Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗಂಡನ ಸಾವಿನ ನಂತರ ಅನೈತಿಕ ಸಂಬಂಧ; ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು
ದೇಶಪ್ರಮುಖ

ಗಂಡನ ಸಾವಿನ ನಂತರ ಅನೈತಿಕ ಸಂಬಂಧ; ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜೈಪುರ: ಗಂಡನ ಸಾವಿನ ನಂತರ ಅನೈತಿಕ ಸಂಬಂಧದ ಹಾದಿ ಹಿಡಿದ 35ರ ವಿಧವೆ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಮಹಿಳೆಯ ಗಂಡನ ಮನೆಯವರೇ ಬೆಂಕಿ ಹಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಬೆಂಕಿ ಹಚ್ಚಿದ್ದರಿಂದ ಗಂಭೀರ ಗಾಯಗೊಂಡ ಮಹಿಳೆಯ ಹಾಗೂ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಂಕಿಯಿಂದಾಗಿ ಶೇಕಡಾ 70ರಷ್ಟು ಸುಟ್ಟ ಗಾಯಗಳನ್ನು ಹೊಂದಿದ್ದರಿಂದ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜೈಪುರದ ದುದು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಮಹಿಳೆಯ ಗೆಳೆಯ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಹಿಳೆ ಬುಧವಾರ ನಸುಕಿನ ಜಾವ ಸಾವನ್ನಪ್ಪಿದ್ದಾಳೆ. ಸಂತ್ರಸ್ತರನ್ನು 25 ವರ್ಷದ ಕೈಲಾಶ್ ಗುರ್ಜರ್ ಹಾಗೂ 30 ವರ್ಷದ ಸೋನಿ ಎಂದು ಗುರುತಿಸಲಾಗಿದೆ. ಸಾವಿಗೂ ಮೊದಲು ಸೋನಿ ನೀಡಿದ ಹೇಳಿಕೆಯಲ್ಲಿ ಸೋನಿ ಕೈಲಾಶ್‌ನನ್ನು ಭೇಟಿ ಮಾಡುವುದಕ್ಕೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೋಗಿದ್ದಾಳೆ. ಈ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿದ್ದಾರೆ. ನಂತರ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕುಟುಂಬದ ವಿರೋಧದ ನಡುವೆಯೂ ಇವರಿಬ್ಬರು ಸಂಬಂಧದಲ್ಲಿದ್ದರು. ಇತ್ತ ಕೈಲಾಶ್‌ಗೂ ಮದುವೆಯಾಗಿದೆ. ಸೋನಿಗೆ ಮದುವೆಯಾಗಿದ್ದು, 10 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಾಳೆ. ಈಕೆಯ ಗಂಡ ಆರು ವರ್ಷಗಳ ಹಿಂದೆ ಆಕೆ 24ರ ಹರೆಯದಲ್ಲಿದ್ದಾಗ ತೀರಿಕೊಂಡಿದ್ದರು. ಇನ್ನೊಂದು ಆಘಾತಕಾರಿ ವಿಚಾರ ಎಂದರೆ ಈಕೆಯ 10 ವರ್ಷದ ಮಗನಿಗೂ ಮದುವೆ ಮಾಡಲಾಗಿದೆ.

ಮೊಖಂಪುರ ಪ್ರದೇಶದಲ್ಲಿ ಬರೊಲ್ವಾ ಗ್ರಾಮದಲ್ಲಿ ನವಂಬರ್ 28ರಂದು ರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಫಾರ್ಮೊಂದರಲ್ಲಿ ಇಬ್ಬರು ಜೊತೆಗಿರುವುದನ್ನು ನೋಡಿದ ಸೋನಿ ಅವರ ಗಂಡನ ಮನೆಯವರು ಇಬ್ಬರನ್ನು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಸೋನಿಯ ಮಾವ ಬಿರ್ದಿ ಚಂದ್ ಹಾಗೂ ಬಾವ ಗಣೇಶ್ ಗುರ್ಜರ್ ಅವರಿಗೆ ಈ ಜೋಡಿ ಜೊತೆಯಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಸುಟ್ಟಗಾಯಗಳಾಗಿದ್ದವು, ಕೈಲಾಶ್‌ಗೆ ಶೇ.90ರಷ್ಟು ಸುಟ್ಟಗಾಯಗಳಾಗಿದ್ದರೆ, ಸೋನಿ ಅವರಿಗೆ ಶೇ.70ರಷ್ಟು ಸುಟ್ಟಗಾಯಗಳಾಗಿದ್ದವು. ಅವರನ್ನು ಸವಾಯ್ ಮಾನ್‌ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಕೈಲಾಶ್ ಅವರು ಸೋಮವಾರ ರಾತ್ರಿ ಸಾವನ್ನಪ್ಪಿದ್ದರೆ, ಸೋನಿ ಅವರು ಬುಧವಾರ ನಸುಕಿನ ಜಾವ ಮೂರು ಗಂಟೆಗೆ ಸಾವನ್ನಪ್ಪಿದ್ದಾರೆ. ಮೊಖಂಪುರ ಪೊಲೀಸ್ ಸ್ಟೇಷನ್ ಇನ್‌ಚಾರ್ಜ್ ಸುರೇಶ್ ಕುಮಾರ್ ಗುರ್ಜರ್ ಈ ಬಗ್ಗೆ ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರ ಸಾವಿನ ನಂತರ ಈಗ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ದಾಳಿ ನಡೆದ 12 ಗಂಟೆಯಲ್ಲಿ ದುದು ಎಎಸ್‌ಪಿ ಶಿವಲಾಲ್ ಬಿರ್ವ ಹಾಗೂ ಡಿಎಸ್‌ಪಿ ದೀಪಕ್ ಖಂಡೆಲ್‌ವಾಲ್ ಅವರ ಅವರ ನೇತೃತ್ವದ ತಂಡ ಆರೋಪಿಗಳಾದ ಬಿರ್ಡಿ ಚಂದ್ ಹಾಗೂ ಗಣೇಶ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಈ ಆರೋಪಿಗಳಲ್ಲದೇ ಇನ್ನೂ ಅನೇಕರು ಭಾಗಿಯಾಗಿದ್ದಾರೆ ಎಂದು ಸಂತ್ರಸ್ತರ ಕುಟುಂಬದವರು ಹೇಳಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಕಳೆದ ವರ್ಷ ಸೋನಿಯ ಭಾವನ ಮಗ ಮತ್ತು ಕೈಲಾಶ್‌ನ ಸಹೋದರನ ಮಗಳ ನಡುವೆ ಪ್ರೇಮ ವಿವಾಹದ ನಂತರ ಕುಟುಂಬಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಎರಡು ಕುಟುಂಬಗಳ ಮಧ್ಯೆ ಸಂಬಂಧ ಬಿರುಕುಗೊಂಡು ಮಾತುಕತೆ ಸಂಪೂರ್ಣವಾಗಿ ನಿಲ್ಲಲು ಕಾರಣವಾಗಿತ್ತು. ಕೈಲಾಶ್ ಹತ್ಯೆ ಖಂಡಿಸಿ ಗ್ರಾಮಸ್ಥರು ಮೊಖಾಂಪುರ-ಬಿಚೊನ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಪುಟಿನ್‌ ತಂಗುವ ದೆಹಲಿ ಹೋಟೆಲ್‌ ಹೇಗಿದೆ?; ಅದರ ಬಾಡಿಗೆ ಎಷ್ಟು ?

TAGGED:Husband dies at 25in love with a young man at 30: Husband's family sets both of them on fire
Share This Article
Facebook Twitter Copy Link Print
Previous Article ಪುಟಿನ್‌ ತಂಗುವ ದೆಹಲಿ ಹೋಟೆಲ್‌ ಹೇಗಿದೆ?; ಅದರ ಬಾಡಿಗೆ ಎಷ್ಟು ?
Next Article ಬಾಬರಿ ಮಸೀದಿ ಕಟ್ಟುವುದಾಗಿ ಹೇಳಿದ್ದ ಟಿಎಂಸಿ ಶಾಸಕನಿಗೆ ಗೆಟೌಟ್‌ ಎಂದ ಮಮತಾ ಬ್ಯಾನರ್ಜಿ

Popular Posts

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

2 Min Read

You Might Also Like

ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read
ಪ್ರಮುಖಮನರಂಜನೆ

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

2 Min Read
ಪ್ರಮುಖಕರ್ನಾಟಕ

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

3 Min Read
ಕರ್ನಾಟಕಪ್ರಮುಖ

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?