Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಶಿಕ್ಷಣ ಬದಲಾಗಬೇಕೆಂದು ಪತ್ರ ಬರೆದಿಟ್ಟು ಜೀವ ಕಳೆದುಕೊಂಡ ನಿರುದ್ಯೋಗಿ ಪದವೀಧರ! ಡೆತ್ ನೋಟ್‌ನಲ್ಲೇನಿದೆ?
ಕರ್ನಾಟಕಪ್ರಮುಖ

ಶಿಕ್ಷಣ ಬದಲಾಗಬೇಕೆಂದು ಪತ್ರ ಬರೆದಿಟ್ಟು ಜೀವ ಕಳೆದುಕೊಂಡ ನಿರುದ್ಯೋಗಿ ಪದವೀಧರ! ಡೆತ್ ನೋಟ್‌ನಲ್ಲೇನಿದೆ?

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಶಿವಮೊಗ್ಗ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದ ನಿರುದ್ಯೋಗಿ ಪದವೀಧರನೊಬ್ಬ ಆತ್ಮಹ*ತ್ಯೆಗೆ ಶರಣಾಗಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕೈಸೋಡಿಯಲ್ಲಿ ಈ ಘಟನೆ ನಡೆದಿದ್ದು, ರಾಕೇಶ್(21) ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಪದವಿ ವ್ಯಾಸಂಗದ ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ ರಾಕೇಶ್ ತಯಾರಿ ನಡೆಸಿದ್ದ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ರಾಕೇಶ್, ಮಾನಸಿಕವಾಗಿ ತುಸು ದುರ್ಬಲನಾಗಿದ್ದ ಎಂದು ಹೇಳಲಾಗಿದೆ.

ಸೋಮವಾರ ಬೆಳಗ್ಗೆ ಡೆತ್ ನೋಟ್ ಬರೆದಿಟ್ಟು ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದ. ವಿಷಯ ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ಮುಂದಾಗಿದ್ದರು. ಆದರೆ ವಿಷಯ ತಿಳಿದ ಪೊಲೀಸರು ಅಂತ್ಯಕ್ರಿಯೆ ನಿಲ್ಲಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ರಾಕೇಶ್ ಮೃತದೇಹ ಹಸ್ತಾಂತರಿಸಿದ್ದಾರೆ.

ರಾಕೇಶ್, ಕೈಸೋಡಿಯ ಉಮೇಶ್ ಹಾಗೂ ಗೀತಾ ದಂಪತಿ ಕಿರಿಯ ಪುತ್ರ. ಇಬ್ಬರು ಹೆಣ್ಣು ಮಕ್ಕಳಿದ್ದು, ಓರ್ವ ಪುತ್ರಿಗೆ ವಿವಾಹವಾಗಿದೆ. ಇನ್ನೋರ್ವ ಪುತ್ರಿಗೆ ವಿವಾಹವಾಗಬೇಕಿದೆ.

ಡೆತ್‌ನೋಟ್‌ನಲ್ಲೇನಿದೆ?:

ನಾನು ಸಾಯ್ತಾ ಇದೀನಿ. ಇದಕ್ಕೆ ಕಾರಣ ನಾನು online mental guidence ತಗಳ್ತಿದ್ದೆ. ಹಾಗೇ what’s app ಅಲ್ಲಿ ಯಾವುದೇ mental support ತಗೋಬೇಡಿ ಅಂತ ಎಲ್ಲಾ ವಿದ್ಯಾರ್ಥಿಗಳು ಹಾಗೂ ಜನರಿಗೆ ಹೇಳಿ. ನಾನು ಸುಳ್ಳು ಸುಳ್ಳಾಗಿ ನಮ್ ಅಮ್ಮನ ಒತ್ತಡಕ್ಕೆ odtidde ಅಂತಾ ತುಂಬಾ ಸ್ವಲ್ಪ ಜನರತ್ರ ಹೇಳಿದೀನಿ, ಅದು ಸುಳ್ಳು.

Online mental support ಇಂದ ನನ್ನ ಸ್ವಂತ ಆಲೋಚನೆ, decision making ability, ಧೈರ್ಯ ಎಲ್ಲಾ ಕಡಿಮೆ ಆಗಿತ್ತು. ಹಾಗೆ ಯಾವುದೇ friends ಜೋತೇನು sertirlilla. ಸದ್ಯಕ್ಕೆ ನನಗೇ ಸಾಯೋಕೆ ಬಿಟ್ರೆ ಏನಕ್ಕೂ ಧೈರ್ಯ ಬರದ ಹಾಗೆ ಆಗಿದೆ. ಯಾರೂ ಬೈಕೊಳ್ಬೇಡಿ, ಆತ್ಮಹತ್ಯೆ ಮಾಡ್ಕೊಂಡ ಅಂತ. ದೇವರು ನನ್ನ ಕರ್ಕೊಳೋಕೆ ready ಇದಾನೆ. ನಾನೇಳೋ msg ನಿಂದ ಬದಲಾವಣೆ ತನ್ನಿರಿ.

ನಾನೂ education system ನಲ್ಲಿ ಬದಲಾವಣೆ ತರೋಕೆ ಹೇಳ್ತೀನಿ. ಮಕ್ಕಳಲ್ಲಿ ಅವರ ಪ್ರತಿಭೇನ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಕೊಳ್ಳಲು ಅವರಿಗೆ ಸಪೋರ್ಟ್ ಮಾಡ್ಕೊಡಿ. ಗುರುಕುಲದಲ್ಲಿ ದ್ರೋಣಾಚಾರ್ಯರು ಸಾಮರ್ಥ್ಯ ಗುರುತಿಸುವಂತೆ. ಯಾವುದೇ career irbodu ತುಂಬಾ ಚಿಕ್ಕದು ಇರ್ಬೋದು ಅದನ್ನೇ ಅವರು ದೊಡ್ಡ ಮಟ್ಟದಲ್ಲಿ ಮಾಡುವ ರೀತಿ education ಅಲ್ಲಿ ಹೇಳಿ ಕೊಡಿ. ಎಲ್ಲ ಮಕ್ಕಳು ಕುಷಿ ಇಂದ ಸಣ್ಣ ಕೆಲಸವಾದರೂ ಇಷ್ಟಪಟ್ಟು ಮಾಡುವಂಥದ್ದಾಗ್ಗಿರಲಿ. Yash ಅವರ ಮಾತುಗಳು ನಿಜ ಅವರ ಬಂದ ಹಾದಿ weekend with Ramesh ಪಾಠವಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ನೀಡಿ.

ಕಷ್ಟ ಪಟ್ಟು ಓದಬೇಕು. job ತಗೋಬೇಕು ಅಂತ ಚಿಕ್ಕ ಮಕ್ಕಳಲ್ಲಿ ಹೇಳ್ಬೇಡಿ. ಅವರ ಸಾಮರ್ಥ್ಯ ಬೇರೆ ಬೇರೆ ಇರತ್ತೆ. ಅದಕ್ಕೆ ಸಪೋರ್ಟ್ ಮಾಡಿ. ಅವರಿಗೆ ಏನಾದ್ರೂ ಮಾಡಪ್ಪ ನಿನಗೆ ಇಷ್ಟ ಇರೋವಂಥದ್ದು ಅದನ್ನೇ ದೊಡ್ಡ ಮಟ್ಟದಲ್ಲಿ ಮಾಡಬಹುದು ಅಂತ ಹೇಳಿ ಕಳುಹಿಸಿ ಮಕ್ಕಳಿಗೆ. ಇದು 18 ವರ್ಷದೊಳಗೆ ಹೀಗೆ ಹೇಳಿ ಕೊಡಿ. ಹಣಕ್ಕಾಗಿ ಓದುವುದನ್ನು ನಿಲ್ಲಿಸಬೇಕು. Job dream ಇದ್ರೆ ಮಾತ್ರ ಓದಿಸಿ.

Life ಅಲ್ಲಿ successful ಆಗೋದು luck ಇದ್ರೆ ಮಾತ್ರ ಅಂತಾರೆ ಅದು ಸುಳ್ಳು. ಧರ್ಮದ ಪ್ರಕಾರ talent/ ಯೋಗ್ಯತೆ ಅಂತಾರೆ. ಅವರು ಮಾತ್ರ successful ಆಗೋದು. ಅದು ಅರ್ಜುನನಲ್ಲಿ ಬಿಲ್ವಿದ್ಯೆ ಕಲೆ ಇದ್ದಿದ್ದನ್ನ ದ್ರೋಣಾಚಾರ್ಯ ಕಂಡು ಹಿಡಿದ ಹಾಗೆ ಒಬ್ಬೊಬ್ರಲ್ಲಿ ಒಂದೊಂದು ಕಲೆ ಇರೋಕೆ ಮಾತ್ರ ಸಾಧ್ಯ.

ನನ್ನ ಎಲ್ಲಾ ಸ್ನೇಹಿತರು, ಕುಟುಂಬಸ್ಥರು ನನ್ನ ಇಷ್ಟು ವರ್ಷ ಚೆನ್ನಾಗಿ ನೊಡ್ಕೊಂಡಿದಿರ ಈ ಜನ್ಮದಲ್ಲಿ ನನಗೆ ತೀರಿಸೋ ಭಾಗ್ಯ ಇಲ್ಲ. Thankyou ಎಲ್ಲರಿಗೂ. Talent/ ability ಅದು ಒಂದು ಧರ್ಮ. ಅದ್ರಿಂದ talent ಇಲ್ದೆ ಇರೋ ಬೇರೆ ಯಾವ್ದೇ ಕೆಲಸಕ್ಕೆ ಮಕ್ಕಳಿಗೆ ಒತ್ತಾಯಿಸಬೇಡಿ. ತಾಯಿ ಮೇಲಿನ ಅಪವಾದ ಸುಳ್ಳು ಹೇಳಿರೋದು. ಅವಳಿಗೆ ಏನು ಗೊತ್ತಿರಲ್ಲ.

ನಿಮ್ಮಲ್ಲಿ ಎಲ್ಲರಲ್ಲೂ ಕೇಳ್ಕೋಳೋದೇನಂದ್ರೆ. ಚಿಕ್ಕ ಆಸೆ ಇರೋ ಮಕ್ಕಳ ಮೇಲೆ ದೊಡ್ಡ ಆಸೆಗಳನ್ನು ಹೋರಿಸಬೇಡಿ. ಗುರುವಾಗಲಿ ತಂದೆ ತಾಯಿ ಯಾರೇ ಆಗಲಿ. ಮಕ್ಕಳಿಗೆ ಏನೂ ಗೊತ್ತಿರಲ್ಲ ಅದ್ಕೆ. ನಾನು online mental support ಇಂದ ಮಗು ತರ agidde 2023 ರಿಂದ ಈ support ತಗೊತಿದ್ದೆ. ಇದ್ರಿಂದ ತುಂಬಾ weak ಆಗಿದಿನಿ. ಎಲ್ಲರೂ don’t worry ಏನಾಗಲ್ಲ ನನಗೆ ಏನಕ್ಕೂ ಧೈರ್ಯ ಇಲ್ಲ. ಹಾಗೆ ಧರ್ಮ ಧೈರ್ಯ ಸಾಹಸ ಈ ರೂಲ್ ನ ಸಂಶೋದನೆ ಮಾಡಿ ಇದು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗೊತ್ತಾಗಬೇಕು.

ನನ್ನ ಸಣ್ಣ ಅಕ್ಕ ರಕ್ಷಿತಾಳಿಗೆ ಮನೆ ಆಳ್ತನಕ್ಕೆ ನಮ್ಮೊರಲ್ಲೇ ಮದ್ವೆ ಮಾಡಿ ಅಂತ ಕೇಳ್ಕೊತೀನಿ. ಮತ್ತೆ ಈ ಬದಲಾವಣೆಗಳನ್ನ social mediadalli share ಮಾಡಿ. Please education ಅಲ್ಲಿ ಬದಲಾವಣೆ ತನ್ನಿ ಎಂಬುದಾಗಿ ಡೆತ್ ನೋಟ್ ನಲ್ಲಿ ರಾಕೇಶ್ ಉಲ್ಲೇಖಿಸಿದ್ದಾನೆ.

ಅಪರೂಪಕ್ಕೆ ಒಮ್ಮೆ ಡ್ರಿಂಕ್ಸ್ ಮಾಡುತ್ತಿದ್ದ 28 ವರ್ಷ ಯುವಕನ ಲಿವರ್ ಡ್ಯಾಮೇಜ್

TAGGED:Unemployed graduate who lost his life after writing a letter demanding change in education
Share This Article
Facebook Twitter Copy Link Print
Previous Article Entertainment ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಪ್ರಪೋಸ್, ಆಕೆ ಓಕೆ ಎಂದಿದ್ದಷ್ಟೆ, ಮುಂದೇನಾಯ್ತು?
Next Article ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಕ್ರೌರ್ಯ ಮುಂದುವರಿಕೆ: ಗುಂಡಿಟ್ಟು ಪತ್ರಕರ್ತನ ಹ*ತ್ಯೆ

Popular Posts

ದಕ್ಷಿಣ ಭಾರತದಲ್ಲಿ ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಹೆಚ್ಚಳ

2 Min Read

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

You Might Also Like

ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ

1 Min Read
ಕರ್ನಾಟಕಪ್ರಮುಖ

ಪ್ರೇಯಸಿಯ ಮರ್ಯಾದಾ ಹತ್ಯೆ ನೋವು ತಾಳಲಾರದೆ ಪ್ರಿಯಕನ ಆತ್ಮಹತ್ಯೆ; ಪ್ರೇಯಸಿಯ ಜನ್ಮ ದಿನದಂದೇ ಜೀವ ಅಂತ್ಯ.

1 Min Read
ಪ್ರಮುಖಕರ್ನಾಟಕ

ವಿದ್ಯಾರ್ಥಿನಿ ಜೊತೆ ಪ್ರೊಫೆಸರ್ ಲವ್ವಿಡವ್ವಿ , 3 ಬಾರಿ ಗರ್ಭಪಾತ.!

1 Min Read
ದೇಶಪ್ರಮುಖವಿದೇಶ

CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?