newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
06-08-2024, ಮಂಗಳವಾರ
ದಿನ ವಿಶೇಷ:
– ಮಂಗಳಗೌರಿ ವ್ರತ
– ಹಿರೋಷಿಮಾ ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 06/08/2024
ವಾರ- ಮಂಗಳವಾರ
ತಿಂಗಳು- ಆಗಸ್ಟ್
ಬಣ್ಣ- ಕಿತ್ತಳೆ
ತಿಥಿ – ದ್ವಿತೀಯ 19:51:47
ಪಕ್ಷ – ಶುಕ್ಲ
ನಕ್ಷತ್ರ – ಮಾಘ 17:42:53
ಯೋಗ – ವರಿಯಾಣ 10:58:17
ಕರಣ – ಬಾಳವ 06:53:55
ಕರಣ – ಕೌಳವ 19:51:47
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ಕರ್ಕಾಟಕ
ಋತು ವರ್ಷ
ಸೂರ್ಯೋದಯ 06:07:19
ಸೂರ್ಯಾಸ್ತ 18:43:29
ಹಗಲಿನ ಅವಧಿ 12:36:10
ರಾತ್ರಿಯ ಅವಧಿ 11:23:59
ಚಂದ್ರೋದಯ 07:28:25
ಚಂದ್ರಾಸ್ತ 20:12:190*
ರಾಹು ಕಾಲ 15:34 – 17:09 ಅಶುಭ
ಯಮಘಂಡ ಕಾಲ 09:16 – 10:51 ಅಶುಭ
ಗುಳಿಕ ಕಾಲ 12:25 – 13:59
ಅಭಿಜಿತ್ 12:00 – 12:51 ಶುಭ
ದುರ್ಮುಹೂರ್ತ 08:39 – 09:29 ಅಶುಭ
ದುರ್ಮುಹೂರ್ತ 23:17 – 24:07* ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಹೆಚ್ಚಿನ ಜನರು ಅಸಂತುಷ್ಟರಾಗಿ ಇರುವುದಕ್ಕೆ ಮುಖ್ಯ ಕಾರಣ ಪ್ರೀತಿಯ ಕೊರತೆ. ಪ್ರೀತಿ ತುಂಬಿದ ಹೃದಯ ಯಾವತ್ತೂ ನೆಮ್ಮದಿಯಿಂದ ಇರುತ್ತದೆ.
– ಜಿಡ್ಡು ಕೃಷ್ಣಮೂರ್ತಿ
***
ಇಂದಿನ ಇತಿಹಾಸ
ಆಗಸ್ಟ್ 06
ಪ್ರಮುಖ ಘಟನೆಗಳು
* ಪಂಡಿತ ಮಹಾದೇವ ಪ್ರಭಾಕರ ಪೂಜಾರ – ಸುಪ್ರಸಿದ್ಧ ಸಾಹಿತಿ, ವಿದ್ವಾಂಸರಾದ ಪೂಜಾರರು ಆಗಸ್ಟ್ 06, 1884 ರಂದು ಧಾರವಾಡ ಜಿಲ್ಲೆಯ ಬಂಕಾಪುರದಲ್ಲಿ ಜನಿಸಿದರು.
* ಹಿರೋಷಿಮಾ ದಿನ: ಆಗಸ್ಟ್ 06, 1945 ರಂದು ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಜಪಾನಿನ ಹಿರೋಷಿಮಾ ಮೇಲೆ ಅಮೆರಿಕ ಅಣು ಬಾಂಬನ್ನು ಎಸೆಯಿತು. ಯುದ್ಧದಲ್ಲಿ ಮೊತ್ತ ಮೊದಲನೆಯ ಅಣ್ವಸ್ತ್ರ ಬಳಕೆ ಇದು. ‘ಎನೋಲಾ ಗೇ’ ಹೆಸರಿನ ಬಿ – 29 ಸೂಪರ್ ಫೋರ್ ಟ್ರೆಸ್ ಬಾಂಬರ್ ಹಿರೋಷಿಮಾ ಪಟ್ಟಣದ ಮೇಲೆ ಬೆಳಗ್ಗೆ 8.15ರ ವೇಳೆಗೆ ಬಾಂಬನ್ನು ಬೀಳಿಸಿತು. ಪಟ್ಟಣದಿಂದ 1900 ಅಡಿಗಳಷ್ಟು ಎತ್ತರದಲ್ಲೇ ಬಾಂಬ್ ಸ್ಫೋಟಗೊಂಡಿತು. ಪಟ್ಟಣದ ಮೂರನೇ ಎರಡರಷ್ಟು ಭಾಗ ಧ್ವಂಸವಾಯಿತು. ಅಂದಾಜು 3.5 ಲಕ್ಷ ಜನರ ಪೈಕಿ 1.4 ಲಕ್ಷ ಜನ ಅಸುನೀಗಿದರು.
* ಆಗಸ್ಟ್ 06, 1991 ರಂದು ಟಿಮ್ ಬರ್ನರ್ಸ್ – ಲೀ ವರ್ಲ್ಡ್ ವೈಡ್ ವೆಬ್‌ಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
* ಆಗಸ್ಟ್ 06, 1925 ರಂದು ಆಧುನಿಕ ಭಾರತದ ಸಂಸ್ಥಾಪಕರಲ್ಲೊಬ್ಬರಾಗಿದ್ದ ಸುರೇಂದ್ರನಾಥ್ ಬ್ಯಾನರ್ಜಿ ನಿಧನರಾದರು.
* ಆಗಸ್ಟ್ 06, 1926 ರಂದು, ಅಮೆರಿಕದ ಈಜುಗಾರ್ತಿ ಗೆರ್ಟ್ರೂಡ್ ಕ್ಯಾರೋಲಿನ್ ಎಡೆರ್ಲೆ (ಅಲೆಗಳ ರಾಣಿ) ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
* ಶ್ರೇಷ್ಠ ಸಾಮಾಜಿಕ ಸುಧಾರಕರು ಮತ್ತು ನಾಯಕರು ರುಕ್ಮಿಣಿ ಲಕ್ಷ್ಮೀಪತಿ ಅವರು ಆಗಸ್ಟ್ 06, 1951 ರಂದು, ನಿಧನರಾದರು.