Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಾಹನ ಎಮಿಷನ್‌ ಟೆಸ್ಟ್‌ ದರ ಹೆಚ್ಚಳ ಸಾಧ್ಯತೆ..
ಪ್ರಮುಖವೈರಲ್

ವಾಹನ ಎಮಿಷನ್‌ ಟೆಸ್ಟ್‌ ದರ ಹೆಚ್ಚಳ ಸಾಧ್ಯತೆ..

Share
2 Min Read
SHARE

newsics.com

ನಿಮ್ಮ ವಾಹನಗಳಿಗೆ ಪರಿಸರ ಮಾಲಿನ್ಯದ ಸ್ಥಿತಿಗತಿ ಪತ್ರ ಕಡ್ಡಾಯ. ಈ ಪ್ರಮಾಣ ಪತ್ರವನ್ನು ಸಂಚಾರ ಪೊಲೀಸರು ವಾಹನ ತಪಾಸಣೆ ವೇಳೆ ಕೇಳಬಹುದು. ಅಲ್ಲದೇ ಸಾರಿಗೆ ಅಧಿಕಾರಿಗಳೂ ವಾಹನ ತಪಾಸಣೆ ಮಾಡುವಾಗ ಕೇಳಿ ಪಡೆಯಬಹುದು. ಇದು ಇಲ್ಲದೇ ಇದ್ದರೆ ದಂಡ ವಿಧಿಸಲು ಅವಕಾಶವಿದೆ. ಅದು ಮೊದಲ ಬಾರಿ ಒಂದು ಸಾವಿರ ರೂ. ದಂಡ. ಆನಂತರ ಇನ್ನೂ ಹೆಚ್ಚಾಗಲಿದೆ. ನಿಮ್ಮ ವಾಹನ ಸ್ಥಿತಿಗತಿಯಲ್ಲಿ ಇದೆಯೇ. ಪರಿಸರ ಮಾಲಿನ್ಯ ಮಾಡುತ್ತಿಲ್ಲವೇ ಎನ್ನುವುದನ್ನು ಇದು ದೃಢಪಡಿಸಲಿದೆ. ಇದನ್ನು ಎಮಿಷನ್‌ ಟೆಸ್ಟ್‌ ಎಂದು ಕರೆಯಲಾಗುತ್ತದೆ.

ಈ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ವಾಹನಗಳಿಗೆ ಇಂತಿಷ್ಟು ದರ ನಿಗದಿ ಮಾಡಲಾಗಿದೆ. ಸಾರಿಗೆ ಕಚೇರಿಯಿಂದಲೇ ಮಾಲಿನ್ಯ ನಿಯಂತ್ರಣದ ಸ್ಥಿತಿಗತಿ ಪ್ರಮಾಣಪತ್ರದ ಮೂಲಕ ವರದಿ ನೀಡುವ ಕೇಂದ್ರಗಳು ಕರ್ನಾಟಕದ ನಾನಾ ಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಈಗ ಈ ತಪಾಸಣೆ ದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ.
ಕರ್ನಾಟಕ ಹೊರಸೂಸುವಿಕೆ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘಗಳು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಬಾಡಿಗೆ, ಹೊರಸೂಸುವಿಕೆ ಪರಿಶೀಲನಾ ಉಪಕರಣಗಳು, ಸಂಬಳ ಮತ್ತು ಖರ್ಚು ವೆಚ್ಚ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ನೀಡಿ ದರಗಳನ್ನು ಪರಿಷ್ಕರಿಸುವಂತೆ ವಿನಂತಿಸಿವೆ. ‘ಮಾಲಿನ್ಯ ನಿಯಂತ್ರಣ’ ಪ್ರಮಾಣಪತ್ರದ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸುಮಾರು ಮೂರು ವರ್ಷಗಳ ಹಿಂದೆ ದರಗಳನ್ನು ಹೆಚ್ಚಿಸಲಾಗಿದೆ. ಈಗ ದರ ಪರಿಷ್ಕರಣೆಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಸಂಘದ ಸದಸ್ಯರೊಬ್ಬರು ತಿಳಿಸಿದ್ದಾಗಿ ವರದಿ ಮಾಡಿದೆ.
ಇಲ್ಲಿಯವರೆಗೆ, ದ್ವಿಚಕ್ರ ವಾಹನಗಳು 65 ರೂ, ಆಟೋಗಳು 75 ರೂ, ನಾಲ್ಕು ಚಕ್ರಗಳ ಪೆಟ್ರೋಲ್ ವಾಹನಗಳು 115 ರೂ ಮತ್ತು ಡೀಸೆಲ್ ವಾಹನಗಳು ಪಿಯುಸಿ ಪ್ರಮಾಣಪತ್ರಗಳಿಗೆ 160 ರೂ ಪಾವತಿಸುತ್ತಿವೆ. ದ್ವಿಚಕ್ರ ವಾಹನಗಳ ಹೊರಸೂಸುವಿಕೆ ದರ ಪ್ರಮಾಣ ಪತ್ರ ನೀಡುವ ದರವನ್ನು 110 ರೂ.ಗೆ , ಆಟೋಗಳಿಗೆ 100 ರೂ. ಕ್ಕೆ, ನಾಲ್ಕು ಚಕ್ರಗಳ ಪೆಟ್ರೋಲ್ ಮತ್ತು ಸಿಎನ್‌ ಜಿ ವಾಹನಗಳ ಹೊರಸೂಸುವಿಕೆ ದರವನ್ನು 200ಕ್ಕೆ ಮತ್ತು ಡೀಸೆಲ್ ವಾಹನಗಳ ಹೊರಸೂಸುವಿಕೆ ಪ್ರಮಾಣ ಪತ್ರ ನೀಡುವ ದರವನ್ನು 250 ರೂ.ಗೆ ಹೆಚ್ಚಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.

TAGGED:Vehicle emission test rate likely to increase
Share This Article
Facebook Twitter Copy Link Print
Previous Article ಬಸ್ ನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ : ಸಮಯಪ್ರಜ್ಞೆ ಮೆರೆದ ಬಸ್‌ ಚಾಲಕ!
Next Article ಪ್ರತಿ ಗಂಟೆಗೆ 26 ಮಂದಿ ನೀರಿನಲ್ಲಿ ಮುಳುಗಿ ಸಾವು!

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?