newsics.com
ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಅವರು ಇತಿಹಾಸ ಬರೆದಿದ್ದಾರೆ. ಸೆಮಿಫೈನಲ್ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಬೆಳ್ಳಿ ಅಥವಾ ಚಿನ್ನದ ಪದಕ ಬೇಟೆಯಾಡುವ ಭರವಸೆ ನೀಡಿದ್ದಾರೆ.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ವೀರಾವೇಶದ ಆಟ ಪ್ರದರ್ಶಿಸಿದ್ದರು. 50 ಕೆಜಿ ಕುಸ್ತಿ ವಿಭಾಗದಲ್ಲಿ ಇದುವರೆಗೂ ಸೋತೇ ಇರದ ಜಪಾನ್ ದೇಶದ ವರ್ಲ್ಡ್ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸೋ ಮೂಲಕ ಸೆಮಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದರು.ಸೆಮಿಫೈನಲ್ನಲ್ಲಿ ಕ್ಯೂಬ್ ಸ್ಪರ್ಧಿ ವಿರುದ್ಧ ಹೋರಾಡಿದ ವಿನೇಶ್ ಪೋಗಟ್ ಸೀದಾ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿನೇಶ್ ಪೋಗಟ್ ಅವರು ಚಿನ್ನದ ಪದಕವನ್ನೇ ಗೆದ್ದು ಬರಲಿ ಎಂದು ಕೋಟ್ಯಾಂತರ ಭಾರತೀಯರು ಶುಭ ಕೋರುತ್ತಿದ್ದಾರೆ. ಫೈನಲ್ನಲ್ಲಿ ವಿನೇಶ್ ಪೋಗಟ್ ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಬಹಳಷ್ಟಿದೆ. ಹೀಗಾಗಿ ನಿರೀಕ್ಷೆಯೂ ಹೆಚ್ಚಾಗಿದೆ.