newsics.com
ಬೆಂಗಳೂರು: ಇಲ್ಲೊಬ್ಬ ದರ್ಶನ್ ಅಭಿಮಾನಿ ತನ್ನ ಹಣೆ ಮೇಲೆ ʼಡಿ ಬಾಸ್ʼ ಹೆಸರಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾನೆ.
ಈ ಕುರಿತ ಪೋಸ್ಟ್ ಒಂದನ್ನು karunada_adhipati_official ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದೆಂಥಾ ಹುಚ್ಚು ಅಭಿಮಾನ ಎನ್ನುತ್ತಿದ್ದಾರೆ ನೆಟ್ಟಿಗರು.
ʼತಂದೆ-ತಾಯಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಬಿಟ್ಟು ಇದೆಲ್ಲಾ ಬೇಕಿತ್ತಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯೋಧರ ಹೆಸರನ್ನು ಟ್ಯಾಟೂ ಹಾಕಿದ್ರೆ ನಿನಗೆ ಪುಣ್ಯಾನಾದ್ರೂ ಸಿಕ್ತಿತ್ತು ಕಣಯ್ಯʼ ಎಂದು ಹೇಳಿದ್ದಾರೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಎರಡು ತಿಂಗಳಾಗುತ್ತಾ ಬಂದಿದೆ. ಪರಪ್ಪನ ಅಗ್ರಹಾರಕ್ಕೆ ದರ್ಶನ್ ನೋಡಲು ಕುಟುಂಬಸ್ಥರು, ಸ್ನೇಹಿತರು ಬರ್ತಾನೆ ಇದ್ದಾರೆ
https://twitter.com/kannadaboxoffic/status/1819972186054218090