Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಾಂದೇಡ್: ಒಂದೇ ಕುಟುಂಬದ ನಾಲ್ವರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ದಿನ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ತಂದೆ-ತಾಯಿ ಮನೆಯಲ್ಲಿ ಹಾಗೂ ಇಬ್ಬರು ಮಕ್ಕಳು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿರುವ ಘಟನೆಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುದ್ಬೇಡ್ ತಹಶಿಲ್ ನ ಜವಾಲಾ ಮುರಾರ್ ನಲ್ಲಿ ನಡೆದಿದೆ. ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಬಂದಿದೆ.
ರಮ್ರೇಶ್ ಸೋನಾಜಿ ಲಾಖೆ (51) ಹಾಗೂ ಪತ್ನಿ ರಾಧಾಬಾಯಿ ಲಾಖೆ (45) ಹಾಗೂ ಮಕ್ಕಳಾದ ಉಮೇಶ್ ಲಾಖೆ ಹಾಗೂ ಬಜರಂಗ ಲಾಖೆ ಮೃತ ದುರ್ದೈವಿಗಳು. ದಂಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳ ಮೃತದೇಹವನ್ನು ರೈಲ್ವೆ ಹಳಿಯಿಂದ ಹೊರತೆಗೆಯಲಾಗಿದೆ.
ಮಕ್ಕಳು ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ತಂದೆ-ತಾಯಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಬಳಿಕವೇ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
https://www.newsics.com/2025/12/26/alcohol-consumption-causes-oral-cancer-tata-research-reveals/