Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಹೊಸ ವರ್ಷದ ರಾತ್ರಿ 12 ಗಂಟೆಗೆ 12 ದ್ರಾಕ್ಷಿಗಳನ್ನು ತಿನ್ನೋದೇಕೆ? ವಿಶಿಷ್ಟ ಸಂಪ್ರದಾಯ ಹೇಗೆ ಆರಂಭವಾಯಿತು?
ಲೈಫ್‌ಸ್ಟೈಲ್

ಹೊಸ ವರ್ಷದ ರಾತ್ರಿ 12 ಗಂಟೆಗೆ 12 ದ್ರಾಕ್ಷಿಗಳನ್ನು ತಿನ್ನೋದೇಕೆ? ವಿಶಿಷ್ಟ ಸಂಪ್ರದಾಯ ಹೇಗೆ ಆರಂಭವಾಯಿತು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಹೊಸ ವರ್ಷಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, 2026 ರ ಹೊಸ ಸಂವತ್ಸರವನ್ನು ಸ್ವಾಗತಿಸಲು ಜನ ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಪಂಚದಾದ್ಯಂತ, ಹೊಸ ವರ್ಷದ ಮುನ್ನಾದಿನವನ್ನು ವಿಭಿನ್ನ ಸಂಪ್ರದಾಯಗಳು ಮತ್ತು ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ.

ಕೆಲವರು ರಾತ್ರಿ 12 ಗಂಟೆ ಆಗ್ತಿದ್ದಂಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ, ಕಡಲ ತೀರ, ಪಬ್‌ನಲ್ಲಿ ಮೋಜು ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಇನ್ನೊಂದು 12 ಗಂಟೆಗೆ ಸರಿಯಾಗಿ 12 ದ್ರಾಕ್ಷಿಗಳನ್ನು ತಿಂದು ಹೊಸ ವರ್ಷವನ್ನು ಸ್ವಾಗತಿಸುವ ವಿಶಿಷ್ಟ ಸಂಪ್ರದಾಯವೂ ಆಚರಣೆಯಲ್ಲಿದೆ. ಸೋಷಿಯಲ್‌ ಮೀಡಿಯಾಗಳಲ್ಲೂ ಈ ಕುರಿತ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. 12 ಗಂಟೆಗೆ ಸರಿಯಾಗಿ ಜನ ದ್ರಾಕ್ಷಿ ತಿನ್ನೋದೇಕೆ? ಏನಿದು ಸಂಪ್ರದಾಯ ಎನ್ನುವುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಹೊಸ ವರ್ಷದ ರಾತ್ರಿ 12 ಗಂಟೆಗೆ ದ್ರಾಕ್ಷಿ ತಿನ್ನುವುದೇಕೆ?
ರಾತ್ರಿ 12 ಗಂಟೆಗೆ 12 ದ್ರಾಕ್ಷಿಯನ್ನು ತಿಂದು ಹೊಸ ವರ್ಷವನ್ನು ಸ್ವಾಗತಿಸುವ ಸಂಪ್ರದಾಯವನ್ನು ಲಾಸ್ ಡೋಸೆ ಉವಾಸ್ ಡಿ ಲಾ ಸುರ್ಟೆ ಎಂದು ಕರೆಯಲಾಗುತ್ತದೆ. ಅಂದರೆ ಅದೃಷ್ಟದ ಹನ್ನೆರಡು ದ್ರಾಕ್ಷಿಗಳು ಎಂದರ್ಥ. ಈ 12 ದ್ರಾಕ್ಷಿಗಳು ವರ್ಷದ 12 ತಿಂಗಳುಗಳನ್ನು ಸಂಕೇತಿಸುತ್ತವೆ ಎಂದು ನಂಬಲಾಗಿದೆ . ತಮ್ಮ ಬಯಕೆಗಳ ಬಗ್ಗೆ ಮನದಲ್ಲೇ ಕೇಳಿಕೊಳ್ಳುತ್ತಾ ಒಂದು ಸೆಕೆಂಡಿಗೆ ಒಂದರಂತೆ 12 ದ್ರಾಕ್ಷಿಗಳನ್ನು ತಿನ್ನುತ್ತಾ ಜನ ಮುಂಬರುವ ವರ್ಷದಲ್ಲಿ ಶುಭ, ಸಂತೋಷ, ಪ್ರೀತಿ ಮತ್ತು ಸಮೃದ್ಧಿಯನ್ನು ಸಿಗಲಿ ಎಂದು ಕೇಳಿಕೊಳ್ಳುತ್ತಾರೆ.

ಈ ದ್ರಾಕ್ಷಿ ತಿನ್ನುವ ಸಂಪ್ರದಾಯವನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗಿವೆ ಎಂದು ಸಾಕಷ್ಟು ಮಂದಿ ಹೇಳುತ್ತಾರೆ.ಈ ವಿಶಿಷ್ಟ ಸಂಪ್ರದಾಯ ಹೇಗೆ ಆರಂಭವಾಯಿತು?

ಹೊಸ ವರ್ಷದ ಮುನ್ನಾದಿನದಂದು ರಾತ್ರಿ 12 ಗಂಟೆ ಆಗ್ತದ್ದಂಗೆ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯ ಸೋಷಿಯಲ್‌ ಮೀಡಿಯಾದ ಮುಖಾಂತರ ಇಂದು ಬಹಳ ಟ್ರೆಂಡ್‌ನಲ್ಲಿದೆ. ಈ ಸಂಪ್ರದಾಯವು 1909 ರಲ್ಲಿ ಸ್ಪೇನ್‌ನಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಆಗಿನ ಸಮಯದಲ್ಲಿ, ದ್ರಾಕ್ಷಿ ಉತ್ಪಾದನೆಯು ಎಷ್ಟು ಹೇರಳವಾಗಿತ್ತೆಂದರೆ, ರೈತರು ಅವುಗಳನ್ನು ಮಾರಾಟ ಮಾಡುವುದು ಸಹ ಕಷ್ಟಕರವಾಗಿತ್ತು. ದ್ರಾಕ್ಷಿ ಕೃಷಿಕನೊಬ್ಬ ತಮಾಷೆಯಾಗಿ ಜನರಿಗೆ ಹೊಸ ವರ್ಷದ ದಿನದಂದು 12 ದ್ರಾಕ್ಷಿಗಳನ್ನು, ತಿನ್ನಿ ಇದರಿಂದ ಅದೃಷ್ಟ ಬರುತ್ತದೆ ಎಂದು ಹೇಳಿದನು. ಕ್ರಮೇಣ, ಈ ತಮಾಷೆ ಒಂದು ಸಂಪ್ರದಾಯವಾಯಿತು.

ಮೂಲತಃ ಸ್ಪೇನ್‌ನಲ್ಲಿ ಆಚರಿಸಲಾಗುತ್ತಿದ್ದ ಈ ಸಂಪ್ರದಾಯವು ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವಾದ್ಯಂತ ವೇಗವಾಗಿ ವೈರಲ್ ಆಗುತ್ತಿದೆ . ಡಿಸೆಂಬರ್ 31 ರಂದು ನಡೆಯುವ ಪಾರ್ಟಿಗಳಲ್ಲಿ, ಮನೆಗಳಲ್ಲಿ ಜನರು ಒಂದು ಬೌಲ್‌ನಲ್ಲಿ ದ್ರಾಕ್ಷಿಯನ್ನು ಹಿಡಿದುಕೊಂಡು 12 ಗಂಟೆಯಾದ ತಕ್ಷಣ ಒಂದು ಟೆಬಲ್‌ ಅಡಿಯಲ್ಲಿ ಕುಳಿತು ಒಂದೊಂದು ಬಯಕೆಗಳನ್ನು ಮನದಲ್ಲಿಯೇ ಹೇಳಿಕೊಂಡು ಪ್ರತಿ ಒಂದು ಸೆಕೆಂಡಿಗೆ ಒಂದೊಂದರಂತೆ 12 ದ್ರಾಕ್ಷಿಗಳನ್ನು ತಿನ್ನುತ್ತಾರೆ. ಈ ಆಸೆ, ಬಯಕೆಗಳು ಮುಂಬರುವ ವರ್ಷದಲ್ಲಿ ಈಡೇರುತ್ತದೆ ಎಂದು ಹಲವರು ನಂಬುತ್ತಾರೆ.

ಪೊಲೀಸರ ವಿರುದ್ಧವೇ ಸಿಡಿದೆದ್ದ ವಿಜಯಲಕ್ಷ್ಮಿ ದರ್ಶನ್ ನನ್ನ ಕಂಪ್ಲೇಂಟ್ ಗೆ ಬೆಲೆಯೇ ಇಲ್ವಾ:

TAGGED:Why do we eat 12 grapes at 12 o'clock on New Year's Eve? How did the unique tradition begin?
Share This Article
Facebook Twitter Copy Link Print
Previous Article ಎಷ್ಟೇ ಕುಡಿದರೂ ಕಿಡ್ನಿಗೆ ಏನೂ ಆಗಲ್ಲ, ಎಣ್ಣೆ ಹೊಡೆಯೋಕೂ ಮುಂಚೆ 2 ಗಂಟೆ ಜಸ್ಟ್‌ ಹೀಗೆ ಮಾಡಿ
Next Article ‘ಧುರಂಧರ್ ಸಿನಿಮಾಗೆ 90 ಕೋಟಿ ರೂಪಾಯಿ ಹೆಚ್ಚುವರಿ ಲಾಭ ಮಿಸ್ ಆಗಿದೆ. 

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?