newsics.com
ಮುಂಬೈ: ಬಿಗ್ ಬಾಸ್ 13ರಲ್ಲಿ ಕಾಣಿಸಿಕೊಂಡ ಶೆಫಾಲಿ ಜರಿವಾಲ ಪಾಪರಾಜಿಗಳ ಝೂಮ್ ಅಸ್ತ್ರಕ್ಕೆ ಖಡಕ್ ಉತ್ತರ ನೋಡಿದ್ದಾರೆ.
ಬಿಗ್ ಬಾಸ್ ಖ್ಯಾತಿ ಬಳಿಕ ಶೆಫಾಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯವಾಗಿದ್ದಾರೆ. ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
ಅಬ್ರ ಕಾ ಡಬ್ರಾ ಪೋಡ್‌ಕಾಸ್ಟ್‌ನಲ್ಲಿ ಶೆಫಾಲಿ ಪಾಪರಾಜಿಗಳು ಝೂಮ್ ಮಾಡಿ ಕ್ಲಿಕ್ಕಿಸುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಪರಾಗ್ ಜೊತೆ ನಿಮ್ಮ ರೀಲ್ಸ್ ನೋಡಿದ್ದೇನೆ. ಆದರೆ ನಿಮ್ಮ ರಿಂಗ್ ಕೆಳಗೆ ಬಿದ್ದಾಗ ನೀವು ಬಗ್ಗಿ ಹೆಕ್ಕಿದ್ದೀರಿ. ಆದರೆ ಕ್ಯಾಮೆರಾಮ್ಯಾನ್ ಇದ್ದರೆ ಝೂಮ್ ಮಾಡುತ್ತಿದ್ದರು ಎಂದು ಸಂದರ್ಶಕ ಹೇಳಿದ್ದಾನೆ.
ಶೆಫಾಲಿ, ನಾನು ಪಾಪ್ಸ್ ಝೂಮ್ ಮಾಡುತ್ತಾರೋ ಇಲ್ಲವೋ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ ಜಿಮ್‌ನಲ್ಲಿ ಹಿಂಭಾಗ ಚೆನ್ನಾಗಿ ಕಾಣಬೇಕು ಎಂದು ವರ್ಕೌಟ್ ಮಾಡುತ್ತೇನೆ ಎಂದಿದ್ದಾರೆ.
ಪಾಪ್ಸ್ ಝೂಮ್ ಮಾಡಿ ರೆಕಾರ್ಡ್ ಮಾಡುವ ಪರಿಪಾಠಕ್ಕೆ ನಾನು ಅಂಜುವುದಿಲ್ಲ. ಹೀಗಾಗಿ ನಾನು ಅವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶೆಫಾಲಿ ಹೇಳಿದ್ದಾರೆ. ನನ್ನ ಹಿಂಭಾಕ ಪಾಪ್ಸ್ ಕ್ಯಾಮೆರಾದಲ್ಲಿ ಚಂದ ಕಂಡರೆ ತಪ್ಪೇನು ಎಂದು ಶೆಫಾಲಿ ಪ್ರಶ್ನಿಸಿದ್ದಾರೆ.