Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಅದೆಷ್ಟೋ ಜನರ ಗಮನ ಸೆಳೆದಿದ್ದ ರುಕ್ಮಿಣಿ ವಸಂತ್ ಅವರು ಬಳಿಕ ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1ನಲ್ಲಿ ಕನಕವತಿ ಎಂಬ ಪಾತ್ರದ ಮೂಲಕ ಮಿಂಚಿದ್ದಾರೆ. ಇದೀಗ ರುಕ್ಮಿಣಿ ವಸಂತ್ ಅವರು ತಮ್ಮ ಗ್ಲಾಮರಸ್ ಹಾಗೂ ಎಲಿಗಂಟ್ ಫೋಟೋಶೂಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ದಿ ಹಾಲಿವುಡ್ ರಿಪೋರ್ಟರ್‌ನಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ಈ ನಟಿ, ಇದೀಗ ಕಪ್ಪು ಬಿಳುಪಿನ ಸರಳ ಸುಂದರ ಉಡುಪಿನಲ್ಲಿ ಮಿಂಚುತ್ತಿದ್ದಾರೆ.
ರುಕ್ಮಿಣಿ ವಸಂತ್, ಅದಕ್ಕೆ ತಕ್ಕಂತೆ ಕನಿಷ್ಠ ಆಭರಣಗಳನ್ನು ಧರಿಸಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಕೂದಲನ್ನು ಸಡಿಲವಾಗಿ ಕಟ್ಟಿ, ಮುಖದ ಮೇಲೆ ಜಾರುವ ಕೆಲವು ಕೂದಲ ಎಳೆಗಳು ಅವರ ಈ ಲುಕ್‌ಗೆ ಹಳ್ಳಿಗಾಡಿನ ಮುಗ್ಧತೆ ಹಾಗೂ ಆಧುನಿಕತೆಯ ಸ್ಪರ್ಶ ನೀಡಿದೆ.
ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಂದಲೂ ಅವರಿಗೆ ದೊಡ್ಡ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಜೂನಿಯರ್ ಎನ್‌ಟಿಆರ್ ನಟನೆಯ, ತಾತ್ಕಾಲಿಕವಾಗಿ ‘ಡ್ರ್ಯಾಗನ್’ ಎಂದು ಹೆಸರಿಡಲಾದ ಬಹುನಿರೀಕ್ಷಿತ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
https://youtube.com/@newsics_karunadu?si=LCYTsfkEwBnM7Hjh
https://www.instagram.com/p/DScgKGYDFI8/?igsh=bmtlMnlrd2thYjJ3