Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಪ್ರತಿದಿನ ಆಫೀಸ್‌ಗೆ ಮುಂಚೆ ಬರುತ್ತಿದ್ದ ಮಹಿಳಾ ಉದ್ಯೋಗಿ ವಜಾ!
ವಿದೇಶ

ಪ್ರತಿದಿನ ಆಫೀಸ್‌ಗೆ ಮುಂಚೆ ಬರುತ್ತಿದ್ದ ಮಹಿಳಾ ಉದ್ಯೋಗಿ ವಜಾ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮಹಿಳೆ ಕಳೆದ ಎರಡು ವರ್ಷಗಳಿಂದ ಪ್ರತಿದಿನವೂ ಆಫೀಸಿಗೆ 40 ನಿಮಿಷ ಮುಂಚಿತವಾಗಿ ಬರುತ್ತಿದ್ದ  ಕಾರಣಕ್ಕೆ ಕೆಲಸದಿಂದ ತೆಗೆದಿದ್ದು,.ಕಂಪನಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ರೆ, ಆ ನ್ಯಾಯಾಲಯ ಕೂಡ ಮಹಿಳೆಗೇ ಶಾಕ್‌ ನೀಡಿದೆ.

ಸ್ಪೇನ್‌ನಲ್ಲಿ 22 ವರ್ಷದ ಮಹಿಳಾ ಉದ್ಯೋಗಿ ಕಳೆದ ಎರಡು ವರ್ಷಗಳಿಂದ ಕಚೇರಿಗೆ ಮುಂಚಿತವಾಗಿಯೇ ಬರುತ್ತಿದ್ದಳು. ಈಕೆಯ ಆಫೀಸ್‌ ಶುರುವಾಗುವುದು ಬೆಳಗ್ಗೆ 7.30ಕ್ಕೆ. ಆದರೆ ಈ ಮಹಿಳೆ ಕಚೇರಿ ತಲುಪೋದು ಬೆಳಗ್ಗೆ 6.45 ಅಥವಾ 7ಗಂಟೆಗೆ ಆಗಿತ್ತು. ಇದೇ ಕಾರಣ ಇಟ್ಟುಕೊಂಡು ಆಕೆಯನ್ನ ಕೆಲಸದಿಂದ ತೆಗೆದಿರುವ ಕಂಪನಿ ಆಕೆ ಪ್ರತಿದಿನ ಬೇಗನೇ ಆಫೀಸಿಗೆ ಬಂದರೂ, ಆ ಸಮಯದಲ್ಲಿ ಮಾಡಲು ಏನೂ ಕೆಲಸ ಇರಲಿಲ್ಲ ಎಂದು ಹೇಳಿಕೊಂಡಿದೆ.

ಕಂಪನಿಗೆ ಅಷ್ಟು ಬೇಗ ಬರೋದು ಬೇಡ ಎಂದು ಮಹಿಳೆಗೆ ಆಕೆಯ ಬಾಸ್‌ ಪದೇಪದೆ ಹೇಳಿದ್ದಾರೆ. ಆದರೆ ಆಕೆ ಕೇಳಲಿಲ್ಲ. ಇದು ಸರಿಯಾದ ವರ್ತನೆ ಅಲ್ಲ, ಕಂಪನಿ ನಿಯಮಗಳನ್ನ ಮುರಿದಂತೆ ಎಂದು ಹೇಳಿರುವ ಬಾಸ್‌ ಕೊನೆಗೆ ಅವಳನ್ನ ಕೆಲಸದಿಂದ ತೆಗೆದುಹಾಕಿದ್ದಾರೆ.

ತನ್ನನ್ನ ಕೆಲಸದಿಂದ ತೆಗೆದ ಕಂಪನಿ ವಿರುದ್ಧ ಮಹಿಳೆ ಕೋರ್ಟ್‌ ಮೆಟ್ಟಿಲೇರಿದ್ದಳು. ನನ್ನನ್ನ ಕೆಲಸದಿಂದ ತೆಗೆದಿದ್ದು ಅನ್ಯಾಯ ಎಂದು ವಾದಿಸಿದ್ದಳು. ಸ್ಪೇನ್‌ನ ಅಲಿಕಾಂಟೆಯ ಸಾಮಾಜಿಕ ನ್ಯಾಯಾಲಯವು ಕಂಪನಿಯ ಪರವಾಗಿಯೇ ನಿಂತಿದೆ. ಹಲವು ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳ ಹೊರತಾಗಿಯೂ ಬೇಗನೆ ಬರುವುದನ್ನು ಮುಂದುವರಿಸಿದ್ದು ಯಾಕೆ ಎಂದು ನ್ಯಾಯಾಧೀಶರು ಮಹಿಳೆ ಬಳಿ ಕೇಳಿದ್ದಾರೆ.

ಇನ್ನು ಈ ಉದ್ಯೋಗಿ ಕಚೇರಿಗೆ ಬೇಗನೇ ಬರುವುದಲ್ಲದೆ, ಸುಮಾರು 19 ಸಲ, ಕಂಪನಿಯ ಕ್ಯಾಂಪಸ್‌ ತಲುಪುವ ಮೊದಲೇ ಆಪ್‌ ಮೂಲಕ ಲಾಗಿನ್‌ ಆಗಲು ಯತ್ನಿಸಿದ ಘಟನೆಗಳೂ ನಡೆದಿವೆ. ಯುವತಿಯು ನಂಬಿಕೆ, ವಿಶ್ವಾಸ ದ್ರೋಹ ಮಾಡಿದ್ದಾಳೆ ಎಂದೂ ಕಂಪನಿ ಮುಖ್ಯಸ್ಥ ಆರೋಪ ಮಾಡಿದ್ದಾರೆ. ಇನ್ನು ನ್ಯಾಯಾಲಯವು ಯುವತಿಯನ್ನ ವಜಾಗೊಳಿಸಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದೆ. ಯುವತಿ ಸಮಯ ಪಾಲನೆ ಮಾಡಿದ್ದು ತಪ್ಪಲ್ಲ. ಆದರೆ ಕೆಲಸದ ನಿಯಮಗಳನ್ನ, ಬಾಸ್‌ ನೀಡಿದ ಎಚ್ಚರಿಕೆಗಳನ್ನ ಮೀರಿದ್ದು ತಪ್ಪು ಎಂದು ಕೋರ್ಟ್‌ ಹೇಳಿದೆ.

 

TAGGED:#female #employee #office #fired #court
Share This Article
Facebook Twitter Copy Link Print
Previous Article ಜಪಾನ್ ನಲ್ಲಿ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ : ವೈರಲ್ ವಿಡಿಯೋ ನೋಡಿ
Next Article ಪೋರ್ನ್ ಸ್ಟಾರ್ ಆಗಬೇಕೆಂದು ಪತ್ನಿಯ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪತಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?