Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಒಂದು ಮನೆ ಕಟ್ಟಬೇಕು , ನಮ್ಮದು ಅಂತ ಒಂದು ಸಣ್ಣ ಸ್ವಂತ ಸೂರು ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆ ರೀತಿ ಕನಸು ಹೊತ್ತು ಸಣ್ಣ ಸೈಟ್‌ಗಳಲ್ಲಿ ಮನೆ ಕಟ್ಟಿಸುವವರಿಗೆ ನಗರಾಭಿವೃದ್ಧಿ ಇಲಾಖೆ ಒಂದು ಗುಡ್ ನ್ಯೂಸ್ ಕೊಟ್ಟಿದೆ.
60 ಚ.ಮೀ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸುವ ಕಟ್ಟಡಗಳ ಹಿಂಭಾಗದಲ್ಲಿ ಸೆಟ್‌ಬ್ಯಾಕ್ ಬಿಡುವಂತಿಲ್ಲ. ಮುಂಭಾಗದಲ್ಲಿ 0.75 ಮೀಟರ್ (ಎರಡೂವರೆ ಅಡಿ), ಎಡ ಅಥವಾ ಬಲ ಭಾಗದ ಯಾವುದಾದರೂ ಒಂದು ಕಡೆ 0.6 ಮೀಟರ್ (ಎರಡು ಅಡಿ) ಸೆಟ್‌ಬ್ಯಾಕ್ ನಿಗದಿಪಡಿಸಲಾಗಿದೆ.
ಈ ಮೊದಲು 20*30 ಅಡಿ ಅಳತೆಯ ನಿವೇಶನದ ಸುತ್ತಲೂ 1 ಮೀಟರ್ ಜಾಗ ಬಿಡಬೇಕು ಹಾಗೂ 30*40 ಅಡಿ ಅಳತೆಯ ನಿವೇಶನಗಳ ಸುತ್ತಲೂ ಒಂದೂವರೆ ಮೀಟರ್ ಜಾಗ ಬಿಡಬೇಕು ಎನ್ನುವ ನಿಯಮವಿತ್ತು. ಅಲ್ಲದೇ, ದೊಡ್ಡ ನಿವೇಶನಗಳ ಒಟ್ಟಾರೆ ವಿಸ್ತೀರ್ಣದ ಆಧಾರದ ಮೇಲೆ ಸುತ್ತಲು ಇಂತಿಷ್ಟು ಸೆಟ್ ಬ್ಯಾಕ್ ಬಿಡಬೇಕು ಎಂಬ ನಿಯಮವಿತ್ತು. ಅದನ್ನು ಪರಿಷ್ಕರಿಸಿ ಇಂತಿಷ್ಟು ವಿಸ್ತೀರ್ಣದ ಸೆಟ್ ಬ್ಯಾಕ್ ಬಿಡಬೇಕು ಎನ್ನುವುದನ್ನು ನಗರಾಭಿವೃದ್ಧಿ ಇಲಾಖೆಯೇ ನಿಗದಿಪಡಿಸಿದೆ.
1500 ಚದರಡಿ ವಿಸ್ತೀರ್ಣದವರೆಗಿನ ಸೈಟ್‌ಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸೆಟ್ ಬ್ಯಾಕ್ ಜಾಗ ಕಡಿಮೆ ಮಾಡಲಾಗಿದೆ. ಈ ಹೊಸ ನಿಯಮವೂ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳಿಗೂ ಅನ್ವಯಿಸುತ್ತದೆ.
500 ಚದರಡಿ ಮೀಟರ್‌ವರೆಗಿನ ನಿವೇಶನದಲ್ಲಿ ನಿರ್ಮಿಸುವ ಕೈಗಾರಿಕಾ ಕಟ್ಟಡಗಳಿಗೆ ಸೆಟ್‌ಬ್ಯಾಕ್‌ನಲ್ಲಿ ವಿನಾಯಿತಿ ನೀಡಲಾಗಿದೆ.