Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ವಿಧಿಸಿದೆ. ಭಾರತ ಅನೇಕ ಬಾರಿ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದರೂ ಟ್ರಂಪ್ ಭಾರತದ ವಸ್ತುಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿಲ್ಲ.
ಭಾರತ ಇದೀಗ ಸದ್ದಿಲ್ಲದೆ ಅಮೆರಿಕಕ್ಕೆ ತಿರುಗೇಟು ನೀಡಿದೆ. ಇಡೀ ಜಗತ್ತು ಅಮೆರಿಕ ಹಾಕುವ ತಾಳಕ್ಕೆ ಕುಣಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಭಾರತ ಅಮೆರಿಕದ ದ್ವಿದಳ ಧಾನ್ಯಕ್ಕೆ ಶೇ. 30ರಷ್ಟು ತೆರಿಗೆ ವಿಧಿಸುವ ಮೂಲಕ ಶಾಕ್ ನೀಡಿದೆ.
ಜನವರಿ 16ರಂದು ಬರೆದ ಪತ್ರದಲ್ಲಿ, ಭಾರತವು ಕಳೆದ ವರ್ಷ ಅಕ್ಟೋಬರ್ 30ರಂದು ಅಮೆರಿಕದ ಹಳದಿ ಬಟಾಣಿ ಸೇರಿದಂತೆ ದ್ವಿದಳ ಧಾನ್ಯಗಳ ಮೇಲೆ 30 ಶೇಕಡಾ ಸುಂಕ ವಿಧಿಸಿದ್ದು,
ಮೊಂಟಾನಾ ಮತ್ತು ಉತ್ತರ ಡಕೋಟಾ ದ್ವಿದಳ ಧಾನ್ಯಗಳ ಬೆಳೆಗಳ 2 ಪ್ರಮುಖ ಉತ್ಪಾದಕರು ಮತ್ತು ಭಾರತವು ವಿಶ್ವದ ಸೇವನೆಯ ಸುಮಾರು ಶೇ. 27ರಷ್ಟು ಅತಿದೊಡ್ಡ ಗ್ರಾಹಕ ಎಂದು ಸೆನೆಟರ್‌ಗಳು ತಿಳಿಸಿದ್ದಾರೆ. ಇದು ನವೆಂಬರ್ 1ರಿಂದ ಜಾರಿಗೆ ಬಂದಿದೆ ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಭಾರತ ಸರ್ಕಾರ ಯಾವುದೇ ವ್ಯಾಪಕ ಪ್ರಚಾರ ಮಾಡದ ಕಾರಣ, ಈ ನಿರ್ಧಾರ ಹೆಚ್ಚಿನ ಗಮನ ಸೆಳೆಯಲಿಲ್ಲ ಎಂದು ಸೆನೆಟರ್‌ಗಳು ಹೇಳಿದ್ದಾರೆ.
ದ್ವಿದಳ ಧಾನ್ಯಗಳ ಸುಂಕಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವಂತೆ ಸೆನೆಟರ್‌ಗಳು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಇದರಿಂದ ಭಾರತದಲ್ಲಿನ ಅಮೇರಿಕನ್ ಉತ್ಪಾದಕರು ಮತ್ತು ಗ್ರಾಹಕರಿಗೆ ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತೀಯ ಸುಂಕಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸುವ ಈ ವಿನಂತಿಯು ಯುಎಸ್ ಭಾರತೀಯ ಆಮದುಗಳ ಮೇಲೆ ಶೇ. 50ರಷ್ಟು ಸುಂಕವುನ್ನು ಜಾರಿ ಮಾಡಿರುವ ಸಮಯದಲ್ಲಿ ಬಂದಿದೆ.
https://www.newsics.com/2026/01/18/indigo-fined-rs-22-2-crore-for-cancelling-over-5000-flights/