Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಆ್ಯಂಟಿ ಬಯೋಟಿಕ್ ಸೇವನೆ: ಡಾ.ದೇವಿ ಶೆಟ್ಟಿ ಹೇಳಿದ್ದೇನು?
ಪ್ರಮುಖಆರೋಗ್ಯ

ಆ್ಯಂಟಿ ಬಯೋಟಿಕ್ ಸೇವನೆ: ಡಾ.ದೇವಿ ಶೆಟ್ಟಿ ಹೇಳಿದ್ದೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಆಂಟಿಬಯೊಟಿಕ್ಸ್ ಅತ್ಯಂತ ಸ್ಟ್ರಾಂಗ್ ಆಗಿರೋ ಔಷಧ. ಕೆಲವು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲದು. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕೊಲ್ಲುವ ಅಥವಾ ನಿಧಾನಗೊಳಿಸುವ ಶಕ್ತಿ ಇವುಗಳಲ್ಲಿದೆ. ಮಾತ್ರೆ, ಕ್ರೀಮ್‌, ಕ್ಯಾಪ್ಸುಲ್‌, ಮುಲಾಮು, ದ್ರವರೂಪದ ಔಷಧ ಹೀಗೆ ವಿವಿಧ ರೂಪಗಳಲ್ಲಿ ಆಂಟಿಬಯೊಟಿಕ್ಸ್ ದೊರೆಯುತ್ತದೆ.

ಮಿತವಾಗಿ ಬಳಸಿದ್ರೆ ಆಂಟಿಬಯೊಟಿಕ್ಸ್, ಬ್ಯಾಕ್ಟೀರಿಯದಿಂದ ಉಂಟಾಗುವ ರೋಗಗಳು ಮತ್ತು ಅಪಾಯಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. ಆದರೆ ಅದರ ಅತಿಯಾದ ಬಳಕೆ ಅತ್ಯಂತ ಅಪಾಯಕಾರಿ. ಇದರಿಂದ ಹಲವು ರೀತಿಯ ಅಡ್ಡ ಪರಿಣಾಮಗಳು ನಿಮ್ಮ ದೇಹದ ಮೇಲಾಗುತ್ತವೆ.

ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್​ಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಾಗಬಹುದು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಈ ವಿಷಯವಾಗಿ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

ದೇವಿ ಪ್ರಸಾದ್ ಶೆಟ್ಟಿ ಹೇಳಿರುವ ಪ್ರಕಾರ, ಅವರ ವೃತ್ತಿಯ ಮೊದಲು 15 ವರ್ಷ ತುಂಬಾ ಚೆನ್ನಾಗಿದ್ದು ಎಷ್ಟೇ ದೊಡ್ಡ ಆಪರೇಷನ್ ಮಾಡಿದರೂ ಸಹ ಎರಡು ದಿನಗಳ ಆ್ಯಂಟಿಬಯಾಟಿಕ್ಸ್ ನೀಡುತ್ತಿದ್ದು ಬಳಿಕ ಅದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಹತ್ತು ವರ್ಷಗಳಲ್ಲಿ ಈ ರೀತಿಯ ಅಭ್ಯಾಸ ಪೂರ್ತಿಯಾಗಿ ಬದಲಾಗಿದೆ. ಈಗ ಸರ್ಜರಿ ಆದ ಮೇಲೆ ರೋಗಿಗೆ ಇನ್ಫೆಕ್ಷನ್ ಆಗುವ ಭಯ ದುಪ್ಪಟ್ಟಾಗಿದೆ. ಸೋಂಕು ತಗಲುವುದು ಸಾಮಾನ್ಯ. ಆದರೆ ವೈದ್ಯರು ನೀಡುವಂತಹ ಆ್ಯಂಟಿಬಯಾಟಿಕ್ಸ್ ದೇಹದಲ್ಲಿ ಅಂದುಕೊಂಡ ರೀತಿ ಕಾರ್ಯನಿವಹಿಸುವುದಿಲ್ಲ ಎನ್ನುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸರ್ಜರಿ ಆದ ನಂತರ ನೀಡುವ ಆ್ಯಂಟಿಬಯಾಟಿಕ್ಸ್ ಪೂರ್ತಿಯಾಗಿ ಇನ್ಫೆಕ್ಷನ್ ಕಡಿಮೆ ಮಾಡಲು ವಿಫಲವಾಗುತ್ತಿದೆ. ಇದಕ್ಕೆ ಆ್ಯಂಟಿಬಯಾಟಿಕ್ಸ್ ಗಳ ಅತಿಯಾದ ಬಳಕೆಯೇ ಕಾರಣವಾಗಿದೆ. ಸಣ್ಣ ಜ್ವರ, ಮೈಕೈ ನೋವು, ಕಫ ಹೀಗೆ ಏನಾದರೂ ಸಣ್ಣ ಬದಲಾವಣೆ ದೇಹದಲ್ಲಿ ಆದ ತಕ್ಷಣ ಆ್ಯಂಟಿಬಯಾಟಿಕ್ಸ್ ಸೇವನೆ ಮಾಡಲಾಗುತ್ತದೆ.

ಈ ರೀತಿಯ ಅಭ್ಯಾಸದಿಂದ ಅಂದರೆ, ಆ್ಯಂಟಿಬಯಾಟಿಕ್ಸ್ ಅತಿಯಾದ ಸೇವನೆ ಮಾಡಿರುವುದರಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾ ಮಾತ್ರೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿದೆ. ಅಷ್ಟೇ ಅಲ್ಲ, ಹೊಸ ಫಾರ್ಮುಲಾ ಇರುವಂತಹ ಆ್ಯಂಟಿಬಯಾಟಿಕ್ಸ್ ಮಾರುಕಟ್ಟೆಗೆ ಬರದೇ ವರ್ಷಗಳೇ ಕಳೆದಿದೆ. ಹಾಗಾಗಿ ಯಾವುದೇ ವೈದ್ಯಕೀಯ ಸಲಹೆಯಿಲ್ಲದೆಯೇ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

https://www.newsics.com/2026/01/03/student-dies-due-to-sexual-harassment-case-registered-against-college-professor-3-students/

 

TAGGED:Taking antibiotics: What did Dr. Devi Shetty say?
Share This Article
Facebook Twitter Copy Link Print
Previous Article ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಸಾವು; ಕಾಲೇಜು ಪ್ರಾಧ್ಯಾಪಕ, 3 ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು
Next Article ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ : ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ದಿಯ ಗನ್ ಮ್ಯಾನ್ ಗಳು ನಾಪತ್ತೆ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?