newsics.com
ಬಾಲಿವುಡ್ ಅಂಗಳದಲ್ಲಿ ವಿಕ್ಕಿ ಕೌಶಾಲ್ ಅಭಿನಯದ ಬ್ಯಾಡ್ ನ್ಯೂಸ್ ಸಿನಿಮಾದ ತೌಬಾ ತೌಬಾ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ಹಾಡು ಟ್ರೆಂಡ್ನಲ್ಲಿದೆ. ಇದೇ ತೌಬಾ ತೌಬಾ ಸಾಂಗ್ಗೆ ಮೈಂತ್ರಾ ಫ್ಯಾಶನ್ ಸೂಪರ್ ಸ್ಟಾರ್, ಬ್ಯೂಟಿ ತನುಮಿತಾ ಘೋಷ್ ಫುಲ್ ಫಿದಾ ಆಗಿ ಕೇವಲ ಟವೆಲ್ನಲ್ಲೇ ರೋಡ್ಗೆ ಬಂದು ಪಡ್ಡೆ ಹೈಕ್ಳಾ.. ನಿದ್ದೆಗೆಡಿಸಿದ್ದಾರೆ.
ಬ್ಯೂಟಿ ತನುಮಿತಾ ಘೋಷ್ ತಮ್ಮ ಇನ್ಸ್ಟಾದಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಹಾಗ ತಾನೇ ಶವರ್ನಿಂದ ಸ್ನಾನ ಮುಗಿಸಿ ಮೈಗೆ ಟವೆಲ್ ಸುತ್ತಿಕೊಂಡು ಹೊರ ಬಂದಾಗೆ ಮುಂಬೈನ ರೋಡ್ಗಳಿಗೆ ಬಂದಿದ್ದಾರೆ. ಪಿಂಕ್ ಕಲರ್ 2 ಟವೆಲ್ಗಳನ್ನ ತಲೆಗೆ, ಮೈಗೆ ಸುತ್ತಿಕೊಂಡು ಬಸ್ ಸ್ಟಾಪ್ ಮುಂದಿನ ರಸ್ತೆ ದಾಟುತ್ತಾರೆ. ಹೀಗೆ ಮುಂಬೈನ ಕೆಲ ರಸ್ತೆಗಳನ್ನ ತನುಮಿತಾ ಸುತ್ತಾಡಿದ್ದಾರೆ. ಬಳಿಕ ಮಾಲ್ ಮುಂದೆ ನಾಲ್ಕೈದು ಯುವಕರು ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಅವರ ಮುಂದೆ ಬಂದ ತನುಮಿತಾ, ತಕ್ಷಣ ಎರಡು ಟವೆಲ್ಗಳನ್ನು ಬಿಚ್ಚಿದ್ದು ಯುವಕರು ಶಾಕ್ ಆಗಿದ್ದಾರೆ. ಆದ್ರೆ ತನುಮಿತಾ ಟವೆಲ್ ಒಳಗೆ ಸ್ಕರ್ಟ್ ಡ್ರೆಸ್ ಹಾಕಿದ್ದರು. ಹಾಗೇ ಸ್ಟೈಲ್ ಆಗಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ನಡೆದು ಮುಂದೆ ಹೋಗುತ್ತಾರೆ.