newsics.com
ಗ್ರೀಸ್: ಹೊಸ ವೈರಸ್ ಯುರೋಪ್ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಯಿದ್ದು, ಗ್ರೀಸ್ ಇದನ್ನು ತಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.
ಗ್ರೀಸ್ನ್ನು ಕಾಡುತ್ತಿರುವ ಆ ಹೊಸ ರೋಗವೇ ಪ್ಲೇಗ್. ಆದ್ರೆ ಇದು ಶತಮಾನಗಳ ಹಿಂದೆ ಇಲಿಗಳಿಂದ ಹರಡುತ್ತಿದ್ದ ಪ್ಲೇಗ್ ಅಲ್ಲ, ಕುರಿಗಳಿಂದ ಹರಡುತ್ತಿರುವ ಪ್ಲೇಗ್.
ಗ್ರೀಸ್ನಾದ್ಯಂತ ಸಾವಿರಾರು ಕುರಿಗಾಹಿಗಳು ಈ ಕುರಿ ಪ್ಲೇಗ್ನಿಂದ ಬಸವಳಿದು ಹೋಗಿದ್ದಾರೆ. ಈ ಹೊಸ ಕಾಯಿಲೆಯಿಂದಾಗಿ ಗ್ರೀಸ್ ಚಿಂತೆಗೆ ಬಿದ್ದಿದೆ. ಇದು ಕೂಡ ಕೋವಿಡ್ ರೀತಿಯಲ್ಲಿಯೇ ಅತಿವೇಗವಾಗಿ ಪಸರಿಸುತ್ತಿದೆ. ಆದ್ರೆ ಈ ಒಂದು ವೈರಸ್ನಿಂದಾಗಿ ಮನುಷ್ಯರಿಗೆ ಅಷ್ಟೊಂದು ಸಮಸ್ಯೆಯಿಲ್ಲ. ಆದ್ರೆ ಈ ಸೋಂಕು ತಾಗಿದವರಲ್ಲಿ 80 ರಿಂದ 90 ರಷ್ಟು ಜನರು ಅಸುನೀಗಿದ್ದಾರೆ.
ಅದು ಅಲ್ಲದೇ ಕುರಿ ಹಾಗೂ ಮೇಕೆಗಳ ಮಾರಣಹೋಮವಾಗುತ್ತಿದೆ ಹೀಗಾಗಿಯೇ ಗ್ರೀಸ್ ಸರ್ಕಾರ ಕುರಿಗಳ ಓಡಾಟವನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ಹುಲ್ಲುಗಾವಲು ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವುದು, ಕಟುಕರಿಂದ ಕುರಿ ಮಾಂಸ ಮಾರಾಟ ಸೇರಿದಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕುರಿಗಳ ಸಾಗಣೆ, ಮಾರಾಟ ಹಾಗೂ ಖರೀದಿಯಂತಹ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿದೆ.