ಕೆ ಹೋಗಿದ್ದಾನೆ. ಅಲ್ಲಿ ದೊಡ್ಡ ಗಲಾಟೆ ನಡೆದಿದೆ.
ಗಲಾಟೆ ಸಮಯದಲ್ಲಿ ಜ್ಯೋತಿಷಿ ಕಡೆಯವರು ಇವರಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆ ತಪ್ಪಿಸಲು ಬಂದ ಗಂಡನ ಸಹೋದರ ಸಾವಿಗೀಡಾಗಿದ್ದಾರೆ. ಇವರ ಸಾವಿನ ನಂತರ ಘಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. ಘಟನೆ ನಡೆದ ದಿನವೇ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಂತೆ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ 7 ಆರೋಪಿಗಳಿಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಹೀಗಾಗಿ ಸುಚಿತ್ರಾ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲೊನಿಯ ಬಡಾವಣೆಯಲ್ಲಿ ಮನೆಯಲ್ಲಿ ಮಗಳೊಂದಿಗೆ ಕಮಲಾಕರ್ ಭಟ್ ಜತೆ ವಾಸವಾಗಿದ್ದಳು.
ಸುಚಿತ್ರಾ ಪತಿ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ರೆ, ಸುಚಿತ್ರಾ ಸಿದ್ದಾಪುರದಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಳು. ರೀಲ್ಸ್, ಡ್ಯಾನ್ಸ್ ಅಂತಾ ಐಷಾರಾಮಿ ಲೈಫ್ ಹಿಂದೆ ಬಿದ್ದ ಸುಚಿತ್ರಾ ಗಂಡನಿಂದ ದೂರ ಆಗಿ, ಕಮಲಾಕರ್ ಭಟ್ ಹಿಂದೆ ಬಿದ್ದಿದ್ದಳು. ಶಿವಮೊಗ್ಗದಲ್ಲಿ ಈಕೆಗಾಗಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ ಕಮಲಾಕರ, ಓಡಾಟಕ್ಕೆ ಎರಡು ಕಾರು ಕೊಟ್ಟಿದ್ದ. ಹೀಗಾಗಿ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದ ಸುಚಿತ್ರಾ, ಹರ್ಷ ಎನ್ನುವ ಕಾರು ಚಾಲಕನನ್ನು ಇಟ್ಟುಕೊಂಡಿದ್ದಳು. ಬಳಿಕ ತನ್ನ ಗುರೂಜಿ ನಡುವೆ ಅಡ್ಡಿಯಾಗಿದ್ದ ಸ್ವಂತ ಮಗಳನ್ನೇ ಮನೆಯಿಂದ ಹೊರ ಹೋಗು ಎಂದಿದ್ದಳಂತೆ. ಇಲ್ಲದಿದ್ರೆ ವಿಷ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳಂತೆ. ಸ್ವಾಮೀಜಿ ಹಾಗೂ ನನ್ನ ತಾಯಿ ಇಬ್ಬರೂ ಸಹ ನನಗೆ ಹಿಂಸೆ ನೀಡುತ್ತಿದ್ದರು ಎಂದು ಆರೋಪ ಮಾಡಿರುವ ಮಗಳು, ನನ್ನ ದೊಡ್ಡಪ್ಪ ಇವರಿಂದ ಸಾವಿಗೀಡಾಗಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾಳೆ.