Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಈ ವರ್ಷ ಅತೀ ಹೆಚ್ಚು ಸದ್ದು – ಸುದ್ದಿ ಮಾಡಿದ ಸಿನಿಮಾಗಳ ಪೈಕಿ ‘ಸು ಫ್ರಮ್ ಸೋ’ ಸಹ ಒಂದು. ಜೆ ಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಸಂಧ್ಯಾ ಅರಕೆರೆ ಭಾನು ಪಾತ್ರಕ್ಕೆ ಜೀವ ತುಂಬಿದ್ದರು. ರಂಗಭೂಮಿ ಹಿನ್ನಲೆ ಹೊಂದಿರುವ ನಟಿ ಸಂಧ್ಯಾ ಅರಕೆರೆ ಇದೀಗ ತುಂಬು ಗರ್ಭಿಣಿಯಾಗಿದ್ದಾರೆ.
ಸಂಧ್ಯಾ ಅರಕೆರೆ – ಶೋಧನ್ ಬಸ್ರೂರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಶೀಘ್ರವೇ ಅವರ ಕಡೆಯಿಂದ ಸಿಹಿ ಸುದ್ದಿ ಸಿಗಲಿದೆ.
ಸಂಧ್ಯಾ ಅವರು ರಂಗಭೂಮಿ ಕಲಾವಿದೆ. ಹಲವು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸಂಧ್ಯಾ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ‘ಸು ಫ್ರಮ್ ಸೋ’ ಬಳಿಕ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಆದರೆಎಲ್ಲಾ ಚಿತ್ರಗಳನ್ನು ಅವರು ಒಪ್ಪಿ ನಟಿಸುತ್ತಿಲ್ಲ.
https://www.instagram.com/p/DS8A5AnEjyU/?igsh=dzh3anZvc2JlN3d4
https://www.newsics.com/2026/01/01/vijay-deverakonda-rashmika-mandanna-pair-in-rome/