https://youtu.be/yWrDals90_k?si=XOmcfnoWP5SxUi8s
Subscribe ನ್ಯೂಸಿಕ್ಸ್ ಕನ್ನಡ
newsics.com
ಮನೆಯೊಡತಿ ಮೇಲೆ ಕೆಲಸಗಾರ ಅತ್ಯಾಚಾರ ಎಸಗಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ BTM ಲೇಔಟ್ ಬಳಿಯಿರುವ ಕೆಎಎಸ್ ಕಾಲೊನಿಯಲ್ಲಿ ನಡೆದಿದೆ.
ತಮಿಳುನಾಡಿನ ಹೊಸೂರು ಮೂಲದ ದೇವರಾಜ (50) ಎಂಬಾತ ಈ ದುಷ್ಕೃತ್ಯ ಎಸಗಿ ನೇಣಿಗೆ ಶರಣಾಗಿದ್ದಾನೆ. ಸಂತ್ರಸ್ತೆಯ ಪತಿ ಪ್ರತಿಷ್ಠಿತ ಕಂಪನಿಯ ಉನ್ನತ ಹುದ್ದೆಯಲ್ಲಿದ್ದಾರೆ. ಅವರು 65 ವರ್ಷದ ಪತ್ನಿ ಹಾಗೂ ಮಗಳ ಜತೆ ಕೆಎಎಸ್ ಕಾಲೊನಿಯ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಕಂಪನಿಯ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದ ಅವರು ಭಾನುವಾರ ಬೆಳಗಿನ ಜಾವ ಬೆಂಗಳೂರಿಗೆ ಹಿಂದಿರುಗಿದ್ದರು. ಅವರು ವಿಮಾನ ನಿಲ್ದಾಣದಿಂದ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದಾಗ ಮಗಳು ಬಾಗಿಲು ತೆರೆದಿದ್ದಾಳೆ.
ನೆಲ ಮಹಡಿಯ ಬೆಡ್ ರೂಂಗೆ ಹೋದಾಗ ಪತ್ನಿ ಹಾಸಿಗೆ ಮೇಲೆ ಮೃತಪಟ್ಟಿರುವುದನ್ನು ಮತ್ತು ಅದೇ ಕೊಠಡಿಯಲ್ಲಿ ಮನೆ ಕೆಲಸಗಾರ ದೇವರಾಜ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಗೊಂಡು ಕಿರುಚಾಡಿದ್ದಾರೆ. ತಂದೆಯ ಕಿರುಚಾಟ ಕೇಳಿ ನೆಲ ಮಹಡಿಯ ಬೆಡ್ ರೂಂಗೆ ಓಡಿ ಬಂದ ಮಗಳು ಠಾಣೆಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಸಂತ್ರಸ್ತೆಯ 27 ವರ್ಷದ ಪುತ್ರಿ ನೀಡಿದ ದೂರಿನ ಅನ್ವಯ ಮೈಕೊಲೇಔಟ್ ಠಾಣೆ ಪೊಲೀಸರು ದೇವರಾಜನ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
https://www.newsics.com/2026/02/03/technical-fault-in-air-india-flight-from-london-to-bangalore/