Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಜೋಡಿ ಮದುವೆಯಾಗಿ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು? 
ದೇಶಪ್ರಮುಖ

ಈ ಜೋಡಿ ಮದುವೆಯಾಗಿ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು? 

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮದುವೆ ಜೋಡಿ ಕೇವಲ 20 ನಿಮಿಷದಲ್ಲಿ ವಿಚ್ಚೇದನ ಪಡೆದುಕೊಂಡ ಘಟನೆ ಉತ್ತರ ಪ್ರದೇಶದ ದಿಯೋರಾದಲ್ಲಿ ನಡೆದಿದೆ. ನೆಟ್ಟಿಗರು ಇದು ಬ್ಲಿಂಕಿಟ್ ಮದುವೆ ಎಂದು ಕಮೆಂಟ್ ಮಾಡಿದ್ದಾರೆ.

ಹೌದು, ಮದುವೆ ಮಂಟಪದಿಂದ ಗಂಡನ ಮನೆಗೆ ಬಂದು ಇನ್ನು ಡ್ರೆಸ್ ಚೇಂಜ್ ಮಾಡಿಲ್ಲ, ಅತಿಥಿಗಳು, ಸಂಬಂಧಿಕರು ಕುಡಿಯುತ್ತಿದ್ದ ಜ್ಯೂಸ್ ಗಂಟಲಿನಿಂದ ಇಳಿದಿಲ್ಲ, ಅಷ್ಟರಲ್ಲೇ ಡಿವೋರ್ಸ್ ಆದ ಘಟನೆ ನಡೆದಿದೆ.

ವಿಶಾಲ್ ಮಾಧೇಸಿಯಾ ಭಾಲೌನಿಯಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದಾನೆ. ತನ್ನ ತಂದೆಯ ಸ್ಟೋರ್‌ನಲ್ಲಿ ಪ್ರಮುಖ ಜವಾಬ್ದಾರಿಯನ್ನು ವಿಶಾಲ್ ಮಾಧೇಸಿಯಾ ನೋಡಿಕೊಳ್ಳುತ್ತಿದ್ದಾನೆ. ಈತನ ಮದುವೆ ಸಲೇಂಪುರ್ ನಿವಾಸಿ ಪೂಜಾ ಜೊತೆ ಫಿಕ್ಸ್ ಆಗಿತ್ತು. ಮದುವೆ ಫಿಕ್ಸ್ ಆದ ಬಳಿಕ ಫೋನ್ ಮೂಲಕ ಮಾತುಕತೆ, ಹರಟೆ ಎಲ್ಲವೂ ನಡೆಯುತ್ತಿತ್ತು. ಇತ್ತ ಕುಟುಂಬಸ್ಥರು, ಆಪ್ತರು ಅದ್ಧೂರಿ ಮದುವೆ ತಯಾರಿ ಮಾಡಿದ್ದರು. ಕಳೆದ ಹಲವು ತಿಂಗಳಿನಿಂದ ಎರಡೂ ಕುಟುಂಬಗಳು ಮಾತುಕತೆ ನಡೆಸಿದೆ. ಮದುವೆ, ಊಟದ ವ್ಯವಸ್ಥೆ, ಮೆನು, ಅತಿಥಿ ಸತ್ಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದೆ.
ನವೆಂಬರ್ 25ರಂದು ವರ ಮೆರವಣಿಗೆ ಮೂಲಕ ಮದುವೆ ಮಂಟಪ ತಲುಪಿದ್ದಾನೆ. ವಧುವಿನ ಕುಟುಂಬಸ್ಥರು ವರನ ಸ್ವಾಗತಿಸಿದ್ದಾರೆ. ನವೆಂಬರ್ 25ರ ಸಂಜೆ ಮದುವೆ ಆಯೋಜನೆಗೊಂಡಿತ್ತು. ಮುಹೂರ್ತದ ಪ್ರಕಾರ ಮದುವೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಎಲ್ಲಾ ಕಾರ್ಯಕ್ರಮ ಮುಗಿದಿದೆ. ನವ ಜೋಡಿಗಳು ನೇರವಾಗಿ ಮನೆಗೆ ಆಗಮಿಸಿದ್ದಾರೆ. ಇವರ ಜೊತೆಗೆ ಕುಟುಂಬಸ್ಥರು, ಆಪ್ತರು ಮನೆಗೆ ಆಗಮಿಸಿದ್ದಾರೆ.
ವಿಶಾಲ್ ಮಾಧೇಸಿಯಾ ತನ್ನ ಪತ್ನಿ ಪೂಜಾ ಕರೆದುಕೊಂಡು ಮನೆ ಒಳಗೆ ಪ್ರವೇಶಿಸಿದ್ದಾರೆ. ಗಂಡನ ಮನೆಗೆ ಬಂದ ಪೂಜಾಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.ಬಳಿಕ ನವ ಜೋಡಿಗಳನ್ನು ಅವರ ಕೋಣೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಕೋಣೆ ಪ್ರವೇಶಿಸಿದ ಕೇವಲ 20 ನಿಮಿಷದಲ್ಲಿ ಪೂಜಾ ಹೊರಬಂದಿದ್ದಾಳೆ. ಅಷ್ಟರಲ್ಲೇ ಅತಿಥಿಗಳು, ಸಂಬಂಧಿಕರು ಜ್ಯೂಸ್ ಕುಡಿಯುತ್ತಾ, ಮಾತನಾಡುತ್ತಿದ್ದರು. ಮನೆಯ ಲೀವಿಂಗ್ ಏರಿಯಾಗೆ ಬಂದ ಪೂಜಾ, ನನಗೆ ಈ ಸಂಬಂಧ ಮುಂದವರಿಸಲು ಸಾಧ್ಯವಿಲ್ಲ. ನಾನು ಈಗಲೇ ಮನೆಗೆ ಹೋಗುತ್ತೇನೆ. ಪೋಷಕರಿಗೆ ಕರೆ ಮಾಡಿ ತಿಳಿಸಿ ಎಂದಿದ್ದಾರೆ.

ಆರಂಭದಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಹಲವರು ಎಂದುಕೊಂಡಿದ್ದರು. ಆದರೆ ಪೂಜಾ ಗಂಭೀರವಾಗಿ ಹೇಳಿದ್ದಳು. ಅತ್ತ ಕೋಣೆ ಪ್ರವೇಶಿದ 10 ನಿಮಿಷಕ್ಕೆ ತಾನು ಇಲ್ಲಿರುವುದಿಲ್ಲ, ನನಗೆ ಮದುವೆ, ಸಂಬಂಧ ಬೇಡ ಎಂದಿದ್ದಾಳೆ. 10 ನಿಮಿಷ ವಿಶಾಲ್ ಮನ ಒಲಿಸಲು ಪ್ರಯತ್ನಿಸಿದ್ದಾನೆ. ಸಾಧ್ಯವಾಗಿಲ್ಲ. 20 ನಿಮಿಷಕ್ಕೆ ಹೊರಬಂದು ಪೂಜಾ ತನ್ನ ನಿರ್ಧಾರ ಸ್ಪಷ್ಟಪಡಿಸಿದ್ದಾಳೆ. ಪೂಜಾ ಪೋಷಕರು, ಕುಟುಂಬಸ್ಥರು ಆಗಮಿಸಿದ್ದರೆ. ಸತತ 5 ಗಂಟೆಗಳ ಕಾಲ ಮನ ಒಲಿಸುವ ಪ್ರಯತ್ನ ನಡೆದಿದೆ. ಆಗಿಲ್ಲ. ಪೂಜಾ ಕಾರಣವನ್ನೂ ಹೇಳುತ್ತಿಲ್ಲ. ಆದರೆ ಸಂಬಂಧ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಅಷ್ಟೊತ್ತಿಗೆ ಬೆಳಗಿನ ಜಾವವಾಗಿದೆ. ಪಂಚಾಯಿತಿ ಮಾಡಲು ಗ್ರಾಮದ ಹಿರಿಯರನ್ನು ಆಹ್ವಾನಿಸಿದ್ದಾರೆ. ಸತತ ಮಾತುಕತೆ ಬಳಿಕ ಕೊನೆಗೆ ಡಿವೋರ್ಸ್ ಘೋಷಿಸಲಾಗಿದೆ. ಇಬ್ಬರು ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ್ದಾರೆ. ನೆಟ್ಟಿಗರು ಇದು ಬ್ಲಿಂಕಿಟ್‌ಗಿಂತ ಫಾಸ್ಟ್ ಮದುವೆ ಎಂದು ಕರೆದಿದ್ದಾರೆ. ಸದ್ಯ ಕೊನೆಗೆ ಉಳಿದಿರುವ ಪ್ರಶ್ನೆ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು? ಈಗಲೂ ಬಹಿರಂಗವಾಗಿಲ್ಲ.

https://x.com/gharkekalesh/status/1995377038820360464?ref_src=twsrc%5Etfw%7Ctwcamp%5Etweetembed%7Ctwterm%5E1995377038820360464%7Ctwgr%5E7ef61d49b57d3e68f346d92191d83d0e9c8fe9f4%7Ctwcon%5Es1_c10&ref_url=https%3A%2F%2Fkannada.asianetnews.com%2Findia-news%2Fblinkit-marriage-newlywed-couple-marriage-ends-in-20-minutes-after-reach-home-up%2Farticleshow-3d9gy73

ಪರಿಚಯವಾದ 4 ಗಂಟೆಯಲ್ಲಿ ಮದುವೆ; 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ

TAGGED:What is the reason why this couple got divorced 20 minutes after getting married?
Share This Article
Facebook Twitter Copy Link Print
Previous Article ಪರಿಚಯವಾದ 4 ಗಂಟೆಯಲ್ಲಿ ಮದುವೆ; 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ
Next Article ದಿತ್ವಾ ಚಂಡಮಾರುತದಿಂದ ತತ್ತರಿಸಿದ ಜನರಿಗೆ ಸಹಾಯ ಹಸ್ತ ಚಾಚಿದ ಮೊದಲ ದೇಶ ಭಾರತ’ ; ಶ್ರೀಲಂಕಾ ಭಾವನಾತ್ಮಕ ಸಂದೇಶ!

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?