Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಖ್ಯಾತಿಯ ನಟ ಉಗ್ರಂ ಮಂಜು ಮತ್ತು ಸಂಧ್ಯಾ ಸಿಂಪಲ್ ಆಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ಎಲ್ಲ ಶಾಸ್ತ್ರಗಳನ್ನು ಅಷ್ಟೆ ಅದ್ದೂರಿಯಾಗಿಯೇ ಮಾಡಿದ್ದಾರೆ. ಆದರೆ, ಮದುವೆಯನ್ನ ಜನವರಿ-23 ರಂದು ಧರ್ಮಸ್ಥಳದಲ್ಲಿಯೇ ಆಗಿದ್ದಾರೆ.ಉಗ್ರಂ ಮಂಜು ಮತ್ತು ಸಂಧ್ಯಾ ಮದುವೆಗೆ ಜಾಸ್ತಿ ಜನ ಏನೂ ಬಂದಿರಲಿಲ್ಲ. ಆತ್ಮೀಯರು, ಸ್ನೇಹಿತರು ಹಾಗೂ ಎರಡೂ ಮನೆಯವರು ಈ ಮದುವೆಯಲ್ಲಿದ್ದರು.
ಕನ್ನಡದ ಪೋಷಕ ನಟ ಮತ್ತು ಬಿಗ್ ಬಾಸ್ ಸೀಸನ್ 12ರ ರೆಬೆಲ್ ಸ್ಪರ್ಧಿಯಾಗಿದ್ದ ಉಗ್ರಂ ಮಂಜು ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಂಗತಿ ಇದೀಗ ಸಾಕಷ್ಟು ವೈರಲ್ ಆಗಿದೆ.
ಉಗ್ರಂ ಮಂಜು ಎಂದೇ ಖ್ಯಾತಿ ಪಡೆದುಕೊಂಡಿರುವ ಇವರು, ನಟ ಸುದೀಪ್ ಜತೆಗೆ ‘ಮ್ಯಾಕ್ಸ್’ನಲ್ಲಿ ನಟಿಸಿದ್ದರು. ನಂತರದ ದಿನಗಳಲ್ಲಿ ಮ್ಯಾಕ್ಸ್ ಮಂಜು ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ
https://www.newsics.com/2026/01/23/husband-strangles-wife-to-death-says-it-was-a-heart-attack/