Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ನಾಯಿಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿದ ಭಾರತೀಯ ದಂಪತಿ; ವೈರಲ್ ವಿಡಿಯೋ ನೋಡಿ
ವೈರಲ್

ನಾಯಿಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿದ ಭಾರತೀಯ ದಂಪತಿ; ವೈರಲ್ ವಿಡಿಯೋ ನೋಡಿ

Share
2 Min Read
SHARE

https://youtube.com/shorts/Z7vopgc72sA?si=3ET1oo5suVuz11Av

Subscribe ನ್ಯೂಸಿಕ್ಸ್ ಕನ್ನಡ

newsics.com

ನಾಯಿಗಾಗಿ ಭಾರತೀಯ ದಂಪತಿ 15 ಲಕ್ಷ ರೂಪಾಯಿ ಖರ್ಚು ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.. ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ..

ಹೌದು, ಭಾರತೀಯ ದಂಪತಿ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳುವ ಅವಕಾಶ ಒದಗಿಬಂದಿತ್ತು. ವೃತ್ತಿ, ಉತ್ತಮ ಜೀವನದ ಕಾರಣಗಳಿಂದ ದಂಪತಿಗಳು ಆಸ್ಟ್ರೇಲಿಯಾ ಸ್ಥಳಾಂತರಕ್ಕೆ ನಿರ್ಧರಿಸಿದ್ದರು. ಆದರೆ ನಾಯಿಯನ್ನು ಭಾರತದಿಂದ ನೇರವಾಗಿ ಆಸ್ಟ್ರೇಲಿಯಾಗೆ ಜೊತೆಯಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಆಸ್ಟ್ರೇಲಿಯಾ ನಿಯಮದ ಪ್ರಕಾರ ನಾಯಿ ರೇಬಿಸ್ ಮುಕ್ತ ದೇಶದಲ್ಲಿ ಕನಿಷ್ಠ 6 ತಿಂಗಳು ಇರಬೇಕಿತ್ತು. ಆದರೆ ತಮ್ ನಾಯಿಯನ್ನು ಭಾರತದಲ್ಲಿ ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ದುಬಾರಿಯಾದರೂ ಪರ್ವಾಗಿಲ್ಲ ಎಂದು ನಾಯಿಯನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಜೊತೆಗೆ 6 ತಿಂಗಳು ವಿರಹ ವೇದನೆಯನ್ನೂ ಅನುಭವಿಸಿದ್ದಾರೆ. ಕೊನೆಗೂ ನಾಯಿ ಇದೀಗ ಭಾರತೀಯ ದಂಪತಿಗಳ ಮಡಿಲು ಸೇರಿದೆ.

ಹೈದರಾಬಾದ್ ನಿವಾಸಿಗಳಾದ ದಿವ್ಯ ಹಾಗೂ ಜಾನ್ ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರು. ಆದರೆ ತಮ್ಮ ಮುದ್ದಿನ ನಾಯಿಗೆ ಆಸ್ಟೇಲಿಯಾ ನಿಯಮಗಳು ಅನುಮತಿ ನೀಡಿಲ್ಲ. ಆಸ್ಟ್ರೇಲಿಯಾದ ನಿಯಮಗಳ ಕುರಿತು ಪರಿಶೀಲಿಸಿದ ದಿವ್ಯ ಹಾಗೂ ಜಾನ್ ನಾಯಿನ್ನು ನಿಯಮದಂತೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಭಾರತದಿಂದ ಆಸ್ಟ್ರೇಲಿಯಾಗೆ ಸಾಕು ನಾಯಿಯನ್ನು ಡೈರೆಕ್ಟ್ ಆಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ನಿಯಮ ಪ್ರಕಾರ ನಾಯಿ ಕನಿಷ್ಠ 6 ತಿಂಗಳು ರೇಬಿಸ್ ಮುಕ್ತ ದೇಶದಲ್ಲಿರಬೇಕು. ಹೀಗಾಗಿ ದಿವ್ಯ ಹಾಗೂ ಜಾನ್ ದಂಪತಿ ದುಬೈ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ಬಳಿಕ ನಾಯಿ ಜೊತೆ ನೇರವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ದುಬೈಗೆ ತೆರಳಿದ ದಂಪತಿ ಡಾಗ್ ಕೇರ್ ಸೆಂಟರ್‌ನಲ್ಲಿ ತಮ್ಮ ಮುದ್ದಿನ ನಾಯಿ ಆರೈಕೆಗೆ ಮುಂದಾಗಿದ್ದಾರೆ. ಮುದ್ದಿನ ನಾಯಿಗೆ ಹೊಸ ಜಾಗ, ಹೊಸ ಸಿಬ್ಬಂದಿಗಳ ಸಮಸ್ಯೆಯಾಗಬಾರದು ಎಂದು ಒಂದು ತಿಂಗಳು ಈ ದಂಪತಿ ನಾಯಿ ಜೊತೆ ದುಬೈನಲ್ಲೇ ಉಳಿದುಕೊಂಡಿದ್ದಾರೆ. ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಹೀಗಾಗಿ ಅನಿವಾರ್ಯವಾಗಿ ಮುದ್ದಿನ ನಾಯಿಗೆ ವಿದಾಯ ಹೇಳಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಬಳಿಕ ನೋವಿನಲ್ಲೇ 5 ತಿಂಗಳು ಕಳೆದಿದ್ದಾರೆ.
ಪ್ರತಿ ದಿನ ಆರೈಕೆ ಕೇಂದ್ರಕ್ಕೆ ಕರೆ ಮಾಡಿ ನಾಯಿ ಬಗ್ಗೆ ವಿಚಾರಿಸುತ್ತಿದ್ದರು. ವಿಡಿಯೋ ಕಾಲ್ ಮಾಡಿ ನಾಯಿ ಜೊತೆ ಪ್ರೀತಿ ಹಂಚಿಕೊಳ್ಳುತ್ತಿದ್ದರು. ಆದರೆ ನೋವು ಮಾತ್ರ ಕಡಿಮೆಯಾಗಿರಲಿಲ್ಲ. 6 ತಿಂಗಳು ರೇಬಿಸ್ ಮುಕ್ತ ದೇಶದ ವಾಸ ಬಳಿಕ ನಾಯಿಯನ್ನು ದುಬೈನಿಂದ ಆಸ್ಟ್ರೇಲಿಯಾಗೆ ಸ್ಥಳಾಂತರ ಮಾಡಲಾಗಿಯಿತು. 5 ತಿಂಗಳ ಬಳಿ ನಾಯಿ ಮತ್ತೆ ತಮ್ಮ ಮಡಿಲು ಸೇರಿದ ಖುಷಿಯನ್ನು ದಂಪತಿಗಳು ಹಂಚಿಕೊಂಡಿದ್ದಾರೆ.
ನಾಯಿಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡುತ್ತೀದ್ದಿರಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಬೇರೆ ನಾಯಿ ಖರೀದಿಸಿದರೆ ಮುಗೀತು, ಇಷ್ಟೊಂದು ಕಷ್ಟ ಯಾಕೆ, ಹಣ ಖರ್ಚು ಮಾಡುತ್ತಿರುವುದೇಕೆ ಎಂದು ಆಪ್ತರು, ಸಂಬಂಧಿಕರು ಪ್ರಶ್ನಿಸಿದ್ದರು. ಆದರೆ ನಮ್ಮ ಮುದ್ದಿನ ನಾಯಿ ನಮಗೆ ಮಗುವಿನಂತೆ. ಆ ಪ್ರೀತಿ ಮತ್ತೊಂದು ನಾಯಿಯಿಂದ ಪಡೆಯಲು ಅಸಾಧ್ಯ. ನಮಗೆ ಹಣಕ್ಕಿಂತ ನಮ್ಮ ನಾಯಿಯ ಪ್ರೀತಿ ಮುಖ್ಯವಾಗಿತ್ತು. ಹೀಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯನ್ನು ಸ್ಥಳಾಂತರ ಮಾಡಿದ್ದೇವೆ ಎಂದು ದಿವ್ಯ ಹಾಗೂ ಜಾನ್ ಸಂತಸ ಹಂಚಿಕೊಂಡಿದ್ದಾರೆ.

https://www.instagram.com/reel/DTXP3eCkZCl/?igsh=dzdrZnM0dW5lem5o

ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿದ ಪೋಷಕರು; ವೈರಲ್ ವಿಡಿಯೋ ನೋಡಿ

TAGGED:Indian couple spends Rs 15 lakh on dog
Share This Article
Facebook Twitter Copy Link Print
Previous Article ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿದ ಪೋಷಕರು; ವೈರಲ್ ವಿಡಿಯೋ ನೋಡಿ
Next Article ಆರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ಚಾರ: ಮೂವರು ಅಪ್ರಾಪ್ತರು ಪೊಲೀಸ್ ವಶಕ್ಕೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?