Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನೈಟ್ ಶಿಫ್ಟ್ ಕೆಲಸ ಮಾಡುವವರು, ಆರೋಗ್ಯದ ವಿಷ್ಯದಲ್ಲಿ ಎಚ್ಚರ- ಹೊಸ ಅಧ್ಯಯನ ಬಿಚ್ಚಿಟ್ಟಿದೆ ಆಘಾತಕಾರಿ ವಿಷಯ
ಆರೋಗ್ಯಪ್ರಮುಖಲೈಫ್‌ಸ್ಟೈಲ್

ನೈಟ್ ಶಿಫ್ಟ್ ಕೆಲಸ ಮಾಡುವವರು, ಆರೋಗ್ಯದ ವಿಷ್ಯದಲ್ಲಿ ಎಚ್ಚರ- ಹೊಸ ಅಧ್ಯಯನ ಬಿಚ್ಚಿಟ್ಟಿದೆ ಆಘಾತಕಾರಿ ವಿಷಯ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಂದಿನ ಜಾಗತೀಕರಣ ಸನ್ನಿವೇಶದಲ್ಲಿ ಪಾಳಿಗಳಲ್ಲಿ ಕೆಲಸ ಮಾಡುವ ಅಗತ್ಯ ಬಹಳ ಇದೆ. ಬೇರೆ ದೇಶಗಳ  ಜೊತೆಗೆ ಸೇರಿ ಕೆಲಸ ಮಾಡುವಾಗ ಆ ದೇಶದ ಸಮಯದ ಪ್ರಕಾರವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಕಾರ್ಮಿಕರಿಗೆ ಬಂದೇ ಬರುತ್ತದೆ. ಜಾಗತೀಕರಣ ಮಾತ್ರವಲ್ಲದೆ ಇನ್ನೂ ಕೆಲವೊಂದು ಕ್ಷೇತ್ರದಲ್ಲಿ ರಾತ್ರಿ ಪಾಳಿಯ  ಕೆಲಸಗಳು ಅಗತ್ಯವಾಗುತ್ತವೆ. ಎಲ್ಲರಿಗೂ ಹಗಲು ದುಡಿಯಬೇಕು, ರಾತ್ರಿ ನಿದ್ದೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲಾಉದ್ಯೋಗಗಳು ಹೀಗಿರುವುದಿಲ್ಲ. ರಾತ್ರಿ ಪಾಳಿ ಮಾಡುವುದು ಅನಿವಾರ‍್ಯವಾಗಿರುತ್ತದೆ.ಆದರೆ ರಾತ್ರಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯಕ್ಕೆ ಡೇಂಜರ್.

 

 ಈ ಬಗ್ಗೆ    ಮೇಯೊ ಕ್ಲಿನಿಕ್ ಪ್ರೊಸೀಡಿಂಗ್ಸ್ ಜರ್ನಲ್‌ನಲ್ ಹೊಸ ಅಧ್ಯಾಯ ಬಿಚ್ಚಿಟ್ಟಿದೆ ಆಘಾತಕಾರಿ ವಿಷಯ, ನೈಟ್ ಶಿಫ್ಟ್ ಕಿಡ್ನಿಸ್ಟೋನ್​​ಗೆ ಕಾರಣವಾಗುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯಲು ಕಾರಣವಾಗುತ್ತದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆ ಕಡಿಮೆ ಇರುತ್ತದೆ. ಅದರಿಂದ ಅಪಾಯ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.

ಸಂಶೋಧನೆ ಪ್ರಕಾರ.. ದೇಹದ ತೂಕ, ನೀರಿನ ಸೇವನೆ ಮತ್ತು ಇತರ ಜೀವನಶೈಲಿ ಅಂಶಗಳು ಕಿಡ್ನಿಸ್ಟೋನ್​ಗೆ ಪ್ರಮುಖ ಕಾರಣ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು ತಮ್ಮ ಜೀವನಶೈಲಿಯನ್ನು ಸರಿಯಾಗಿ ನಿಭಾಯಿಸಲು ಹೆಣಗಾಡುತ್ತಾರೆ. ಇದು ಅವರ ದೇಹದ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದು ನಿದ್ರೆ, ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ.

ಚೀನಾದ ಸನ್ ಯಾಟ್-ಸೆನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಪ್ರಮುಖ ಸಂಶೋಧಕ ಯಿನ್ ಯಾಂಗ್ ನೀಡಿರುವ ಮಾಹಿತಿ ಪ್ರಕಾರ.. ‘ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಮೂತ್ರಪಿಂಡದ ಕಲ್ಲುಗಳು ಬರುವ ಅಪಾಯ ಶೇಕಡಾ 15 ರಷ್ಟು ಹೆಚ್ಚಾಗಿದೆ. ಈ ಅಪಾಯವು ಧೂಮಪಾನ, ನಿದ್ರೆಯ ಕೊರತೆ, ಸಾಕಷ್ಟು ನೀರು ಸೇವನೆ ಇಲ್ಲದಿರೋದು ಮತ್ತು ಅಧಿಕ ತೂಕದಿಂದ ಸಂಭವಿಸುತ್ತದೆ ಎಂದಿದ್ದಾರೆ.

 

ಯಿನ್ ಯಾಂಗ್ ನೇತೃತ್ವದ ತಂಡವು ಸಂಶೋಧನೆ ಸಂದರ್ಭದಲ್ಲಿ ಸುಮಾರು 220,000 ಜನರಿಂದ ಡೇಟಾವನ್ನು ಸಂಗ್ರಹಿಸಿ 14 ವರ್ಷಗಳ ಕಾಲ ಅವರ ಆರೋಗ್ಯವನ್ನ ಫಾಲೋ ಮಾಡಲಾಗಿತ್ತು. ವಿಭಿನ್ನ ಕೆಲಸದ ಪಾಳಿಗಳಲ್ಲಿ ಕೆಲಸ ಮಾಡುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಯುನೈಟೆಡ್ ಸ್ಟೇಟ್ಸ್‌ನ ಮೇಯೊ ಕ್ಲಿನಿಕ್‌ನಲ್ಲಿ ನೆಫ್ರಾಲಜಿ ಮತ್ತು ಅಧಿಕ ರಕ್ತದೊತ್ತಡ ವಿಭಾಗದ ಫೆಲಿಕ್ಸ್ ನಾಫ್ ಪ್ರಕಟಿಸಿದ ಸಂಪಾದಕೀಯದಲ್ಲಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರ ಮೇಲೆ ಸಿರ್ಕಾಡಿಯನ್ ಬ್ಯಾಲೆನ್ಸ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಒತ್ತಿ ಹೇಳಲಾಗಿದೆ.

 

TAGGED:#Nightshift #workers #health #chapter #revealed #shockingfact
Share This Article
Facebook Twitter Copy Link Print
Previous Article ಮಹಿಳೆಯೊಂದಿಗೆ ಸೇಬು ಹಣ್ಣಿಗಾಗಿ ಹಠ ಹಿಡಿದ ಮರಿಯಾನೆ – ವೈರಲ್ ವಿಡಿಯೋ ನೋಡಿ
Next Article Actress Ragini Dwivedi ಕಷ್ಟ ಕಾಲದಲ್ಲಿ ಕನ್ನಡ ಚಿತ್ರರಂಗದವರು ಕೈಹಿಡಿಯಲಿಲ್ಲ: ರಾಗಿಣಿ‌ ಕಣ್ಣೀರು

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?