Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹೆಚ್ಚಾಗುತ್ತಿರುವ ಫೋಭಿಯ ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?
ಆರೋಗ್ಯಲೈಫ್‌ಸ್ಟೈಲ್

ಹೆಚ್ಚಾಗುತ್ತಿರುವ ಫೋಭಿಯ ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಹೀಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಖಿನ್ನತೆಯ ರೋಗವಾಗಿರುವ ಅತಿಯಾದ ಭಯ ಮಾನಸಿಕ ವೈಕಲ್ಯಕ್ಕೆ ಕಾರಣವಾಗಬಹುದು.
ವ್ಯಕ್ತಿಯ ಸಾಮಾಜಿಕ, ಔದ್ಯೋಗಿಕ ಮತ್ತು ಇತರ ಪ್ರಮುಖ ವೃತ್ತಿಪರ ಕ್ಷೇತ್ರಗಳಲ್ಲಿ ಮಧ್ಯಪ್ರವೇಶಿಸಬಹುದು. ಅದಕ್ಕೆ ಮುಖ್ಯ ಉದಾಹರಣೆ ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮೃತಪಟ್ಟ ಮಹಿಳೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಒಂದು ಅಂದಾಜಿನ ಪ್ರಕಾರ ಅತಿ ಭಯದ ಕುರಿತಂತೆ ಈಗಿನ ದತ್ತಾಂಶ ಬಹಳ ಸೀಮಿತವಾಗಿದೆ. 2010ರಲ್ಲಿ 13 ಭಾರತೀಯ ನಗರದಲ್ಲಿ ನಡೆಸಿದ ವಿಶ್ಲೇಷಣೆಯ ಪ್ರಕಾರ ರೋಗಪರಿಶೀಲನೆಯಲ್ಲಿ ಕಂಡುಬಂದಿರುವ ಫೋಬಿಯಾಗಳು ಶೇ 4.2ರಷ್ಟಿದ್ದವು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ (2015-16) ವರದಿಯಾಗಿರುವ ಪ್ರಕಾರ ಶೇ 2.57ರಷ್ಟು ಭಾರತೀಯರು ಖಿನ್ನತೆಯ ರೋಗದಿಂದ ಬಳಲುತ್ತಿದ್ದರು.
ಜಾಗತಿಕವಾಗಿ ನಿರ್ದಿಷ್ಟ ಫೋಬಿಯಗಳನ್ನು ಅತಿ ಸಾಮಾನ್ಯ ಖಿನ್ನತೆ ರೋಗ ಎಂದು ಪರಿಗಣಿಸಲಾಗಿದೆ.

ʼಅತಿಭಯ ಸ್ಪಷ್ಟವಾಗಿ ಕಂಡುಬಂದಾಗʼ
ಚಿಕಿತ್ಸಕರು ಹೇಳುವ ಪ್ರಕಾರ ನಿತ್ಯದ ಜೀವನಕ್ಕೆ ತೊಂದರೆಯಾಗುವವರೆಗೂ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಚೆನ್ನೈನ ರಿಲಾ ಆಸ್ಪತ್ರೆಯಲ್ಲಿ ಮನಶ್ಶಾಸ್ತ್ರಜ್ಞ ಸಲಹಾತಜ್ಞರು ಮತ್ತು ಸೈಕೊಥೆರಪಿಸ್ಟ್ ಆಗಿರುವ ಯಯತೀ ಎಸ್ ಹೇಳುವ ಪ್ರಕಾರ, ಉದಾಹರಣೆಗೆ ಕಾರಿನಲ್ಲಿ ಕೂರುವುದು ಅಥವಾ ವಿಮಾನದಲ್ಲಿ ಕೂರಲು ಭಯಪಡುವಂತಹ ರೋಗಚಿಹ್ನೆಗಳು ಕೊನೆಯ ಕ್ಷಣದವರೆಗೂ ತಿಳಿದುಬರುವುದಿಲ್ಲ. ಅತಿಭಯ ಬಹಿರಂಗವಾದಾಗ ಕಂಪನವಾಗುವುದು, ಉಸಿರಾಡಲು ಕಷ್ಟಪಡುವುದು, ಬೆವರುವುದು ಮೊದಲಾದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಚಿಕಿತ್ಸೆಯಾಗಿ ಅರಿವಿನ

ವರ್ತನೆಯ ಚಿಕಿತ್ಸೆ (ಸಿಬಿಟಿ) ಬಳಸಲಾಗುತ್ತದೆ. ಕಾಲ್ಪನಿಕವಾಗಿ ಕಾರಿನೊಳಗೆ ಪ್ರವೇಶಿಸುವುದು, ಎಂಜಿನ್ ಸ್ಟಾರ್ಟ್ ಮಾಡುವುದು ಅಥವಾ ವಿಮಾನದೊಳಗೆ ಪ್ರವೇಶಿಸುವುದು ಮೊದಲಾಗಿ ಅಭ್ಯಾಸ ಮಾಡಿದ ನಂತರ ನಿಧಾನವಾಗಿ ಭಯ ನಿವಾರಣೆಯಾಗುತ್ತದೆ.

ಸಾಮಾನ್ಯ ವೈದ್ಯಕೀಯ ವರದಿಗಳ ಹೊರತಾಗಿಯೂ ಒಬ್ಬ ಮಹಿಳೆ ತನಗೆ ಅನಾರೋಗ್ಯವಿದೆ ಎಂದೇ ಭಯಪಡುತ್ತಾರೆ. ಸಾಯುವ ಭಯ ಸದಾ ಕಾಡುತ್ತಿರುತ್ತದೆ. ಚಿಕಿತ್ಸಕರು ಅಂತಹ ಚಿಹ್ನೆಗಳನ್ನು ಸಾಕಷ್ಟು ಆತ್ಮವಿಶ್ವಾಸದ ಮೊರತೆ ಮತ್ತು ಭಾವನಾತ್ಮಕ ಹತಾಶೆ ಎಂದು ಹೇಳುತ್ತಾರೆ.

ಭಯ vs ಫೋಬಿಯ
ಎಲ್ಲರಿಗೂ ಸ್ವಲ್ಪ ಮಟ್ಟಿಗೆ ಭಯ ಇರುವುದು ನಿಜವಾದರೂ, ಫೋಬಿಯದಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ಭಯ ಹೆಚ್ಚು ದಿನ ಇರುವುದಿಲ್ಲ. ಆದರೆ ಫೋಬಿಯ ತೀವ್ರವಾಗಿರುತ್ತದೆ. ತರ್ಕಬಾಹಿರ ಮತ್ತು ನಿರಂತರವಾಗಿರುತ್ತದೆ. ಫೋಬಿಯ ನಿಧಾನವಾಗಿ ನಿತ್ಯ ಜೀವನದ ಭಾಗವಾಗಿಬಿಡುತ್ತದೆ. ಲಿಫ್ಟ್ನಲ್ಲಿ ಹೋಗಲು ಭಯ, ಸಾಮಾಜಿಕ ಪರಿಸ್ಥಿತಿಗಳು ಅಥವಾ ವೈದ್ಯಕೀಯ ಭೇಟಿಗಳನ್ನು ತಪ್ಪಿಸುವುದು ಇತ್ಯಾದಿ ಕಂಡುಬಂದಾಗ ಚಿಕಿತ್ಸೆಪಡೆಯುವುದು ಅಗತ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

ಫೋಬಿಯಗಳನ್ನು ಅತಿಯಾದ ಪ್ರತಿಕ್ರಿಯೆ ಎಂದು ಅಲಕ್ಷಿಸುವವರೇ ಹೆಚ್ಚು. ಆದರೆ ಚಿಕಿತ್ಸೆಗಾಗಿ ಹೋಗುವ ಸಂದರ್ಭದಲ್ಲಿ ತೀವ್ರ ಸಮಸ್ಯೆಯಾಗಿರುತ್ತದೆ. ಬಹಳಷ್ಟು ಬಾರಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಭಯ, ಬಯಲು ಪ್ರದೇಶದ ಭಯ ಮತ್ತು ಎತ್ತರದ ಭಯದಂತಹ ಸನ್ನಿವೇಶಗಳು ಇರಬಹುದು. ಇವು ನಿತ್ಯದ ಜೀವನಕ್ಕೆ ಸಮಸ್ಯೆ ತರಬಹುದು.

ಅತಿಕಡಿಮೆ ಕಂಡುಬರುವ ಭಯ
ಪ್ರಯಾಣದ ಭಯ, ಆರೋಗ್ಯದ ಭಯ, ಏಕಾಂಗಿಯಾಗಿರಲು ಭಯ ಅಥವಾ ಸಭೆಗಳಲ್ಲಿ ಭಾಗವಹಿಸಲು ಭಯ ಮೊದಲಾಗಿ ಫೋಬಿಯಗಳು ವಿವಿಧ ರೂಪದಲ್ಲಿರುತ್ತವೆ. ಹೆಚ್ಚು ಪರಿಚಿತವಲ್ಲದ ಭಯದಲ್ಲಿ ರಂಧ್ರಗಳ ಸಮೂಹದ ಭಯ, ಜನರ ಭಯ, ಕ್ಲೋನ್ಗಳ ಭಯ, ಬಲೂನ್ಗಳ ಭಯ, ವಾಹನ ಚಲಾಯಿಸಲು ಭಯ, ಮಾಲಿನ್ಯದ ಭಯ ಇತ್ಯಾದಿ ಸೇರಿವೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮಾಲಿನ್ಯದ ಭಯ ಜನರಲ್ಲಿ ಹೆಚ್ಚಾಗಿದೆ.

ಅಂತಹ ಭಯವಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು. ಆದರೆ ಅದನ್ನು ಅನುಭವಿಸುವವರಿಗೆ ಅದು ನಿಜವಾಗಿರುತ್ತದೆ ಎನ್ನುತ್ತಾರೆ ವೈದ್ಯರು.
ಮಕ್ಕಳಲ್ಲಿ ಫೋಬಿಯ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎನ್ನುತ್ತಾರೆ ತಜ್ಞರು. ಇಂಜೆಕ್ಷನ್ಗಳ ಭಯ, ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಭಯಪಡುವುದು ಅಥವಾ ಎತ್ತರದ ಸ್ಥಳಗಳಿಗೆ ಹೋಗಲು ಭಯ ಇತ್ಯಾದಿ ಮಕ್ಕಳಲ್ಲಿ ಕಂಡುಬರಬಹುದು.

ಫೋಬಿಯ ಏಕೆ ಬರುತ್ತದೆ?
ಅನುವಂಶಿಕವಾಗಿಯೂ ಫೋಬಿಯ ಬರಬಹುದು. ಪೋಷಕರಿಂದ ಕಲಿತ ವರ್ತನೆಯಾಗಿ ಬರಬಹುದು. ಭಯಾನಕ ಸನ್ನಿವೇಶಗಳ ಅನುಭವದಿಂದ ಬರಬಹುದು ಅಥವಾ ವರ್ಷಾನುಗಟ್ಟಲೆ ಭಯದ ಸ್ಥಿತಿಯನ್ನು ತಪ್ಪಿಸಿಕೊಳ್ಳುತ್ತಾ ಹೋದರೆ ಫೋಬಿಯವಾಗಿ ಬದಲಾಗಬಹುದು. ಫೋಬಿಯಾ ಪ್ರತ್ಯೇಕವಾಗಿ ಬರುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಖಿನ್ನತೆ, ಆತಂಕದ ಚಿಹ್ನೆಗಳು, ಹತಾಶೆಯ ಮನೋಸ್ಥಿತಿ ಅಥವಾ ಗೀಳಿನ ಪ್ರವೃತ್ತಿ ಕಂಡುಬರಬಹುದು.

ಫೋಬಿಯಗೆ ಚಿಕಿತ್ಸೆ ಏನು?
ತಜ್ಞರು ಹೇಳುವ ಪ್ರಕಾರ, ಎಷ್ಟೇ ಭಯವಾದರೂ ಫೋಬಿಯ ಒಂದು ಮಾನಸಿಕ ಅನಾರೋಗ್ಯವಾಗಿರುವ ಕಾರಣ ಚಿಕಿತ್ಸೆ ನೀಡಬಹುದು. ಕಾಲ್ಪನಿಕವಾಗಿ ಭಯದ ಸನ್ನಿವೇಶದ ಅನುಭವಪಡೆಯುವ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ. ಬಹಳಷ್ಟು ರೋಗಿಗಳು ಔಷಧಿಯ ಅಗತ್ಯವಿಲ್ಲದೆ ಗುಣಮುಖರಾಗುತ್ತಾರೆ. ಚಿಕಿತ್ಸೆಯು ನಿಧಾನವಾಗಿ ಭಯದ ಸನ್ನಿವೇಶದಿಂದ ಹೊರಬರಲು ನೆರವಾಗಲಿದೆ.

ಬ್ಲಾಕ್‌ ಕಾಫಿ ಕುಡಿಯುವುದರಿಂದ ಈ ರೋಗ ಬರಲ್ವಾಂತೆ

TAGGED:Why is treatment necessary in the early stages of a growing phobia?
Share This Article
Facebook Twitter Copy Link Print
Previous Article ನಟ ಸುದೀಪ್ ಏಕಾಏಕಿ ಈ ಸಿನಿಮಾ ಕೈಗೆತ್ತಿಕೊಳ್ಳಲು ಕಾರಣವೇನು?
Next Article ನೀರು ಅಥವಾ ಕೆಫೈನ್ ಬದಲಾಗಿ ನೀವು ನಿತ್ಯವೂ ಎಳನೀರು ಕುಡಿದರೆ ಏನಾಗುತ್ತದೆ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?