Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಎನಿಸಿದರು.
ಗೋವಾದಿಂದ ಬೆಳಗ್ಗೆ 9 ಗಂಟೆ ಸುಮಾರಿಗೆ ನೌಕಾದಳದ ವಿಶೇಷ ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಬರಮಾಡಿಕೊಂಡರು.
ಬಳಿಕ ಜಲಾಂತರ್ಗಾಮಿ ನೌಕೆಯ ಬಳಿ ತೆರಳಿದ ಅವರು ನೌಕಾದಳದ ಸಿಬ್ಬಂದಿಯತ್ತ ಕೈಬೀಸುತ್ತ ಜಲಮಾಂತರ್ಗಾಮಿ ನೌಕೆಯೊಳಗೆ ತೆರಳಿದರು. ಸಮುದ್ರದ ಆಳದಲ್ಲಿ ನೌಕೆ ಸಂಚರಿಸುತ್ತಿದ್ದು, ತಾಸಿಗೂ ಹೆಚ್ಚು ಕಾಲ ರಾಷ್ಟ್ರಪತಿ ನೌಕೆಯೊಳಗೆ ಸಂಚರಿಸಿದರು.
ನಿಯಂತ್ರಣ ತಪ್ಪಿ ಪ್ಯಾರಾಗ್ಲೈಡರ್ ಅಪಘಾತ : ಪೈಲಟ್ ಸಾವು, ಓರ್ವ ಪ್ರವಾಸಿಗನ ಸ್ಥಿತಿ ಗಂಭೀರ