newsics.com
ಅಮೆರಿಕದಕಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆಯಲ್ಲಿ ಹೇನು ಕಾಣಿಸಿಕೊಂಡ ಕಾರಣಕ್ಕೆ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಈ ಕಾರಣ ಕೇಳಿದ ಇತರೆ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ.
ಲಾಸ್ ಏಂಜಲೀಸ್ನಿಂದ ಹೊರಟು ನ್ಯೂಯಾರ್ಕ್ಗೆ ಹೊರಟಿದ್ದ ವಿಮಾನವನ್ನು ಫೀನಿಕ್ಸ್ ಕಡೆಗೆ ಪ್ರಯಾಣ ಬೆಳೆಸಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಥಾನ್ ಜುಡೆಲ್ಸನ್ ಅವರು ಟಿಕ್ಟಾಕ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಯಾವ ಕಾರಣಕ್ಕಾಗಿ ವಿಮಾನ ಫೀನಿಕ್ಸ್ ಕಡೆಗೆ ಹೋಗುತ್ತಿದೆ ಎಂಬುದರ ಕುರಿತು ಅಮೇರಿಕನ್ ಏರ್ಲೈನ್ಸ್ ಪ್ರಯಾಣಿಕರಿಗೆ ತಿಳಿಸಲಿಲ್ಲ ಎಂದು ಅವರು ಹೇಳಿದ್ದಾರೆ.