Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಾಮರಾಜನಗರ: ಗಡಿಜಿಲ್ಲೆಯಲ್ಲಿ ಹುಲಿಗಳ ಓಡಾಟದಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇದೀಗ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳ ಗ್ರಾಮಸ್ಥರಲ್ಲಿ ತೀವ್ರ ವ್ಯಾಘ್ರಾತಂಕ ಮನೆ ಮಾಡಿದೆ.
ಒಂದಲ್ಲ, ಎರಡಲ್ಲ.. 5 ಹುಲಿಗಳು ಹಾದುಹೋದ ದೃಶ್ಯ ನಂಜದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಜಮೀನಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಾಮರಾಜನಗರ ತಾಲೂಕಿನ ನಂಜದೇವಪುರದ ಜಮೀನಿನ ಪಕ್ಕವೇ ಆನೆಮಡುವಿನ ಕೆರೆಯಿದ್ದು, ಅಲ್ಲಿಂದ 5 ಹುಲಿಗಳು ತೆರಳುವಾಗ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ. ಕೆರೆ ಬಳಿ ಹುಲಿಗಳು ಪ್ರತ್ಯಕ್ಷವಾಗಿದ್ದನ್ನು ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನಂಜದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್ಟಿ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ತೀವ್ರ ಕೂಂಬಿಂಗ್ ನಡೆಸಿದ್ದರಾದರೂ ಸೆರೆಯಾಗಿರಲಿಲ್ಲ. ಈಗ ಮತ್ತೆ ಹುಲಿಗಳು ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮೂಡುಗೂರು ಗ್ರಾಮದಲ್ಲಿ ಹಾಡಹಗಲೇ ಹುಲಿಯೊಂದು ದಾಳಿ ನಡೆಸಿ, ಎರಡು ಹಸುಗಳನ್ನು ಬಲಿ ಪಡೆದ ಘಟನೆ ಗುರುವಾರ ನಡೆದಿತ್ತು. ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾ ಟ್ರಾಪ್ನಲ್ಲಿ ಬೇಟೆಯಾಡಿದ್ದ ಹಸುವನ್ನು ಮತ್ತೆ ತಿನ್ನಲು ಬಂದ ಹುಲಿರಾಯನ ದೃಶ್ಯ ಸೆರೆಯಾಗಿದೆ.
King Khan ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಕಿಂಗ್ ಸಿನಿಮಾದ ಹಾಡು! ಅಸಲಿಗೆ ಆಗಿದ್ದೇನು..? ವಿಡಿಯೋ ನೋಡಿ
Doddabommaiah passes away ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ