https://youtube.com/shorts/2dkIPQOWaBI?si=cnBjdym01WoyZJ0X
Subscribe ನ್ಯೂಸಿಕ್ಸ್ ಕನ್ನಡ
newsics.com
ದಾವಣಗೆರೆ : ಮದುವೆಯಾದ 45 ದಿನಕ್ಕೆ ಪತ್ನಿ ಪರಾರಿಯಾಗಿದ್ದು, ನೊಂದ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ಗುಮ್ಮನೂರಿನಲ್ಲಿ ನಡೆದಿದೆ.
ಹರೀಶ ಪತ್ನಿ ಬೇರೆ ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಅವಮಾನ ತಾಳದೆ ಮದುವೆ ಮಾಡಿಸಿದ ಯುವತಿಯ ಸೋದರ ಮಾವ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್ ಆತ್ಮಹತ್ಯೆ ಬೆನ್ನಲ್ಲೇ ಸೋದರ ಮಾವ ರುದ್ರೇಶ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ ಮತ್ತು ಸರಸ್ವತಿ ಮದುವೆಯನ್ನು ರುದ್ರೇಶ್ ಮುಂದೆ ನಿಂತು ಮದುವೆ ಮಾಡಿಸಿದ್ದರು.
ತನ್ನ ಪತ್ನಿ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಬೇರೆ ಯುವಕನ ಜೊತೆ ಓಡಿ ಹೋಗಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಪತ್ನಿಯಿಂದ ಕಿರುಕುಳ ಸಂಬಂಧಿಕರಿಂದ ಜೀವ ಬೆದರಿಕೆ ಇತ್ತು, ಪತ್ನಿ ಪೋಷಕರು ಹಾಗೂ ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ ಆಗಲಿ ಎಂದು ಹರೀಶ್ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.