https://youtube.com/shorts/gtZudXyWr4w?si=oRYensKyfOlaZ92T
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಹಿಟಾಚಿ ಎಂಬ ಕಂಪನಿ ಸಿಬ್ಬಂದಿಗಳು ಸುಮಾರು 1.37 ಕೋಟಿ ಲೂಟಿ ಮಾಡಿದ್ದಾರೆ.
ಜ.19 ರಂದು ನಡೆದಿದ್ದ ಎಟಿಎಂ ವಾಹನ ದರೋಡೆ ತಡವಾಗಿ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ಹಾಕಲು ಅಧಿಕಾರಿಗಳು ಹೇಳುತ್ತಾರೆ. ಎಟಿಎಂಗಳಿಗೆ ಹಣ ಡೆಪಾಸಿಟ್ ಮಾಡಲು ಕಂಪನಿ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡುತ್ತಾರೆ. ಅಂತೆಯೇ ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್ ನಿಂದ ಸಿಬ್ಬಂದಿಗಳು ಹಣ ಕೊಂಡೊಯ್ದಿದ್ದಾರೆ. ಆದರೆ ಸಿಬ್ಬಂದಿಗಳು ಎಟಿಎಂಗೆ ಹಣ ಹಾಕದೇ ಸುಮಾರು 1.37 ಕೋಟಿ ಲೂಟಿ ಮಾಡಿದ್ದಾರೆ.ಪ್ರವೀಣ್. ಧನಶೇಖರ್, ರಾಮಕ್ಕ, ಹರೀಶ್ ಕುಮಾರ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
https://www.newsics.com/2026/01/27/do-you-feel-heavy-in-the-head-even-though-you-have-slept-well/