Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾಸನ: ಏಳನೇ ತರಗತಿಯೊಬ್ಬ ಬಾಲಕ ಇವೆಲ್ಲವನ್ನೂ ಬದಿಗಿಟ್ಟು ವಿಶಿಷ್ಟ ಸಾಧನೆಯ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿರುವ ಘಟನೆ ಹಾಸನದಲ್ಲಿ ನಡೆದಿದೆ.ನಗರದ ಪೋದರ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿ.ಎ. ಪರಿಣಿತ್ ಗೌಡ ಎಂಬ ಬಾಲಕ, ಕ್ಯೂಬ್ ಆಟದಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದು, ಏಷ್ಯಾದ ವಿವಿಧ ದೇಶಗಳ 47 ಲಕ್ಷ ಜನ ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.ಈ ಕುರಿತು ಮಾತನಾಡಿದ ಸಿ.ಎ. ಪರಿಣಿತ್ ಗೌಡ, ನನಗೆ ಮೂರು ವರ್ಷಗಳ ಹಿಂದೆ ಜನ್ಮದಿನದ ಉಡುಗೊರೆಯಾಗಿ ಮೊದಲ ಬಾರಿಗೆ 3*3 ಕ್ಯೂಬ್ ದೊರೆಯಿತು. ಅದನ್ನು ಹಿಡಿದು ಆಟ ಕಲಿಯಲು ಪ್ರಾರಂಭಿಸಿದೆ. ಏನಾದರೂ ವಿಭಿನ್ನ ಸಾಧನೆ ಮಾಡಬೇಕು ಎಂಬ ಆಸೆ ನನಗಿತ್ತು. ಯೂಟ್ಯೂಬ್‌ನಲ್ಲಿ ಕ್ಯೂಬ್ ಆಟದ ಬಗ್ಗೆ ವೀಕ್ಷಣೆ ಮಾಡಿ ಹಂತ ಹಂತವಾಗಿ ಕಲಿತೆ. ಈ ಸಾಧನೆಯಲ್ಲಿ ನನ್ನ ತಂದೆ-ತಾಯಿ ಸಂಪೂರ್ಣ ಸಹಕಾರ ನೀಡಿದರು ಎಂದು ತಿಳಿಸಿದ.”ನಂತರ ಕ್ಯೂಬ್ ಆಟವನ್ನು ಸಂಪೂರ್ಣವಾಗಿ ಅರಿತುಕೊಂಡ ಮೇಲೆ ಕಣ್ಣು ಮುಚ್ಚಿಕೊಂಡೇ ಅದನ್ನು ಒಂದು ನಿಮಿಷದಲ್ಲಿ ಪೂರೈಸುವ ಅಭ್ಯಾಸ ಮಾಡಿಕೊಂಡೆ. ಅಮ್ಮ ವಿಭಿನ್ನ ರೀತಿಯ ಕ್ಯೂಬ್‌ಗಳನ್ನು ತೆಗೆದುಕೊಂಡು ಕೊಡಲು ಪ್ರಾರಂಭಿಸಿದರು. ಒಟ್ಟು ಎಂಟು ವಿಧದ ಕ್ಯೂಬ್‌ಗಳನ್ನು ಕಣ್ಣು ಮುಚ್ಚಿಕೊಂಡೇ ಒಂದು ನಿಮಿಷದಲ್ಲಿ ನಿರ್ವಹಿಸುವ ಮಟ್ಟಕ್ಕೆ ತಲುಪಿದ್ದೇನೆ. ಮೊದಲು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಲ್ಲಿ ಹೆಸರು ದಾಖಲಾಗಿತ್ತು. ಬಳಿಕ ಅಲ್ಲಿನವರು ಏಷ್ಯನ್ ಬುಕ್ ಆಫ್ ರೆಕಾರ್ಡ್‌ಗೆ ಪ್ರಯತ್ನಿಸಲು ಸಲಹೆ ನೀಡಿದರು. ಅದರಂತೆ ಈಗ ಈ ಸಾಧನೆ ಸಾಧ್ಯವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಕರೂರ್ ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್ ಗೆ ಮತ್ತೆ ನೋಟಿಸ್ ನೀಡಿದ ಸಿಬಿಐ