Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸ್ನೇಹ ಎಂಬುದು ಅದ್ಭುತ ಸಂಪತ್ತು. ನಿಜವಾದ ಸ್ನೇಹಿತರು ಜತೆಗಿದ್ದರೆ ಬದುಕಿಗೊಂದು ಬಲ, ಖುಷಿ. ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮ ಜತೆಗಿರುವವರು ಅತ್ಯುತ್ತಮ ಸ್ನೇಹಿತರು. ಕಷ್ಟವಿರಲಿ, ಸುಖವಿರಲಿ ನಿಜವಾದ ಸ್ನೇಹಿತರು ಸದಾ ನಮಗೆ ಬಲವಾಗಿ ಇರುತ್ತಾರೆ. ಈ ಬಾಂಧವ್ಯವೇ ಸುಂದರ, ಈ ಸಂಬಂಧವೇ ಅಪ್ಯಾಯಮಾನ.ಗೆಳೆತನ ಎಂದರೇನೇ ಹೃದಯಂತರಾಳದ ಸಂಬಂಧ. ಇಂತಹ ಸುಂದರ ಗೆಳೆತನದ ದೃಶ್ಯಗಳನ್ನು ಕಂಡಾಗಲೂ ನಾವು ಒಂದು ಕ್ಷಣ ಭಾವುಕರಾಗುತ್ತೇವೆ. ಹೀಗೆ, ಭಾವನಾತ್ಮಕವಾಗಿ ನಮ್ಮನ್ನು ಸೆಳೆಯುವಂತಹ ಸಾಕಷ್ಟು ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಸದಾ ಕಾಣಸಿಗುತ್ತದೆ. ಸದ್ಯ ಅಂತಹದ್ದೇ ಇನ್ನೊಂದು ವಿಡಿಯೋ ಈಗ ನೆಟ್ಟಿಗರ ಹೃದಯ ಗೆದ್ದಿದೆ..ಇಲ್ಲೊಬ್ಬ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಅಮೆರಿಕದಿಂದ ಪುಣೆಗೆ ಬಂದಿದ್ದಾನೆ. 12,800 ಕಿಲೋಮೀಟರ್ (8,000 ಮೈಲಿ) ಪ್ರಯಾಣ ಮಾಡಿ ತನ್ನ ಸ್ನೇಹಿತನನ್ನು ಭೇಟಿ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರೇಶಿತ್ ಗುಜಾರ್ ಎಂಬ ವ್ಯಕ್ತಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸರ್ವೇಶ್ ವೈಭವ್ ತಿಖೆ ಹೆಸರಿನ ತನ್ನ ಆತ್ಮೀಯ ಸ್ನೇಹಿತನನ್ನು ಸೇರಿದಂತೆ ಇತರ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾನೆ.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಅಲ್ಲೇ ಇದ್ದವರೊಂದಿಗೆ ಮಾತನಾಡುತ್ತಾ ಕುಳಿತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಮುಖಕ್ಕೆ ಕರ್ಚಿಫ್ ಸುತ್ತಿಕೊಂಡ ವ್ಯಕ್ತಿಯೂ ಅಲ್ಲೇ ಕುಳಿತಿದ್ದ ವ್ಯಕ್ತಿಯ ಪಕ್ಕದಲ್ಲಿ ಕುಳಿತು ಅವನನ್ನು ನೋಡುತ್ತ ಇರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಗೆ ಮುಖವಾಡ ಧರಿಸಿದ ವ್ಯಕ್ತಿ ಆಪ್ತ ಸ್ನೇಹಿತ ಎಂದು ತಿಳಿದಿಲ್ಲ. 8000 ಮೈಲಿ ದಾಟಿ ತನ್ನ ಸ್ನೇಹಿತನನ್ನು ನೋಡಲು ಬಂದಿದ್ದು ಸರ್ಪ್ರೈಸ್ ನೀಡಿದ್ದಾನೆ. ಅರ್ಧ ಮುಖಕ್ಕೆ ಮುಚ್ಚಲಾದ ಕರ್ಚಿಫ್ ತೆಗೆಯುತ್ತಿದ್ದಂತೆ ಪುಣೆ ಮೂಲದ ಸ್ನೇಹಿತನಿಗೆ ಶಾಕ್ ಆಗಿದ್ದು, ಮುಖಭಾವವೇ ಬದಲಾಗಿದೆ. ಪರಸ್ಪರ ಒಬ್ಬರೊಬ್ಬರನ್ನು ಅಪ್ಪಿಕೊಳ್ಳುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
https://www.instagram.com/reel/DScT8QbCGXf/?igsh=MWY4dXExemZvanZrdA==