Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗಿಲ್ಲಿ ಗೆಲುವಿನ ಮೆಟ್ಟಿಲು ಏರುತ್ತಿದ್ದಂತೆ ಮಗನ ಮದುವೆ ಬಗ್ಗೆ ಅಪ್ಪ ಅಮ್ಮನಿಗೆ ಚಿಂತೆ ಶುರುವಾಗಿದೆ. ಈ ಹೈದ್ನಿಗೆ ಯಾರನಪ್ಪಾ ಕಟ್ಟೋದು ಅಂತ ಯೋಚ್ನೆ ಮಾಡುತ್ತಿದ್ದಾರೆ. ಇನ್ನು ಗಿಲ್ಲಿ ಕಾವ್ಯ ಜೋಡಿ ಕರ್ನಾಟಕದ ಮನೆ ಮಾತಾಗಿದೆ. ಇವರಿಬ್ರು ಒಂದಾದ್ರೆ ಸುಂದರ ಸಂಸಾರ ಆಗುತ್ತೆ ಅನ್ನೋ ಆಸೆ ಗಿಲ್ಲಿ ಫಾಲೋವರ್ಸ್ ಗೆ ಇದೆ. ಹೀಗಾಗೆ ಮಗನ ಮದ್ವೆ ಬಗ್ಗೆ ಮನ ಬಿಚ್ಚಿ ಮಾತಾಡಿರೋ ಗಿಲ್ಲಿ ತಾಯಿ ಸವಿತಮ್ಮ ಅವನು ಇಷ್ಟ ಪಟ್ಟ ಹುಡುಗಿಯನ್ನ ಕಟ್ಟುತ್ತೇವೆ ಎಂದಿದ್ದಾರೆ.
ಗಿಲ್ಲಿನ ಕಾವ್ಯನ ಮದ್ವೆ ಮಾಡ್ಸೇ ಮಾಡುತ್ತೇವೆ ಅಂತ ಫ್ಯಾನ್ಸ್ ಪಣ ತೊಟ್ಟಿದ್ದಾರೆ. ಗಿಲ್ಲಿಗಾಗಿ ಕಾವು ಮನೆಗೆ ಹೋಗಿ ಹೆಣ್ಣು ಕೇಳುತ್ತೇವೆ. ನಾವು ಬನ್ನೂರ್ ಕುರಿ ನಲ್ಲಿ ಮೂಳೆ ಬಾಡೂಟ ಮಾಡೇ ಮಾಡುತ್ತೇವೆ ಅಂತೆಲ್ಲಾ ಮಾತಾಡುತ್ತಿದ್ದಾರೆ.
ಗಿಲ್ಲಿ ಕಾವ್ಯ ಕಾಂಬಿನೇಷನ್ ಮೇಲೆ ಸಿದ್ಧವಾಗ್ತಿದೆ ಕಥೆ!
ಗಿಲ್ಲಿ ನಟ ಸಿನಿಮಾ ರಂಗದಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ದರ್ಶನ್ರ ಡೆವಿಲ್ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗಿಲ್ಲಿ ಬಣ್ಣ ಹಚ್ಚಿದ್ದಾರೆ. ಗಿಲ್ಲಿಯ ಸೂಪರ್ ಹಿಟ್ ಅನ್ನೋ ಕಾಮಿಡಿ ಥ್ರಿಲ್ಲರ್ ಸಿನಿಮಾ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಇದರ ಮಧ್ಯೆ ಈ ನಲ್ಲಿ ಮೂಳೆ ಸ್ಟಾರ್ ಹಾಗು ಕಾವು ಸಿನಿಮಾಗೂ ಕತೆಗಳು ರೆಡಿಯಾಗ್ತಿವೆಯಂತೆ..