Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪತಿಯ ಅತಿಯಾದ ಲೈಂ*ಗಿಕ ಆಸಕ್ತಿ: ಬೇಸತ್ತ ಪತ್ನಿ ಗಂಡನನ್ನು ಕೊಂದ ಬಗೆಯೇ ವಿಚಿತ್ರ!
ದೇಶಪ್ರಮುಖ

ಪತಿಯ ಅತಿಯಾದ ಲೈಂ*ಗಿಕ ಆಸಕ್ತಿ: ಬೇಸತ್ತ ಪತ್ನಿ ಗಂಡನನ್ನು ಕೊಂದ ಬಗೆಯೇ ವಿಚಿತ್ರ!

Share
2 Min Read
SHARE

https://youtube.com/shorts/Dd-eFU1bWK0?si=LMJU3zpxmXbcfjrx

Subscribe ನ್ಯೂಸಿಕ್ಸ್ ಕನ್ನಡ

newsics.com

ಮುಂಬೈ: ಪತಿಯ ಅತಿಯಾದ ಲೈಂ*ಗಿಕ ಆಸಕ್ತಿಯಿಂದ ಬೇಸತ್ತ ಪತ್ನಿ, ತನ್ನ ಗಂಡನಿಗೆ ವಿಷ ಹಾಕಿ, ಕೊನೆಗೆ ಉಸಿರುಗಟ್ಟಿಸಿ ಕೊ*ಲೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದೀಗ 39 ವರ್ಷದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪತಿಯ ಅಂತ್ಯಕ್ರಿಯೆಯ ವ್ಯವಸ್ಥೆಗಳ ವಿಚಾರವಾಗಿ ನಡೆದ ಜಗಳದ ಬಳಿಕ ಇದು ಸಹಜ ಸಾವಲ್ಲ, ಕೊ*ಲೆ ಎನ್ನುವ ವಿಚಾರ ಬಯಲಾಗಿದೆ.

ವಿಧಿವಿಜ್ಞಾನ ಶವಪರೀಕ್ಷೆಯಲ್ಲಿ ಕುತ್ತಿಗೆ ಮತ್ತು ಎದೆಯ ಮೇಲೆ ಒತ್ತಡದಿಂದ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಇದಾದ ಬಳಿಕ ಪತಿಯನ್ನು ಕೊಂ*ದ ಪತ್ನಿಯನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಇಶ್ರತ್ ಖಾತೂನ್‌ನನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಹೈದರ್ ಅಲಿ (39) ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯವನಾಗಿದ್ದು, ಮುಂಬೈನಲ್ಲಿ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಸೂರತ್‌ನಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡುತ್ತಿದ್ದ. ಮನೆಗೆ ಬಂದಾಗ ವಯಾಗ್ರ ಮಾತ್ರೆಗಳನ್ನು ತಂದುಕೊಂಡು ಪದೇ ಪದೇ ಪತ್ನಿ ಬಳಿ ಚಿತ್ರವಿಚಿತ್ರ ಲೈಂ*ಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅದನ್ನು ಸಹಿಸಲಾಗದೆ ಖಾತೂನ್ ಆತನನ್ನು ಕೊ*ಲ್ಲಲು ನಿರ್ಧರಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮೋಸದಿಂದ ಪತಿಗೆ ವಿಷ:

ಪೊಲೀಸರ ಪ್ರಕಾರ, ಹೈದರ್ ಅಲಿ ಜನವರಿ 1 ರಂದು ಸೂರತ್‌ಗೆ ಬಂದಿದ್ದ. ಚಳಿಗಾಲದಲ್ಲಿ ಒಳ್ಳೆಯದು ಎಂದು ಹೇಳಿ ಖಾತೂನ್ ಅರಿಶಿಣದ ಹಾಲನ್ನು ಸಿದ್ಧಪಡಿಸಿ, ಅದರಲ್ಲಿ ಕೀಟನಾಶಕವನ್ನು ಬೆರೆಸಿ ಪತಿಗೆ ನೀಡಿದ್ದಳು ಎನ್ನಲಾಗಿದೆ. ಅದನ್ನು ಕುಡಿದ ಕೂಡಲೇ ಅಲಿಯ ಆರೋಗ್ಯ ಹದಗೆಟ್ಟು, ಪದೇ ಪದೇ ವಾಂತಿ ಮಾಡಿಕೊಂಡಿದ್ದ. ಆದರೂ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ.

ಜನವರಿ 5 ರಂದು ಅಲಿ ತುಂಬಾ ದುರ್ಬಲನಾಗಿದ್ದಾಗ, ಖಾತೂನ್ ಆತನ ಎದೆಯ ಮೇಲೆ ಕುಳಿತು ಕೈಗಳಿಂದ ಕತ್ತು ಹಿಸುಕಿ ಕೊಂ*ದಿದ್ದಾಳೆ ಎಂದು ಆರೋಪಿಸಲಾಗಿದೆ. ನಂತರ, ಅಲಿಯ ಆರೋಗ್ಯ ಸರಿ ಇಲ್ಲ ಎಂದು ತನ್ನ ಭಾವ ಅರ್ಷದ್‌ಗೆ ತಿಳಿಸಿದ್ದಾಳೆ. ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಇದಾದ ಬಳಿಕ ಸಾಮಾನ್ಯ ಶವಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.

ಕೊ*ಲೆ ಎಂದು ಪತ್ತೆಯಾಗಿದ್ದು ಹೇಗೆ?

ಹೈದರ್ ಅಲಿಯ ಸಹೋದರ ಬಿಹಾರದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ಪಟ್ಟು ಹಿಡಿದರೆ, ಖಾತೂನ್ ಸೂರತ್‌ನಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕೆಂದು ಬಯಸಿದ್ದಳು. ಇದರಿಂದ ಎರಡೂ ಕುಟುಂಬಗಳ ನಡುವೆ ಜಗಳವಾಗಿ ಅನುಮಾನ ಹೆಚ್ಚಾಯಿತು. ಆವಗ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜನವರಿ 6 ರಂದು, ವಿಧಿವಿಜ್ಞಾನ ಶವಪರೀಕ್ಷೆಗೆ ಆದೇಶಿಸಲಾಯಿತು. ಇದು ಉಸಿರುಗಟ್ಟಿ ಸಾವು ಎಂದು ಖಚಿತವಾದ ನಂತರ ಕುಟುಂಬಸ್ಥರು ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ದು ಜನವರಿ 9 ರಂದು ಅಂತ್ಯಕ್ರಿಯೆ ನಡೆಸಿದರು.

ಪೊಲೀಸರು ಖಾತೂನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 103(1) (ಕೊ*ಲೆ) ಮತ್ತು 123 (ವಿಷ ನೀಡಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದಂಪತಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Most romantic, sexually satisfying countries ಅತಿ ಹೆಚ್ಚು ರೊಮ್ಯಾಂಟಿಕ್, ಲೈಂಗಿಕ ತೃಪ್ತಿ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆಷ್ಟನೇ ಸ್ಥಾನ?

Papa, I’m flying… ಪಪ್ಪಾ, ನಾನು‌ ಅಜಿತ್ ಜತೆ ಬಾರಾಮತಿಗೆ ಹೋಗ್ತಿದೀನಿ…

TAGGED:Husband's excessive sexual interest: The way a tired wife killed her husband is strange!
Share This Article
Facebook Twitter Copy Link Print
Previous Article ಸ್ನೇಹಿತೆ ನೀಡಿದ್ದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರಲು ಹೋದವಳಿಗೆ ಕಾದಿತ್ತು ಆಘಾತ
Next Article ಪಲಾಶ್‌ ನಡೆಯೋದೇಕೆ ವಿಚಿತ್ರ? ನಡೆಯಲಾಗದಂತೆ ಬಾರಿಸಿದ್ರಾ ಮಹಿಳಾ ಕ್ರಿಕೆಟರ್ಸ್‌?

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?