newsics. com
ಮಹಾರಾಷ್ಟ್ರ: ತಾಯಿ ಸಾವನ್ನಪ್ಪಿದರೂ ಯಾರಿಗೂ ಹೇಳದೆ ತಾಯಿಯ ಮೃತದೇಹದೊಂದಿಗೆ ನಾಲ್ಕು ದಿನಗಳ ವರೆಗೆ 14 ವರ್ಷದ ಬಾಲಕ ಕಾಲ ಕಳೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
44 ವರ್ಷದ ಮಹಿಳೆ ಸಿಲ್ವಿಯಾ ಡೇನಿಯಲ್ ಮತ್ತು ಆಕೆಯ 14 ವರ್ಷದ ಮಗ ಓಲ್ವಿನ್ ಡೇನಿಯಲ್ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮಹಿಳೆ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದ್ದಳು. ಇದಾದ ನಂತರ ಮಹಿಳೆಯ ಮಗ ಯಾರಿಗೂ ಏನನ್ನೂ ಹೇಳದೆ ಕಳೆದ ನಾಲ್ಕು ದಿನಗಳಿಂದ ತಾಯಿಯ ಶವದ ಬಳಿಯೇ ಕುಳಿತಿದ್ದ.
ದುರ್ವಾಸನೆ ಬರಲು ಪ್ರಾರಂಭವಾಗಿದ್ದು, ಹುಡುಕಾಟ ನಡೆಸಿದಾಗ ಪಕ್ಕದ ಮನೆಯಲ್ಲಿ 4ದಿನಗಳಿಂದ ಶವವೊಂದು ಕೊಳೆಯುತ್ತಿರುವುದು ಬೆಳಕಿಗೆ ಬಂದಿದೆ. ಬಾಗಿಲು ತೆರೆದಾಗ ಒಳಗಿನ ದೃಶ್ಯ ಕಂಡು ಸ್ಥಳೀಯರು ಶಾಕ್ ಆಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.