Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಮನೆಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ಗಿಲ್ಲಿ, ‘ಬಿಗ್ ಬಾಸ್’ ಮನೆಯಿಂದ ಹೊರ ಹೋದ ಬಳಿಕ ಆ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ ಎಂದಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಗಿಲ್ಲಿ ವಿವಿಧ ಕಾರ್ಯಕ್ರಮಗಳಿಗೆ, ಶೂಟಿಂಗ್ಗೆ ತೆರಳುತ್ತಿದ್ದಾರೆ. ಈ ಕಾರಣದಿಂದ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಟ್ಯಾಟೂ ಅಭಿಮಾನಿ ಖಂಡಿಸಿದ್ದಾರೆ.
ಗಿಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿ ಭೇಟಿ ಮಾಡ್ತಿಲ್ಲ. ಇವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೆದುಕೊಂಡು ಬಂದೆವು. ಅವರ ಅಣ್ಣನಿಗೆ ಕರೆ ಮಾಡಿ, ಗಿಲ್ಲಿಗೆ ಪ್ರಸಾದ ಕೊಡಬೇಕಿತ್ತು ಎಂದು ಹೇಳಿದೆ. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ. ನಮ್ಮಂತಹ ಫ್ಯಾನ್ಸ್ನ ಅವರು ಭೇಟಿ ಮಾಡುತ್ತಿಲ್ಲ’ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಸದ್ಯ ಗಿಲ್ಲಿಗೆ ಸಿಕ್ಕಿರೋ ಅತಿಯಾದ ಅಭಿಮಾನವೇ ಅವರಿಗೆ ಮುಳುವಾಗುವ ಸೂಚನೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಗಿಲ್ಲಿ ಅವರನ್ನು ಭೇಟಿ ಮಾಡಬಹುದು ಅಥವಾ ಮಾಡದೇ ಇರಬಹುದು. ಆದರೆ, ಈ ರೀತಿ ಎಲ್ಲಾ ಅಭಿಮಾನಿಗಳು ನಾವು ಹಾಗೆ ಬೆಂಬಲ ನೀಡಿದ್ದೆವು, ಆದರೂ ಭೇಟಿಗೆ ಬಂದಿಲ್ಲ ಎಂದೆಲ್ಲ ಹೇಳಿದರೆ ಅದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
https://www.instagram.com/reel/DULWggfEyva/?igsh=MWRueGczdTJsbnBmYw==