https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಅಕ್ರಮ ಸಂಬಂಧ ಪ್ರಕರಣದಲ್ಲಿ ಸಿಲುಕಿ ಜೈಲು ಕಂಬಿ ಎಣಿಸುತ್ತಿರುವ ಜ್ಯೋತಿಷಿ ಕಮಲಾಕರ ಭಟ್ ಬಗ್ಗೆ ಕರ್ನಾಟಕವೇ ಮಾತನಾಡುತ್ತಿದೆ. ರಾಜಕಾರಣಿಗಳ ನಡುವೆ ವಾಕ್ಸಮರವೇ ನಡೆಯುತ್ತಿದೆ.
ಕಂಡ ಕಂಡವರ ಭವಿಷ್ಯ, ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ ಭಟ್, ಟಿವಿಯಲ್ಲೂ ಬಗೆಬಗೆಯ ವೇಷದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಎಲ್ಲರ ಭವಿಷ್ಯ ಹೇಳುವ ಭರದಲ್ಲಿ ತನ್ನ ಭವಿಷ್ಯವನ್ನೇ ಮರೆತಿದ್ದ ಕಮಲಾಕರ ಭಟ್ಗೆ ಈ ಅಕ್ರಮ ಸಂಬಂಧದ ಪ್ರಕರಣ ವಾಸ್ತವದ ಕಣ್ಣು ತೆರೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಟಿವಿ ಕಾರ್ಯಕ್ರಮಗಳಲ್ಲಿ ತನ್ನನ್ನು ಕಮಲಾಕರ ಭಟ್ ಎಂದು ಹೇಳಿಕೊಳ್ಳುತ್ತಿದ್ದ ಬೇರೊಂದು ಸಂಸಾರದಲ್ಲಿ ಇಣುಕಿದ್ದಲ್ಲದೆ ಕೊ*ಲೆಯನ್ನೂ ಮಾಡಿ ಸಿಕ್ಕಿಬಿದ್ದು ಜೈಲು ವಾಸ ಅನುಭವಿಸುತ್ತಿರುವ ಆರೋಪಿಯ ಮೂಲ ಹೆಸರು ಕಮಲಾಕರ ಹೆಗಡೆ. ತನ್ನ ವೃತ್ತಿಯ ಸಲುವಾಗಿ ಹೆಸರು ಬದಲಿಸಿಕೊಂಡು ಕಮಲಾಕರ ಭಟ್ ಆಗಿದ್ದ. 15 ವರ್ಷಗಳಲ್ಲಿ ಈತ ಬೆಳೆದ ರೀತಿಯೇ ರೋಚಕ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ್ದ ಕಮಲಾಕರ ಹೆಗಡೆ ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಕೆಲ ಕಾಲ ಸಿದ್ದಾಪುರದಲ್ಲೇ ಓಡಾಡಿಕೊಂಡಿದ್ದ. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ್ಯ ಕಲಿತಿದ್ದ. ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲೂ ಕೆಲ ವರ್ಷ ವಿದ್ಯಾರ್ಥಿಯಾಗಿದ್ದ. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ್ಯದ ಮಂತ್ರ ತಂತ್ರಗಳನ್ನೆಲ್ಲ ಬೆಂಗಳೂರಿಗೆ ಬಂದ ಕಮಲಾಕರ ಭಟ್ ಟಿವಿಯಲ್ಲಿ ಜ್ಯೋತಿಷಿಯಾಗಿ ಕಾಣಿಸಿಕೊಂಡು ಬಲು ಬೇಗ ಪ್ರಸಿದ್ಧನಾದ. ರಾಜಕಾರಣಿಗಳ ಜತೆ ಫೋಟೋಗೆ ಪೋಸ್ ಕೊಟ್ಟ. ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕ ಕುಳಿತು ಸೆಲ್ಫೀ ಕ್ಲಿಕ್ಕಿಸಿಕೊಂಡ.

2010ರಲ್ಲಿ ಬೆಂಗಳೂರಿಗೆ ತೆರಳಿ ಜ್ಯೋತಿಷ್ಯದ ಕಚೇರಿಯನ್ನೂ ತೆರೆದ. ವಿವಿಧ ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯಕ್ರಮ ನೀಡುತ್ತಿದ್ದ. ಬೆಂಗಳೂರಿನಲ್ಲೇ ಹಲವು ಶಾಖೆಗಳನ್ನೂ ತೆರೆದಿದ್ದ. ಶಿವಮೊಗ್ಗದಲ್ಲಿ ವಾಸವಾಗಿ ಅಲ್ಲಿಯೂ ಬ್ರ್ಯಾಂಚ್ ತೆರೆದಿದ್ದ. ಆಗಲೇ ದೊಡ್ಡ ದೊಡ್ಡವರ ಸಂಪರ್ಕಕ್ಕೆ ಬಂದಿದ್ದ. ಇದೇ ವೇಳೆ ಜ್ಯೋತಿಷ್ಯ ಹೇಳುತ್ತಲೇ ರೀಲ್ಸ್ ಮಾಡುತ್ತಿದ್ದ ಸುಚಿತ್ರಾಳ ಮೋಹಕ್ಕೆ ಬಿದ್ದು, ಆಕೆಯ ಜತೆ ಸಂಬಂಧ ಬೆಳೆಸಿಕೊಂಡು ತನ್ನ ಭವಿಷ್ಯ ಮಂಕಾಗಿಸಿಕೊಂಡ. ಆತನಿಗೆ ಪತ್ನಿ ಇರಲಿಲ್ಲ ಎಂಬ ಮಾಹಿತಿಯಿದ್ದು, ಸಂಸಾರದ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲಾಕರ ಗುರೂಜಿ ಕ್ಯಾನ್ಸರ್ ಪೀಡಿತರಿಗೆ, ಅನಾಥರಿಗೆ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಿದ್ದ ಎಂದು ಮಾಜಿ ಸಚಿವ ಸುರೇಶ ಕುಮಾರ್ ಅವರು ಹಂಚಿಕೊಂಡಿದ್ದ ಸಂದೇಶವೊಂದು ವೈರಲ್ ಆಗುತ್ತಿದೆ. ಆ ಕಾರ್ಯ ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಬಡವರು, ಕ್ಯಾನ್ಸರ್ ಪೀಡಿತರು ಸೇರಿ ಪ್ರತಿನಿತ್ಯ 700ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಊಟ ಒದಗಿಸುತ್ತಿದ್ದ ಕಮಲಾಕರ ಭಟ್ ಈಗ ಸುಚಿತ್ರಾ ಮೈದುನನನ್ನು ಕೊಲೆಗೈದು ಜೈಲಿನಲ್ಲೇ ಊಟ ಮಾಡುವಂತಾದದ್ದು ಮಾತ್ರ ವಿಪರ್ಯಾಸ.
https://www.newsics.com/2026/02/05/bomb-threat-to-italian-embassy-in-bengaluru/