Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಎಲೆಕೋಸಿನಲ್ಲಿ ಅಡಗಿದ್ದ ಹುಳುವೊಂದು ವಿದ್ಯಾರ್ಥಿನಿಯೊಬ್ಬಳನ್ನು ಬಲಿ ಪಡೆದಿದೆ.
ಸಾಮಾನ್ಯವಾಗಿ ಎಲೆಕೋಸನ್ನು ಮನೆಗೆ ತಂದಾಗ ಅದನ್ನು ಚೆನ್ನಾಗಿ ಉಪ್ಪು, ಅರಿಶಿಣ ಹಾಕಿ ನೆನೆಸಿಟ್ಟು ತೊಳೆದು ಆಮೇಲೆ ಬಳಕೆ ಮಾಡಬೇಕಾಗಿದೆ. ಕೆಲವೊಮ್ಮೆ ಮನೆಯಲ್ಲಿ ಎಷ್ಟೇ ಶುಚಿತ್ವ ಕಾಪಾಡಿಕೊಂಡರೂ, ಈಗ ಎಲೆಕೋಸನ್ನು ಪಿಜ್ಜಾ, ಬರ್ಗರ್, ಬನ್, ಸ್ಯಾಂಡ್ವಿಚ್, ಪಾನಿಪುರಿ, ಮಸಾಲಾಪುರಿಗಳಲ್ಲಿ ಸೇರಿದಂತೆ ಹಸಿಹಸಿಯಾಗಿಯೇ ಬಳಸಲಾಗುತ್ತದೆ. ಇದರಿಂದ ಟೇಸ್ಟ್ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಅದರಿಂದ ಸಾವೇ ಬರಬಹುದು ಎನ್ನುವುದಕ್ಕೆ ಈ ಘಟನೆ ಉದಾಹರಣೆ.
ಆಗಿದ್ದೇನು?
ಉತ್ತರ ಪ್ರದೇಶದ ಅಮ್ರೋಹಾದ 19 ವರ್ಷದ ಇಲ್ಮಾ ಖುರೇಷಿ ಸಾವಿನ ಮೃತಪಟ್ಟ ವಿದ್ಯಾರ್ಥಿನಿ. ವೈದ್ಯೆಯಾಗುವ ಕನಸು ಕಂಡಿದ್ದ ಈಕೆಯನ್ನು ಎಲೆಕೋಸಿನ ಹುಳು ಬಲಿ ಪಡೆದಿದೆ.
ನೀಟ್ ಆಕಾಂಕ್ಷಿಯಾಗಿದ್ದ ಇಲ್ಮಾ, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇದ್ದಕ್ಕಿದ್ದಂತೆಯೇ ಆಕೆಗೆ ತೀವ್ರ ತಲೆನೋವು ಮತ್ತು ಸೆಳೆತ ಬರಲು ಪ್ರಾರಂಭಿಸಿತು. ಸ್ಥಿತಿ ತುಂಬಾ ಹದಗೆಟ್ಟಿತು, ಮೂರ್ಛೆ ತಪ್ಪಿ ಬಿದ್ದಳು.
ಕುಟುಂಬ ಸದಸ್ಯರು ಆಕೆಯನ್ನು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ವೈದ್ಯರು ಬಹಿರಂಗಪಡಿಸಿದ ವಿಷಯ ಮಾತ್ರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಆಕೆಯ ಮೆದುಳಿನಲ್ಲಿ 20ಕ್ಕೂ ಹೆಚ್ಚು ಗೆಡ್ಡೆಗಳು ಕಂಡುಬಂದವು.
ವೈದ್ಯರು ಯುವತಿಯ ಎಂಆರ್‌ಐ ಸ್ಕ್ಯಾನ್ ನಡೆಸಿದಾಗ, ವರದಿಯಲ್ಲಿ ಆಕೆಯ ಮೆದುಳಿನೊಳಗೆ 20ಕ್ಕೂ ಹೆಚ್ಚು ಸಣ್ಣ ಚೀಲಗಳು ಕಂಡುಬಂದವು. ಈ ಗೆಡ್ಡೆಗಳು ಯಾವುದೇ ಸಾಮಾನ್ಯ ಕಾಯಿಲೆಯಿಂದ ಉಂಟಾಗಿಲ್ಲ, ಆದರೆ ಅಪಾಯಕಾರಿ ಪರಾವಲಂಬಿ ಕೀಟದಿಂದ ಉಂಟಾಗಿವೆ ಎನ್ನುವುದು ವೈದ್ಯರಿಗೆ ತಿಳಿಯಿತು. ವೈದ್ಯರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಇಲ್ಮಾಳ ಬದುಕಲಿಲ್ಲ.
ವೈದ್ಯರು ಹೇಳಿದ್ದೇನು?
ವೈದ್ಯರ ಪ್ರಕಾರ, ಮೆದುಳಿನಲ್ಲಿ ಇಂತಹ ಗೆಡ್ಡೆಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ ವಿಶೇಷ ರೀತಿಯ ಹುಳು. ಇದು ಹೆಚ್ಚಾಗಿ ಕಲುಷಿತ ಆಹಾರದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಸೋಂಕಿತ ಅಥವಾ ಸರಿಯಾಗಿ ತೊಳೆಯದ ಎಲೆಕೋಸು, ಗೋಬಿ ಸೇರಿದಂತೆ ಈ ಪರಾವಲಂಬಿಯು ಬೇಯಿಸದ ಮಾಂಸ ಅಥವಾ ಹೊರಗೆ ಲಭ್ಯವಿರುವ ಫಾಸ್ಟ್ ಫುಡ್ನಲ್ಲಿ ಹಾಕಿರುವ ಇಂಥ ತರಕಾಗಿ, ಮಾಂಸಗಳ ಮೂಲಕ ದೇಹವನ್ನು ತಲುಪುತ್ತದೆ. ಇದು ರಕ್ತದ ಹರಿವಿನೊಂದಿಗೆ ನಿಧಾನವಾಗಿ ಮೆದುಳನ್ನು ಸೇರುತ್ತದೆ. ಅಲ್ಲಿ ಸ್ಥಾನವನ್ನು ಪಡೆಯುತ್ತದೆ. ಇದು ನಂತರ ಮಾರಕವೆಂದು ಸಾಬೀತುಪಡಿಸುತ್ತದೆ. ಅದೇ ರೀತಿ ವಿದ್ಯಾರ್ಥಿನಿ ಹೆಚ್ಚಾಗಿ ಎಲೆಕೋಸನ್ನು ಬಳಸುತ್ತಿದ್ದುದರಿಂದ ಅದರಲ್ಲಿನ ಹುಳು ರಕ್ತದ ಮೂಲಕ ಮೆದುಳು ತಲುಪಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಧವೆ ಸೊಸೆ ಮಾವನ ಆಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ : ಸುಪ್ರೀಂ ಮಹತ್ವದ ತೀರ್ಪು.!