Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಗಳನ್ನು ಅಸಭ್ಯವಾಗಿ ಮುಟ್ಟಿದ್ದಕ್ಕೆ ಲಿವ್ ಇನ್ ಪಾರ್ಟ್‌ನರ್‌‌ನನ್ನು ಕೊಂದ ಎರಡು ಮಕ್ಕಳ ತಾಯಿ
ದೇಶಪ್ರಮುಖ

ಮಗಳನ್ನು ಅಸಭ್ಯವಾಗಿ ಮುಟ್ಟಿದ್ದಕ್ಕೆ ಲಿವ್ ಇನ್ ಪಾರ್ಟ್‌ನರ್‌‌ನನ್ನು ಕೊಂದ ಎರಡು ಮಕ್ಕಳ ತಾಯಿ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತನ್ನ ಮಗಳನ್ನು ಅಸಭ್ಯವಾಗಿ ಸ್ಪರ್ಶಿಸಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಲಿವ್ ಇನ್ ಪಾರ್ಟನರ್‌ನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಆದರೆ ಕೊಲೆಯಾದ ಲೀವಿಂಗ್ ಪಾರ್ಟನರ್‌ನ ತಂದೆ ಬೇರೆಯದೇ ಆರೋಪ ಮಾಡಿದ್ದು, ಆತನ ಹೆಸರಿನಲ್ಲಿದ್ದ ಮನೆಯನ್ನು ವಶಕ್ಕೆ ಪಡೆದುಕೊಳ್ಳುವುದಕ್ಕಾಗಿ ಆಕೆ ಹಾಗೂ ಮಕ್ಕಳು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

46 ವರ್ಷದ ರತ್ನ ಕೊಲೆ ಮಾಡಿದ ಮಹಿಳೆ 33 ವರ್ಷದ ಇಂಜಿನಿಯರ್ ಸೂರ್ಯ ಪ್ರತಾಪ್ ಸಿಂಗ್ ಕೊಲೆಯಾದ ಆರೋಪಿ.

ಪೊಲೀಸರ ವಿಚಾರಣೆ ವೇಳೆ ರತ್ನಾ, ಸೂರ್ಯ ಪ್ರತಾಪ್ ತನ್ನ ಹಿರಿಯ ಮಗಳನ್ನು ಅಸಭ್ಯವಾಗಿ ಸ್ಪರ್ಶಿಸಿದ. ಇದೇ ಕಾರಣಕ್ಕೆ ಆತನ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಆಕೆ ಹಾಗೂ ಆಕೆಯ ಇಬ್ಬರು ಮಕ್ಕಳು ಸೇರಿ ಸೂರ್ಯನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಆದರೆ ಆತನ ಹೆಸರಿನಲ್ಲಿದ್ದ ಮನೆಯನ್ನು ಕಬಳಿಸುವುದಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಸೂರ್ಯಕುಮಾರ್ ಸಂಬಂಧಿಗಳು ಆರೋಪಿಸಿದ್ದಾರೆ.

ರತ್ನಾ ಪೊಲೀಸರ ವಿಚಾರಣೆ ವೇಳೆ ನೀಡಿದ ಮಾಹಿತಿಯ ಪ್ರಕಾರ, ಸೂರ್ಯ ಆಕೆಯ ಹಿರಿಯ ಮಗಳನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಆಕೆ ವಿರೋಧಿಸಿದಾಗ ಆಕೆಯನ್ನು ಥಳಿಸಿದ್ದಾನೆ. ಡಿಸೆಂಬರ್ 7ರಂದು ಆತ ರತ್ನಾಳ ಹಿರಿಯ ಮಗಳ ಫೋನ್‌ನಲ್ಲಿ ಫೋಟೋವೊಂದನ್ನು ನೋಡಿದ‌ ನಂತರ ಆತ ಆಕೆಯನ್ನು ರೂಮ್‌ಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ರತ್ನಾ ಹಾಗೂ ಕಿರಿಯ ಮಗಳು ಮಧ್ಯಪ್ರವೇಶಿಸಿದ್ದು, ಇದೇ ವೇಳೆ ರತ್ನ ಸೂರ್ಯನ ಕತ್ತಿಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದಾಳೆ.

ಸೂರ್ಯ ರತ್ನಾಳ ಹೆಣ್ಣು ಮಕ್ಕಳನ್ನು ಬಂಧಿಸಿ, ಮೂರು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲ್ವಿಚಾರಣೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಅವನು ಆ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಿದ್ದ ಮತ್ತು ಹಿರಿಯ ಮಗಳ ಶಿಕ್ಷಣವನ್ನು ವಿಳಂಬಗೊಳಿಸಿ, ಈ ವರ್ಷ ಆಕೆಯನ್ನು12 ನೇ ತರಗತಿಗೆ ಸೇರಿಸಿದ್ದ. ಈ ದೀರ್ಘಕಾಲದ ನಿಯಂತ್ರಣವು ಹೆಣ್ಣುಮಕ್ಕಳು ಮತ್ತು ರತ್ನ ಇಬ್ಬರಿಗೂ ಸೂರ್ಯನ ಮೇಲೆ ಕೋಪ ಹೆಚ್ಚಾಗಲು ಕಾರಣ ಆಯ್ತು ಎಂದು ವರದಿಯಾಗಿದೆ.

ಸೂರ್ಯ ತನ್ನ ಸ್ವಂತ ಭೂಮಿಯಲ್ಲಿ ನಿರ್ಮಿಸಿದ್ದ ಮನೆಯಲ್ಲಿ ವಾಸ ಮಾಡುತ್ತಿದ್ದ. ಆದರೆ ಈ ಮನೆ ನಿರ್ಮಾಣಕ್ಕೆ ರತ್ನ ಆರ್ಥಿಕ ನೆರವು ನೀಡಿದ್ದಳು. ಆಕೆಯ ಮೊದಲ ಪತಿಯ ಸಾವಿನ ನಂತರ ಬಂದ ಹಣವನ್ನು ಆಕೆ ಆ ಮನೆ ನಿರ್ಮಾಣ ಕೆಲಸಕ್ಕೆ ಹಾಕಿದ್ದಳು. ಆದರೆ ಈ ಮನೆ ಹಾಗೂ ಒಂದು ಕಾರಿನ ಮಾಲೀಕತ್ವವನ್ನು ತನ್ನ ಹೆಸರಿಗೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರತ್ನ ಹಾಗೂ ಸೂರ್ಯಕುಮಾರ್ ಮಧ್ಯೆ ಆಗಾಗ ಗಲಾಟೆಗಳಾಗುತ್ತಿದ್ದವು ಎಂದು ತಿಳಿದು ಬಂದಿದೆ.

ಸೂರ್ಯ ಜಾನಕಿಪುರ ನಿವಾಸಿಯಾಗಿದ್ದು,ರತ್ನಾಳನ್ನು 2012ರಲ್ಲಿ ಆಕೆಯ ಮಕ್ಕಳಿಬ್ಬರಿಗೆ ಟ್ಯೂಷನ್ ನೀಡುತ್ತಿದ್ದ ವೇಳೆ ಮೊದಲ ಬಾರಿ ಭೇಟಿಯಾಗಿದ್ದ. ಆಕೆ ಆಗ ಆಕೆಯ ಕುಡಕ ಪತಿ ರಾಜೇಂದ್ರನಿಂದ ದೂರಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಆಕೆಯ ಪತಿ ರಾಜೇಂದ್ರ ಎರಡು ವರ್ಷದ ನಂತರ 2014ರಲ್ಲಿ ಸಾವಿಗೀಡಾಗಿದ್ದರು. ಇದೇ ಸಮಯದಲ್ಲಿ ಸೂರ್ಯ ಸಲಾರ್‌ಗಂಜ್‌ನ ಗ್ರೀನ್ ಸಿಟಿಯಲ್ಲಿ ಮನೆಯೊಂದನ್ನು ನಿರ್ಮಾಣ ಮಾಡಿದ್ದ. ಈ ಮನೆಗೆ ರತ್ನ ಹಾಗೂ ಆಕೆಯ ಇಬ್ಬರು ಮಕ್ಕಳು ಬಂದು ಆತನೊಂದಿಗೆ ವಾಸ ಮಾಡಲು ಆರಂಭಿಸಿದ್ದರು.

ಸೋಮವಾರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಡಿಸೆಂಬರ್‌ 7 ರಂದು ರಾತ್ರಿ 11 ಗಂಟೆಗೆ ಈ ಕೊಲೆ ನಡೆದಿದ್ದು, ಮರು ಮರುದಿನ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದ ಆರೋಪಿ ರತ್ನ ಸೂರ್ಯಪ್ರಕಾಶ್‌ನ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ.

ರಾತ್ರಿ ಕೊಲೆ ಮಾಡಿ ಅಮ್ಮ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇಡೀ ದಿನ ರಾತ್ರಿ ಶವದೊಂದಿಗೆಯೇ ರಾತ್ರಿ ಕಳೆದು ಮರುದಿನ ಬೆಳಗ್ಗೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಪೊಲೀಸರು ರತ್ನಾ ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಎಸಗಿದ ಕೃತ್ಯದ ಬಗ್ಗೆ ಆಕೆಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Wedding ceremonies are decreasing in temples ದೇಗುಲಗಳಲ್ಲಿ ಕಡಿಮೆಯಾಗುತ್ತಿದೆ ಮದುವೆ ಸಮಾರಂಭ: ಈ ನಿರಾಸಕ್ತಿಗೇನು ಕಾರಣ?

TAGGED:#Mother #kills #live-in partner #touching #daughter #indecently #news #UP
Share This Article
Facebook Twitter Copy Link Print
Previous Article Wedding ceremonies are decreasing in temples ದೇಗುಲಗಳಲ್ಲಿ ಕಡಿಮೆಯಾಗುತ್ತಿದೆ ಮದುವೆ ಸಮಾರಂಭ: ಈ ನಿರಾಸಕ್ತಿಗೇನು ಕಾರಣ?
Next Article ಈ‌ ಜೋಡಿಯ ವಿಚ್ಛೇದನಕ್ಕೆ ಕಾರಣವಾಯ್ತು ಈರುಳ್ಳಿ- ಬೆಳ್ಳುಳ್ಳಿ, 11 ವರ್ಷದ ಸಂಸಾರಕ್ಕೇನಾಯ್ತು?

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?