Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪುಕ್ಕಟೆಯಾಗಿ ಕೊಟ್ಟರೂ ಬೇಡ ಎನ್ನುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಡಿಮ್ಯಾಂಡ್!
ಕರ್ನಾಟಕದೇಶಪ್ರಮುಖ

ಪುಕ್ಕಟೆಯಾಗಿ ಕೊಟ್ಟರೂ ಬೇಡ ಎನ್ನುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಡಿಮ್ಯಾಂಡ್!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಗುಜರಿ ವಸ್ತುಗಳನ್ನು ಕೇಳಿಕೊಂಡು ಮನೆ ಮನೆಗೆ ಬರುವವರು ಈಗ ಹೆಚ್ಚಾಗಿ ಕೇಳುವುದು ಗೆರಟೆಯನ್ನು. ಗೆರಟೆ ಉದ್ಯಮ ಬೆಳೆದಿರುವುದರಿಂದ ಗೆರಟೆಗೆ ಬೇಡಿಕೆ ಕೂಡ ಹೆಚ್ಚಾಗಿದೆ.

ಕರ್ನಾಟಕದ ಕರಾವಳಿಯಿಂದ ಹಿಡಿದು ಕೇರಳ, ತಮಿಳುನಾಡಿನವರೆಗೂ ಈ ಗೆರಟೆ ವ್ಯಾಪಾರ ಆರ್ಥಿಕ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಅಡುಗೆಮನೆಯ ಕಸ ‘ಚಿಪ್ಪು’ ಸಂಗ್ರಹ ಉದ್ಯಮವಾಗಿ ಬೆಳೆದಿದೆ.

ತೆಂಗಿನ ಕಾಯಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಆಹಾರ ಪದಾರ್ಥವಾಗಿ ಉಪಯೋಗಿಸುತ್ತಿದ್ದು, ತೆಂಗಿನಕಾಯಿ ಎಣ್ಣೆ ಎಲ್ಲೆಡೆ ಬಳಕೆಯಿದ್ದರೂ, ಹಸಿ ತೆಂಗಿನಕಾಯಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ. ತೆಂಗಿನಕಾಯಿ ಹಸಿಯಾಗಿ ಮತ್ತು ಎಣ್ಣೆ ಹೆಚ್ಚಿನ ಬಳಕೆಯದ್ದಾಗಿದ್ದರೆ, ಅದರ ಚಿಪ್ಪು ಒಂದು ಹಂತದ ಬೇಡಿಕೆಯಲ್ಲಿತ್ತು. ಆದರೆ ಇತ್ತೀಚೆಗೆ ಗೆರಟೆಯನ್ನು(ತೆಂಗಿನಕಾಯಿ ಒಳಗಿನ ಬಲು ಗಟ್ಟಿಯಾದ ಭಾಗ) ವಿವಿಧ ಕಾರ್ಖಾನೆಗಳ ಉಪಯೋಗಕ್ಕೆ ಬಳಸುವುದರಿಂದ ಹೆಚ್ಚಿನ ಬೇಡಿಕೆ ಕಂಡಿದೆ.

ಕಾಸರಗೋಡಿನ ತೆಂಗಿನಕಾಯಿ ವ್ಯಾಪಾರಿ ಎಸ್.ಕೆ ಹುಸೇನ್ ಅವರು ಈ ಬಗ್ಗೆ ಮಾತನಾಡುತ್ತಾ, ತೆಂಗಿನಕಾಯಿ ಗೆರಟೆ ಕರಕುಶಲ ಕಲೆಯವರಿಗೆ ಬಹಳ ಸಣ್ಣ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಆದರೀಗ ಇದ್ದಿಲು ಫ್ಯಾಕ್ಟರಿಗಳು ಹೆಚ್ಚಾದ ಕಾರಣ ಬೇಡಿಕೆಯೂ ಹೆಚ್ಚಾಗಿದೆ. ಈಗ ರೈತರು ಮಾತ್ರವಲ್ಲದೇ ದಿನಕ್ಕೆ ಒಂದೋ ಅರ್ಧ ತೆಂಗಿನಕಾಯಿ ಬಳಸುವ ಮನೆಮಂದಿ ಕೂಡಾ ತಿಂಗಳಿಗೊಮ್ಮೆ ತೆಂಗಿನಕಾಯಿ ಗೆರಟೆ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. “ ಕೇರಳ ರಾಜ್ಯದಲ್ಲಿ ಆರು ಇದ್ದಿಲು ಫ್ಯಾಕ್ಟರಿಗಳಿರುವ ಬಗ್ಗೆ ಗೊತ್ತಿದೆ. ಅಲ್ಲದೇ ತಮಿಳುನಾಡಿನಿಂದಲೂ ಗೆರಟೆ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ. ಹಾಗಾಗಿ ವ್ಯವಹಾರದಲ್ಲಿ ಈಗ ತೆಂಗಿನಕಾಯಿಯಷ್ಟೇ ಪ್ರಾಮುಖ್ಯತೆಯನ್ನು ಗೆರಟೆಗೂ ನೀಡುವಂತಾಗಿದೆ’’ ಎನ್ನುತ್ತಾರವರು.

 

ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿನ ಮನೆಗಳಲ್ಲಿ ಪ್ರತೀದಿನ ತೆಂಗಿನಕಾಯಿ ಬಳಸುವ ಕಾರಣಕ್ಕೆ ಗೆರಟೆ ಸಂಗ್ರಹ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ. ದಿನಂಪ್ರತಿ ಮನೆಬಾಗಿಲಿಗೆ ಹೋಗಿ ಒಂದು ತೆಂಗಿನಕಾಯಿಯ ಒಂದು ಭಾಗ ಗೆರಟೆಗೆ ರೂ.೧ ರಿಂದ ರೂ. ೧.೫೦ವರೆಗೆ ನೀಡಿ ಖರೀದಿಸುತ್ತಾರೆ. ಹೀಗೆ ಖರೀದಿಸಿದ ಗೆರಟೆಯನ್ನು ತೆಂಗಿನಕಾಯಿ ವ್ಯಾಪಾರದ ಅಂಗಡಿಗಳಿಗೆ ಕಿಲೋ ಗ್ರಾಮ್ಸ್ ಲೆಕ್ಕಾಚಾರದಲ್ಲಿ ಮಾರಾಟಮಾಡುತ್ತಾರ

 

ಪುತ್ತೂರಿನ ಎಮ್ ಎಸ್ ಟ್ರೇಡರ್ಸ್​​ ಮಾಲಿಕ ಶರೀಫ್ ಹೇಳುವಂತೆ, ತೆಂಗಿನಕಾಯಿ ಚಿಪ್ಪು ಕಿಲೋ ಒಂದರ ರೂ.25 ರಿಂದ ರೂ.100ರ ಬೆಲೆಯಲ್ಲಿ ಕಳೆದ ವರ್ಷ ಕೇರಳದ ಫ್ಯಾಕ್ಟರಿ ಒಂದಕ್ಕೆ ಮಾರಾಟವಾಗಿದೆ. ಈ ವರ್ಷ ಬೆಲೆ ಹೆಚ್ಚುತ್ತಲೇ ಇದ್ದು, ರೂ.150 ತಲುಪಬಹುದು. ತಾಜಾ ಆಗಿರುವ ಚಿಪ್ಪು ಇನ್ನಷ್ಟು ಬೇಡಿಕೆ ಪಡೆದುಕೊಳ್ಳುತ್ತದೆ. ಹಿಂದೆ ತೆಂಗಿನಕಾಯಿ ಸಿಪ್ಪೆಯಿಂದ ನಾರು, ಕೊಕೊಪಿಟ್, ಹಾಗೆಯೇ ನಾರಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು. ಈಗ ಅದರ ಡಿಮಾಂಡ್ ಕಡಿಮೆಯಾಗಿದೆ. ಬದಲಿಗೆ ಗೆರಟೆಗೆ ಡಿಮಾಂಡ್ ಬಂದಿದೆ, ಎನ್ನುತ್ತಾರೆ.

 

ಗೆರಟೆಯಿಂದ ತಯಾರಿಸಿದ ಗೃಹೋಪಯೋಗಿ ಸಾಧನಗಳು ಜನಪ್ರಿಯವಾಗಿತ್ತು. ಅಡುಗೆ ಮನೆಗೆ ಬೇಕಾಗುವ ಸೌಟು, ಕಪ್‌ಗಳು, ಹಾಗೇ ಅಲಂಕಾರಿಕ ವಸ್ತುಗಳು ಬಹಳ ಹಿಂದಿನ ಕಾಲದಿಂದ ಬೇಡಿಕೆಯಲ್ಲಿತ್ತು. ಬೇಗನೇ ಕೊಳೆಯದ ಕಾರಣ ತೋಟಗಳಲ್ಲಿ ಗಿಡಗಳ ಬುಡಗಳಿಗೆ ಹಾಕಿ ಬೇರು ಸರಾಗವಾಗಿ ಸಂಚರಿಸಲು ಪ್ರಯೋಜನಕಾರಿ ಎಂದೂ ಬಳಸಲಾಗುತ್ತದೆ.

 

ಗೆರಟೆಯನ್ನು ಕರಕುಶಲ ವಸ್ತುಗಳನ್ನು ತಯಾರಿಸುವುದು ಸಣ್ಣ ಪ್ರಮಾಣದ ಉದ್ಯಮವಾದರೆ, ಇದ್ದಿಲು ತಯಾರಿಸಲು ಬಳಸುತ್ತಿರುವುದು ದೊಡ್ಡ ಪ್ರಮಾಣದ್ದಾಗಿದೆ. ಗೆರಟೆಯನ್ನು ಸುಟ್ಟಾಗ ದೊರೆಯುವ ಇದ್ದಿಲನ್ನು ನೀರು ಶುದ್ಧೀಕರಣ ಘಟಕಗಳಲ್ಲಿ,ಹೋಟೆಲುಗಳಲ್ಲಿ ಬಾರ್ಬೆಕ್ಯೂ /ಗ್ರಿಲ್‌ಗೆ, ಇಲೆಕ್ಟಿçಕ್ ಗ್ರಿಡ್‌ಗಳಿಗೆ ಮತ್ತು ಬೇರೆ ಬೇರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಭಾರತದಿಂದ ಮುಖ್ಯವಾಗಿ ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಕೂಡಾ ಆಗುತ್ತಿದೆ. ಆನ್‌ಲೈನ್ ಶಾಪ್‌ಗಳಲ್ಲಿ ಇದ್ದಿಲು ಮಾರಾಟವಾಗುತ್ತಿದೆ.

ಅಂತೂ ತ್ಯಾಜ್ಯವೆಂದು ಪರಿಗಣಿಸಲ್ಪಡುತ್ತಿದ್ದ ಗೆರಟೆಗೆ ಇನ್ನಷ್ಟು ಬೇಡಿಕೆ ಬರುತ್ತಿದೆ.

https://www.newsics.com/2026/01/04/young-woman-loses-lakhs-of-rupees-after-believing-online-hypnosis-ad/

 

TAGGED:Coconut chips in huge demand in Dakshina Kannada!
Share This Article
Facebook Twitter Copy Link Print
Previous Article ಆನ್ ಲೈನ್ ನಲ್ಲಿ ವಶೀಕರಣ ಜಾಹೀರಾತು ನಂಬಿ ಲಕ್ಷ ಲಕ್ಷಣ ಹಣ ಕಳೆದುಕೊಂಡ ಯುವತಿ
Next Article Health care ಪುರುಷರ ತಲೆ ಬೋಳಾಗಲು ಇದೇ ಕಾರಣ! ಪರಿಹಾರವೇನು?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?