Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್‌ಬಾಸ್ ಗೆದ್ದ ಗಿಲ್ಲಿಯನ್ನು ನಟಿ ಕಾವ್ಯ ಶೈವ ಅಭಿನಂದಿಸಿದ್ದಾರೆ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ ಎಂದು ಶುಭ ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ ಅವರು, ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಹೇ ಗಿಲ್ಲಿ ಅಭಿನಂದನೆಗಳು ಕಣೋ. ಝೀರೋದಿಂದ ಹೀರೋ ಆಗಿದ್ಯಾ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ. ತುಂಬಾ ತುಂಬ ಒಳ್ಳೇದಾಗ್ಲಿ ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಕಾವ್ಯಾಗೆ ಖುಷಿ ಆಗಿದೆ. ‘ಗಿಲ್ಲಿ ಗೆದ್ದಿದ್ದಕ್ಕೆ ನನಗೆ ತುಂಬಾ ಖುಷಿ ಇದೆ. ಆ ಗೆಲುವಿಗೆ ಅವನು ಅರ್ಹ. ಇಷ್ಟು ಜನರ ಪ್ರೀತಿ ಗಳಿಸಿದ್ದಕ್ಕೆ ಫ್ರೆಂಡ್ ಆಗಿ ನನಗೆ ಅವನ ಬಗ್ಗೆ ಬಹಳ ಹೆಮ್ಮೆ ಇದೆ. ಅವನ ಜೊತೆ ಇನ್ನೂ ಮಾತಾಡೋಕೆ ಆಗಿಲ್ಲ. ಮಾತನಾಡಬೇಕು’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.
ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್; ಕಾರಣವೇನು?